ಲಿಂಗಾಯತ ಮಹಿಳಾ ಸಮಾಜದ ರಜತ್ ಮಹೋತ್ಸವ ಕಾರ್ಯಕ್ರಮ: ವಾರಕ್ಕೆ ಒಮ್ಮೆ ಬಸವಣ್ಣನವರ ವಚನ ಪಠಣವಾಗಲಿ ಮಹಿಳಾ ಸಮಾಜ ಅನ್ನದಾಸೋಹಕ್ಕೆ ಮುಂದಾದಲ್ಲಿ ಸಹಾಯ: ಮೆಳ್ಳಿಗೇರಿ

ಬೆಳಗಾವಿ : ಲಿಂಗಾಯತ ಮಹಿಳಾ ಸಮಾಜವು ಜಿಲ್ಲೆಯ ಅಕ್ಷಯಪಾತ್ರೆಯ ಯೋಜನೆಯೊಂದಿಗೆ ಕೈಜೋಡಿಸಿ ಶಾಲಾ ಮಕ್ಕಳಿಗಾಗಿ ಅನ್ನದಾಸೋಹ ಕಾರ್ಯಕ್ಕೆ ಮುಂದಾದಲ್ಲಿ ಏಕಸ್ ಪೌಂಡೇಶನದಿಂದ ಸಮಾಜಕ್ಕೆ ಸಹಾಯಹಸ್ತ ನೀಡುವದಾಗಿ ಏಕಸ್ ಪೌಂಡೇಶನ್ ಅಧ್ಯಕ್ಷೆಯಾದ ಅಕ್ಕಮಹಾದೇವಿ ಮೆಳ್ಳಿಗೇರಿ ಇಂದಿಲ್ಲಿ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಜಿರಗಿ ಸಭಾಭವನದಲ್ಲಿ ಮಂಗಳವಾರ 21ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾದ ಲಿಂಗಾಯತ ಮಹಿಳಾ ಸಮಾಜದ 25ನೇ ಬೆಳ್ಳಿ-ಬೆಳಗು ಹಾಗೂ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಏಕಸ್ ಪೌಂಡೇಶನ್ದಿಂದ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳ ಜೊತೆಗೆ ಲಿಂಗಾಯತ ಮಹಿಳಾ ಸಮಾಜವು ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಅನ್ನದಾಸೋಹ ಕಾರ್ಯಕ್ಕೆ ಮುಂದಾದಲ್ಲಿ ಏಕಸ್ ಪೌಂಡೇಶನದಿಂದ ಎಲ್ಲ ಸಹಕಾರ ನೀಡುವೆ. ಅಲ್ಲದೆ ಶಾಲೆಗಳಿಗೆ ತೆರಳಿ ಮಕ್ಕಳಿಗೆ ವರ್ಷಕ್ಕೆ ಒಂದು ಬಾರಿ ಪ್ರಬಂಧ ಸ್ಪಧರ್ೆ ಹಾಗೂ ವಾರಕ್ಕೆ ಒಮ್ಮೆಯಾದರು ಬಸವಣ್ಣನವರ ವಚನಗಳನ್ನು ಪಠನ ಮಾಡುವ ಕಾಯಕ ಮಾಡುವಂತೆ ಕಿವಿಮಾತು ಹೇಳಿದರು.

ಸಮಾನತೆಯನ್ನು ಸಾರುವ ಮೂಲಕ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಲು ಶ್ರಮಿಸಿದ ಬಸವಣ್ಣನವರ ವಚನಗಳು ಸಾರ್ವಕಾಲಿಕ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಚನ ಪಠಣ ಮಾಡಬೇಕೆಂದು ಹೇಳಿದರು. ಲಿಂಗಾಯತ ಧರ್ಮವನ್ನು ಗಟ್ಟಿಗೊಳಿಸಿ ಸಮಾನತೆ ಸಾರುತ್ತಿರುವ ಜನರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕಿದೆ. ಸಮಾಜ ಸೇವೆಯಲ್ಲಿ ಬೆಳಗಾವಿಯ ಲಿಂಗಾಯತ ಮಹಿಳಾ ಸಮಾಜದ ಪಾತ್ರ ಅನನ್ಯವಾಗಿದೆ ಎಂದರು. ಲಿಂಗಾಯತ ಮಹಿಳಾ ಸಮಾಜದ ಪ್ರೇರಣೆಯಿಂದ ಏಕಸ್ ಫೌಂಡೇಶನ್ವು 37 ಸರಕಾರಿ ಶಾಲೆಗಳಿಗೆ ಹಾಗೂ 40 ಸಾವಿರಕ್ಕಿಂತ ಅಧಿಕ ಮಕ್ಕಳಿಗೆ ಕಂಪ್ಯೂಟರ್ ಪೂರೈಸಿ ಗುಣಮಟ್ಟದ ಶಿಕ್ಷಣ ತಂತ್ರಜ್ಞಾನ ಹಾಗೂ ಸರಳ ವಿಜ್ಞಾನ ಬೋದಿಸಲಾಗುತ್ತಿದೆ.

ಬೆಳಗಾವಿ ಮಕ್ಕಳಿಗಾಗಿ ಈ ಸೌಲಭ್ಯವನ್ನು ಕಲ್ಪಿಸಲು ಶೀಘ್ರದಲ್ಲೇ ಏಕಸ್ ಫೌಂಡೇಶನ್ ಆರಂಭಿಸಲಾಗುವುದು. ರಾಜ್ಯದ ವಿವಿದ ಕಡೆ ಆಥರ್ಿಕ ಸಂಕಷ್ಟದಿಂದ ಶಾಲೆಯಿಂದ ಹೊರಗುಳಿದ ಬಡಮಕ್ಕಳಿಗೆ ಮರು ಶಾಲೆಗೆ ಕರೆತರುವ ಪ್ರಯತ್ನ ಮಾಡಲಾಗಿದೆ. ಜತೆಯಲ್ಲಿ ಶುದ್ಧ ಪರಿಸರ ನಿಮರ್ಾಣಕ್ಕಾಗಿ, ಪ್ಲಾಸ್ಟಿಕ್ ಮುಕ್ತ ಪಣ ತೊಟ್ಟ ಮಹಿಳಾ ಸಮಾಜಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು. ಈಗಾಗಲೇ ಗಡಿನಾಡಿನಲ್ಲಿ ಸಮಾಜ ಸೇವೆಯಲ್ಲಿ ಛಾಪು ಮೂಡಿಸಿರುವ ಲಿಂಗಾಯತ ಮಹಿಳಾ ಸಮಾಜ ರಾಷ್ಟ್ರಾದ್ಯಂತ ಬೆಳಗಲಿ ಎಂದು ಶುಭ ಹಾರೈಸಿದರು.ಇದೇ ವೇಳೆಯಲ್ಲಿ ಸಮಾಜದ ಧುರೀಣೆ ಮಂಗಲ ಅಂಗಡಿಯವರು ಮಾತನಾಡಿ, ನಾನು ಕೂಡಾ ಲಿಂಗಾಯತ ಸಮಾಜದ ಓರ್ವ ಮಹಿಳೆ ಎಂದು ಹೇಳುವದಕ್ಕೆ ಹೆಮ್ಮೆ ಎನಿಸುತ್ತಿದೆ. ಸಮಾಜ ಕಾರ್ಯಕ್ಕೆ ಮುಂದಾಗುವ ಮಹಿಳಾ ಸಮಾಜಕ್ಕೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ತಿಳಿಸಿದರು. 

ಇದೇ ವೇಳೆಯಲ್ಲಿ ಲಿಂಗಾಯತ ಮಹಿಳಾ ಸಮಾಜದ ಏಳ್ಗೆಗೆ ಶ್ರಮಿಸುತ್ತಿರುವ ಶೈಲೇಜಾ ಭೀಂಗೆ, ಶೈಲಜಾ ಪಾಟೀಲ, ಜಯಶೀಲಾ ಬ್ಯಾಕೋಡ, ರತ್ನಪ್ರಭಾ ಬೆಲ್ಲದ, ಆಶಾ ಪಾಟೀಲ, ಜ್ಯೋತಿ ಬಾದಾಮಿ, ಸುನಂದಾ ಎಮ್ಮಿ, ಜ್ಯೋತಿ ಭಾವಿಕಟ್ಟಿ, ಸರಳಾ ಹೆರೇಕರ್, ಕೀತರ್ಿ ಪಾಟೀಲ, ಚನ್ನಮ್ಮ ಸಾಣಿಕೊಪ್ಪ ಸೇರಿದಂತೆ ಅನೇಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ಶೈಲಜಾ ಭಿಂಗೆ, ಶೈಲಜಾ ಪಾಟೀಲ, ಮಂಗಲ ಅಂಗಡಿ, ಆಶಾ ಪಾಟೀಲ, ಜಯಾಶೀಲಾ ಬ್ಯಾಕೋಡ, ಜ್ಯೋತಿ ಬದಾಮಿ, ರಜತ ಸ್ಮರಣ ಸಂಚಿಕೆ ಸಂಪಾದಕರು ಡಾ. ಗುರುದೇವಿ ಹುಲೆಪ್ಪನವರಮಠ, ಸುನಂದಾ ಎಮ್ಮಿ, ಶೈಲಜಾ ಪಾಟೀಲ, ಜಯಾಶಿಲಾ, ಬೀನಾ ಕತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸರ್ವಮಂಗಳಾ ಅರಳಿಮಟ್ಟಿ ಕಾರ್ಯಕ್ರಮ ನಿರೂಪಣೆ ನಿರ್ವಹಿಸಿದರು.