ವಿಶ್ವ ಏಡ್ಸ್ ದಿನದ ನಿಮಿತ್ಯ ಜೈಲು ಖೈದಿಗಳಿಗೆ ಅರೋಗ್ಯ ತಪಾಸಣಾ ಶಿಬಿರ
Health check-up camp for prison inmates on the occasion of World AIDS Day
ಗದಗ 03: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ್ಘ ಪ್ರಸಾರ ಇಲಾಖೆ, ಸಹಯೋಗದೊಂದಿಗೆನಗರದ ಜಿಲ್ಲಾ ಕಾರಾಗೃಹದಲ್ಲಿ ಹೆಚ್.ಐ.ವಿ. ಟಿ.ಬಿ. ಸಿಫಲೀಸ್, ಹೆಪಟೆಟಿಸ್-ಬಿ, ಬಿಪಿ. ಶುಗರ್, ಲೈಂಗಿಕ ರೋಗ ಹಾಗೂ ಚರ್ಮದ ರೋಗ ತಪಾಸಣಾ ಶಿಬಿರ ಜರುಗಿತು.
ಪ್ರಾಸ್ತಾವಿಕವಾಗಿ ಬಸವರಾಜ ಲಾಳಗಟ್ಟಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ಗದಗ ರವರು ಮಾತನಾಡಿ ಹೆಚ್.ಐ.ವಿ ಖಾಯಿಲೆ ಬಗ್ಗೆ ಹಾಗೂ ಇ ವರ್ಷದ ಘೋಷಣೆಯಂತೆ “ ಹೆಚ್.ಐ.ವಿ. ಹರಡುವಿಕೆಯನ್ನು ನಿತಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೊಣ” ಎನ್ನುವಂತೆ ಹೆಚ್.ಐ.ವಿ. ಖಾಯಿಲೆಯನ್ನು ನಿರ್ಮುಲನೆ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು. ಹೆಚ್.ಐ.ವಿ ಹರಡುವ ವಿಧಗಳು ಹಾಗೂ ನಿಯಂತ್ರಿಸುವ ಮಾರ್ಗಗಳು ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುವ ಎಲ್ಲಾ ಸೇವಾ ಸೌಲಬ್ಯಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಆಸ್ಪತ್ರೆಯ ಚರ್ಮರೋಗ ತಜ್ಞ ವೈದ್ಯರಾದ ಡಾ. ವಿರೇಶ ರವರು ಮಾತನಾಡಿ ಚರ್ಮ ಖಾಯಿಲೆಯನ್ನು ನಿಯಂತ್ರಿಸಲು ವಯಕ್ತಿಕ ಶುಚಿತ್ವವನ್ನು ಕಾಯ್ದುಕೊಂಡು, ಮನೆಯಲ್ಲಿ ಹಾಗೂ ಸಮುದಾಯದಲ್ಲಿ ಶುಚಿತ್ವವನ್ನು ಕಾಯ್ದುಕೊಳ್ಳಬೇಕು ಹಾಗೂ ಪೌಷ್ಟಿಕ ಆಹಾರವನ್ನು ಸೇವೆನೆ ಮಾಡಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜೈಲರ್ ಅಧಿಕಾರಿಗಳಾದ ಶ್ರೀಮತಿ ಸುನಂದಾ ರವರು ಮಾತನಾಡಿ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಅಧಿಕಾರಿಗಳು ಹೇಳಿದಂತೆ ತಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಲಲು ಸ್ವಚ್ಛತೆ ಹಾಗೂ ಶಿಸ್ತಿನ ಜೀವನ ನಡೆಸಲು ತಾವೆಲ್ಲರೂ ಅಣಿಯಾಗಬೇಕೆಂದು ಹೇಳಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ಪ್ರವೀಣರವರು ಸುಮಾರು 18 ಸಂಶಯಾಸ್ಪದ ರೋಗಿಗಳಿಗೆ ಚರ್ಮರೋಗ ಹಾಗೂ ಲೈಂಗಿಕ ರೋಗದ ತಪಾಸಣೆ ಮಾಡಿದರು. ಶಿಬಿರದಲ್ಲಿ 38 ಜನರಿಗೆ ಹೆಚ್.ಐ.ವಿ. ಟಿ.ಬಿ. ಸಿಫಲೀಸ್, ಹೆಪಟೆಟಿಸ್-ಬಿ, ಬಿಪಿ. ಶುಗರ್, ತಪಾಸಣೆ ಮಾಡಿದರು. 5 ಜನರಿಗೆ ಟಿ.ಬಿ ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ ಐ.ಸಿ.ಟಿ.ಸಿ ಕೇಂದ್ರದ ಚೆನ್ನಮ್ಮ ಶ್ಯಾಡಲಗೇರಿ, ಮಂಜುನಾತ ಅಂಗಡಿ, ಎಸ್,ಟಿ.ಡಿ. ಕೆಂದ್ರದ ಜಾನಕಿದೇವಿ ಕಳಸಾಪೂರ, ಎಸ್.ವಿ.ವಾಯ್.ಎಮ್. ಸಂಸ್ಥೆಯ ಸೌಮ್ಯರಾವ್, ಬೆಟಗೇರಿ ಪ್ರಾಆ.ಕೇಂದ್ರದ ಆಶಾ ಕಾಯ್ಕರ್ತೆಯರಾದ ಶ್ರೀಮತಿ ರುದ್ರಮ್ಮ ಚಲವಾದಿ, ಜೈಲ ಸಿಬ್ಬಂದಿಯಾದ ಸೋಮಶೇಖರ, ಶ್ರೀದೇವಿ, ಕುರುಬರ್ ಹಾಗೂ ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 