ಯೋಗದಿಂದ ಆರೋಗ್ಯ ಸಮೃದ್ಧಿ
Health and prosperity through yoga
ಯೋಗದಿಂದ ಆರೋಗ್ಯ ಸಮೃದ್ಧಿ
ವಿಜಯಪುರ, 11 : ಯೋಗ ಬರುವ ರೋಗವನ್ನು ತಡೆಯುತ್ತದೆ ಹಾಗೂ ಇರುವ ರೋಗವನ್ನು ಓಡಿಸುತ್ತದೆ ಹಾಗಾಗಿ ಅದನ್ನು ಶಿಸ್ತುಬದ್ಧವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜೋಗಜಲಪಾತದ ಜಗದ್ಗುರು ಡಾ.ವಿಜಯಕುಮಾರ ಮಹಾನುಭಾವಿಗಳು ಹೇಳಿದರು.
ನಗರದ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ (ಉತ್ತರ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಸಭೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯೋಗ ಧ್ಯಾನ ಮತ್ತು ಪ್ರಾಣಾಯಾಮದಂದ ಆರೋಗ್ಯಕರ ಬದುಕು' ವಿಷಯದ ಕುರಿತು ಮಾತನಾಡಿದ ಅವರು, ಯೋಗ ಹಾಗಾ ಪ್ರಾಣಾಯಾಮದಿಂದ ನೆಮ್ಮದಿಯ ಬದುಕು ನಮ್ಮದಾಗಿಸಿಕೊಳ್ಳಲು ನಾವು ನಿತ್ಯ ನಿರಂತರವಾಗಿ ಯೋಗವನ್ನು ಮಾಡಬೇಕು. ಯೋಗದ ಮೂಲ ಪುರುಷ ಶಿವನಾಗಿರುವುದರಿಂದ ಶಿವನ ಯೋಗದ ಭಂಗಿಯಲ್ಲಿ ಧ್ಯಾನವನ್ನು ಮಾಡಬೇಕು. ಇದರಿಂದ ನಮ್ಮಲ್ಲಿರುವ ಮನೋರೋಗಗಳು ಅಲ್ಲದೇ ವೈಜ್ಞಾನಿಕವಾಗಿಯೂ ಅಸಾಧ್ಯವೆನಿಸುವ ರೋಗಗಳನ್ನು ನಾವು ನಿರಾಯಾಸವಾಗಿ ಹೊಡೆದೊಡಿಸಬುದು ಎಂದು ಹೇಳಿದರು.
ರೋಟರಿ ಪ್ರೋಬಸ್ ಜಿಲ್ಲಾಧ್ಯಕ್ಷ ಮಹಾದೇವ ಹಾಲಹಳ್ಳಿ ಮಾತನಾಡಿ, ಯೋಗದಿಂದ ನಮ್ಮ ದೇಹ ಹಾಗೂ ಮನಸ್ಸು ಒಟ್ಟಾಗಿ ಕೆಲಸ ಮಾಡುತ್ತವೆ. ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಕೆಲಸದ ಸಾಮರ್ಥ್ಯ ಹೆಚ್ಚಾಗುವುದರೊಂದಿಗೆ ಯಶಸ್ವಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ನಿರಂತರ ಯೋಗ ಹಾಗೂ ಧ್ಯಾನಗಳನ್ನು ಮಾಡುವುದರಿಂದ ಬಿಪಿ-ಶುಗರ್, ಕೈಕಾಲು ನೋವು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುವುದಿಲ್ಲ. ಎಲ್ಲರೂ ನಿಮ್ಮ ಜೀವನದಲ್ಲಿ ಯೋಗವನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಯೋಗ-ಧ್ಯಾನವನ್ನು ರೂಡಿಸಿಕೊಳ್ಳುವುದರಿಂದ ನಮ್ಮ ಬದುಕು ಆರೋಗ್ಯ ಸಮೃದ್ಧಿಯಿಂದ ಕೂಡಿರುತ್ತದೆ. ಯೋಗ ಮಾಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಮಕ್ಕಳು, ಮಹಿಳೆಯರು ಯಾರು ಬೇಕಾದರೂ ಯೋಗವನ್ನು ಮೈಗೂಡಿಸಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರು ಬಿರಾದಾರ, ಸುಭಾಷ ಬೆಟಗೇರಿ, ಬಿ.ಕೆ.ಕೊಟ್ಯಾಳ, ಡಾ.ಶಿವಮೂರ್ತಿ ಹಿರೇಮಠ, ಜಗದೀಶ ಮೋಟಗಿ, ವಿಠ್ಠಕ ತೇಲಿ, ಎಸ್.ಎಂ.ಹುಂಡೇಕರ್, ಎಲ್.ಪಿ.ಬಿರಾದಾರ, ಎಂ.ಜಿ.ಮಾದವಾಡ, ವಿಠ್ಠಲ ಕಾಳೆ, ಎಸ್.ಪಿ.ಮುದೋಳ, ಎಸ್.ಜಿ.ನಾಡಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 