ನಾಗರೀಕರಿಂದ ಪೊಲೀಸ್ ಇಲಾಖೆಗೆ ಹೃದಯಸ್ಪರ್ಶಿ ಸನ್ಮಾನ
ವಿಜಯಪುರ 20 : ವಿಜಯಪುರ ನಗರದಲ್ಲಿ ಸರಣಿಗಳ್ಳತನ ಮಾಡುತ್ತಿರುವ ಧರೋಡೆಕೋರರನ್ನು ಪತ್ತೆಹಚ್ಚಿ ಬಂಧಿಸಿ ಹೋರಾಡಿದ ಪೊಲೀಸ್ ತಂಡಕ್ಕೆ ನಾಗರಿಕರಿಂದ ಹೃದಯಸ್ಪರ್ಶಿ ಸನ್ಮಾನ. 19-01-2025 ರಂದು ಸಂಜೆ 7 ಘಂಟೆಗೆ ವಿಜಯಪುರ ಗೋಲಗುಂಬಜ್ ಸರ್ಕಲ್ ಇನ್ಸ್‌ಪೆಕ್ಟ್‌ರ್ ಕಾರ್ಯಾಲಯದಲ್ಲಿ ವಾರ್ಡ್‌ನಂ 21 ಲಕ್ಷ್ಮೀ ನಗರ, ಗಣೇಶ, ವೆಂಕಟೇಶ್ ನಗರ ಹಿರಿಯರು, ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ, ಕವಿ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಇವರೊಂದಿಗೆ ನಾಗರಿಕಸನ್ಮಾನ ಸಮಾರಂಭ ಜರುಗಿತು. ಗೋಲಗುಂಬಜ್ ಠಾಣೆಯ ಪಿ.ಸಿ ಭೀಮಾಶಂಕರ ಮಖಣಾಪೂರ, ಗೋಲಗುಂಬಜ್ ಪಿಎಸ್‌ಐ ಎಮ್.ಡಿ. ಗೋರಿ, ಜಲನಗರ ಪಿಎಸ್‌ಐ ಡಿ.ಎಮ್. ಸಂಗಾಪೂರ, ಆದರ್ಶನಗರದ ಪಿಎಸ್‌ಐಗಳು ಆದಂತ ಶ್ರೀಮತಿ ಪ್ರೇಮಾ ಎಸ್. ಕುಚಬಾಳ, ಹಾಗೂ ಸೀತರಾಮ ಲಮಾಣಿ, ಎಪಿಎಮ್‌ಸಿ ಪಿಎಸ್‌ಐ ಆದಂತಹ ಶ್ರೀಮತಿ ಜ್ಯೋತಿ ಕೋತ್, ಸಿಪಿಐ ಆದಂತಹ ಮಲ್ಲಯ್ಯ ಮಠಪತಿ ಹಾಗೂ ಹೆಡ್‌ಕಾನ್‌ಸ್ಟೇಬಲ್ ಆದಂತಹ ರವಿ ಹಂಗರಗಿ ಇವರುಗಳಿಗೆ ಪೊಲೀಸ್ ಅಣ್ಣಾ ಅಂತಾ ಗೀತೆ ಹಾಡುವುದರೊಂದಿಗೆ ಸನ್ಮಾನ ಸಮಾರಂಭ ಜರುಗಿತು. ನಮ್ಮ ವಿಜಯಪುರ ಜಿಲ್ಲಾ ಪೊಲೀಸ್ ವರೀಷ್ಠಾಧೀಕಾರಿಗಳು ಹಾಗೂ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಗಳು, ಹಾಗೂ ಡಿವೈಎಸ್‌ಪಿ ಇವರ ಮಾರ್ಗದರ್ಶನದಂತೆ ದರೋಢೆಕೋರರನ್ನು ಗೋಲಿಬಾರ ಮಾಡುವ ಮೂಲಕ ತಮ್ಮ ಪ್ರಾಣವನ್ನೆ ಬದಿಗಿಟ್ಟು, ದರೋಢೆ ಕೋರರ ಜೊತೆಗೆ ಇಡೀ ರಾತ್ರಿ, ಕಾರ್ಯಾಚರಣೆ ಮಾಡಿ ಪತ್ತೆ ಹಚ್ಚಿ ಬಂಧಿಸಿದ ಪೊಲೀಸ್ ತಂಡಕ್ಕೆ ಹೃದಯ ಸ್ಪರ್ಶಿ ಸನ್ಮಾನ ನಡೆಸಲಾಯಿತು. ವಿಜಯಪುರ ನಗರದಲ್ಲಿ ಸುಮಾರ 20ದಿನಗಳಿಂದ ಭಯದ ವಾತಾವರಣ ಸೃಷ್ಠಿಸಿದ ಮಧ್ಯ ಪ್ರದೇಶದ ದರೋಢೆಕೋರರನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ಇಲಾಖೆಗೆ ಸಂದ ಗೌರವ ಹಾಗೂ ಈ ಒಂದು ಪಟ್ಟಣದಲ್ಲಿ ಮಹಿಳೆಯರು ಹಾಗೂ ಒಚಿಟಿ ಮನೆಯ ಸಾರ್ವಜನಿಕರು ಅತೀ ಭಯದಿಂದ ಜೀವನ ಸಾಗಿಸುವುದನ್ನು ತಪ್ಪಿಸಿದ ಕೀರ್ತಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಗೆ ಸಲ್ಲತಕ್ಕದ್ದು, ಇದೇ ಸಂದರ್ಭದಲ್ಲಿ ವೀರಶೈವಲಿಂಗಾಯತ ಸೇವಾ ಟ್ರಸ್ಟ್ ಉಪಾಧ್ಯಕ್ಷರಾ ಚನ್ನಬಸಯ್ಯ ಹಿರೇಮಠ, ಲಕ್ಷ್ಮೀ ನಗರದ ಹಿರಿಯರಾದ ಈಶ್ವರ ಹೂಗಾರ, ಅರ್ಜುನಸಾರವಾಡ, ಬಸಯ್ಯ ಹಿರೇಮಠ, ಪ್ರದೀಪಕುಮಾರ ಮಿಸ್ಕಿನ್, ಗುರದಪ್ಪ ಬಳ್ಳೂರ, ಶ್ರವಣಕುಮಾರ ಹೂಗಾರ, ಅನೀಲ ಜಾಧವ, ಕುಮಾರಿ ಸುರೇಖಾ ಎಸ್. ಚವಲಗಿ, ನಜುಂಡಿ ಕುಂಬಾರ ಇತರರು ಉಪಸ್ಥಿತರಿದ್ದರು.