ಲೋಕದರ್ಶನ ವರದಿ
ಶಿರಹಟ್ಟಿ 24: ದೇಶಕ್ಕೆ ಮಾತ್ರವಲ್ಲದೇ ಈಡೀ ಜಗತ್ತಿಗೆ ಕೊರೊನಾದ ಕಾಟ ಹೆಚ್ಚಾಗಿದ್ದು ಎಲ್ಲಾ ದೇಶಗಳು ಆಥರ್ಿಕವಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ಜೊತೆಗೆ ದೇಶದಲ್ಲಿ ವಾಸಿಸುವ ಬಡವರ, ನಿರ್ಗತಿಕರ ಮತ್ತು ವಲೆಸಿಗರ ತೊಂದರೆ ಹೇಳತೀರದಾಗಿದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಆಪತ್ತಿನಲ್ಲಿರುವ ಬಡಕುಟುಂಬಳಿಗೆ ದಿನಸಿ ಪೂರೈಸುವುದು ನಮ್ಮೆಲ್ಲರ ಧರ್ಮವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಹೇಳಿದರು.
ಅವರು ಪಟ್ಟಣದ ಗಾಣಿಗೇರ ಸಮಾಜದ ಮುಖಂಡರು ಗಾಣಿಗೇರ ಸಮಾಜದ ಅತ್ಯಂತ ಕಡುಬಡವ 14 ಕುಟುಂಬಳಿಗೆೆ ಜೋಳ ಮತ್ತು ದಿನಸಿ ವಸ್ತುಗಳನ್ನು ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ದುಡಿದು ಬಂದ ಸಂಪಾದನೆಯಲ್ಲಿ ಮನೆಯ ಅಗತ್ಯ ಸಾಮಗ್ರಿಗಳನ್ನು ಖರೀದಿ ಮಾಡಿಕೊಂಡು ಜೀವನ ನಡೆಸುವ ಸಾಕಷ್ಟು ಕುಟುಂಬಗಳು ತೊಂದರೆಯಲ್ಲಿವೆ. ಅಂತಹ ಕುಟುಂಬಗಳಲ್ಲಿ ಗಾಣಿಗೇರ ಸಮಾಜದ ಕುಡುಬಡವ ಕುಟುಂಬಗಳಿಗೆ ಜೋಳ ಮತ್ತು ದಿನಸಿ ವಸ್ತುಗಳನ್ನು ನೀಡುವ ಮೂಲಕ ಸಹಾಯ ಮಾಡಲಾಗಿದೆ. ಪ್ರತಿಯೊಬ್ಬರೂ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡುವುದೇ ಮಹಾನ್ ಧರ್ಮವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಮೇಶ ಗಾಣಿಗೇರ, ಸುರೇಶ ಕಪ್ಪತ್ತನವರ, ಡಾ. ರಮೇಶ ಕಪ್ಪತ್ತನವರ, ಸಂದೇಶ ಗಾಣಿಗೇರ, ಕಿರಣ ಕಪ್ಪತ್ತನವರ, ರಾ.ಬ.ಕಮತ. ಬಸಣ್ಣ ತೇಲಿ, ಕೊಟ್ರೇಶ ಸಜ್ಜನರ, ಪಕ್ಕಣ್ಣ ಕಬಾಡರ, ಫಕ್ಕಿರೇಶ ಬಳಿಗೇರ,ಹನುಮಂತ ತಳವಾರ ಮುಂತಾದವರು ಉಪಸ್ಥಿತರಿದ್ದರು.