ಲೋಕದರ್ಶನ ವರದಿ
ಧಾರವಾಡ 27: ಮಾರುಕಟ್ಟೆಯಲ್ಲಿ ವಸ್ತುಗಳು ಸಿಗಬಹುದು ಆದರೆ ಮಾನವನ ಜೀವ ಎಂದು ಸಿಗಲು ಸಾಧ್ಯವಿಲ್ಲ ಹೀಗಾಗಿ ಬದುಕಿದ್ದಾಗಲೇ ಅತ್ಯುತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಭಿಪ್ರಾಯಪಟ್ಟರು.
ನಗರದ ಚರಂತಿಮಠ ಗಾರ್ಡನದಲ್ಲಿರುವ ಬನಶಂಕರಿ ಭವನದಲ್ಲಿ ಇಂದು ಕನರ್ಾಟಕ ರಕ್ಷಣಾ ವೇದಿಕೆ (ಯುವಸೈನ್ಯ)ದ ವತಿಯಿಂದ ಆಯೋಜಿಸಿದ್ದ ರಕ್ತದಾನ, ನೇತ್ರದಾನ ಹಾಗೂ ಆರೋಗ್ಯ ಶಿಬಿರ ಮತ್ತು ಆರೋಗ್ಯ ಕಾರ್ಡ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆ ಆರೋಗ್ಯದತ್ತ ಗಮನ ನೀಡುತ್ತಿಲ್ಲ ವಿವಿಧ ದುಶ್ಚಟಗಳಿಗೆ ಬಲಿಯಾಗಿ ಆಯುಷ್ಯ ಪೂತರ್ಿ ಕಳೆಯದೆ ಮಧ್ಯದಲ್ಲಿಯೇ ಅನಾರೋಗ್ಯಕ್ಕೀಡಾಗಿ ಸಾಯುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಸಾಯುವ ಯುವಕರ ಸಂಖ್ಯೆ ಹೆಚ್ಚಾಗಿದ್ದು ವಾಹನ ಚಲಾವಣೆ ಕುರಿತು ಎಚ್ಚರಿಕೆ ವಹಿಸುತ್ತಿಲ್ಲ. ಎಷ್ಟೋ ಸಮಯದಲ್ಲಿ ಅಪಘಾತದ ಸ್ಥಳದಲ್ಲಿ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪುತ್ತಿರುವುದು ಖೇಧಕರ ಸಂಗತಿಯಾಗಿದೆ. ಯುವಜನರು ರಕ್ತದಾನ ಮಾಡುವಲ್ಲಿ ಹೆಚ್ಚು ಆಸಕ್ತಿ ತೋರಿದರೆ ಮತ್ತೊಬ್ಬರ ಜೀವನ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಆಸ್ಪತ್ರೆ ನಿವೃತ್ತ ಶಸ್ತೊ ಚಿಕಿತ್ಸಕ ಡಾ. ಕಪೂರಮಠ ಮಾತನಾಡಿ, ಮಾರುಕಟ್ಟೆಯಲ್ಲಿ ನಾವು ಎಲ್ಲವನ್ನು ಖರೀಧಿಸಬಹುದು ಆದರೆ ದೇಹದ ಅಂಗಾಗವಾಗಲಿ ಅಥವಾ ರಕ್ತವನ್ನು ಖರೀಧಿಸಲು ಸಾಧ್ಯವಿಲ್ಲ. ಅಪಘಾತದಿಂದ ಗಾಯಗೊಂಡು ರಕ್ತದ ಕೊರತೆ ಸಂದರ್ಭದಲ್ಲಿ ಹಾಗೂ ಶಸ್ತೊಚಿಕಿತ್ಸೆ ಸಮಯದಲ್ಲಿ ರಕ್ತದ ಅವಶ್ಯಕತೆಯಿದ್ದಾಗ ಜನ ಪರದಾಡುತ್ತಾರೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ ಮತ್ತೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ. ಮನಷ್ಯನ ಪ್ರಾಣ ಹೋದ ತಕ್ಷಣ ಆತನ ನೇತ್ರವನ್ನು ದಾನ ಮಾಡಿದರೆ ನೇತ್ರದ ತೊಂದರೆಯಿಂದ ಬಳಲುತ್ತಿರುವವರಿಗೆ ಸಹಕಾರ ಮಾಡಿದಂತಾಗುತ್ತದೆ ಎಂದರು.
ಬನಶಂಕರಿ ಭವನ ಅಧ್ಯಕ್ಷ ಶಿವಾನಂದ ಲೋಲೆನವರ ಮಾತನಾಡಿ, ಗರ್ಭವತಿಯರಿಗೆ ಹಾಗೂ ಶಸ್ತೊಕ್ರಿಯೆಗೆ ಒಳಗಾಗುವವರಿಗೆ ರಕ್ತದ ಅವಶ್ಯಕತೆಯಿರುತ್ತದೆ. ಅಂತಹ ಸಮಯದಲ್ಲಿ ರೋಗಿಯ ಸಂಬಂಧಿಕರು ರಕ್ತದ ಬ್ಯಾಂಕ್ಗಳಿಗೆ ಸಂಪಕರ್ಿಸುತ್ತಾರೆ ಕೆಲವು ಸಂದರ್ಭದಲ್ಲಿ ಗುಂಪಿನ ರಕ್ತ ಸಿಗಲಾರದೆ ಪರದಾಡುತ್ತಿರುವುದನ್ನು ಗಮನಿಸಿದ್ದೇವೆ. ಹೀಗಾಗಿ ಜನರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಠಿಕೋನದಿಂದ ಬನಶಂಕರಿ ಭವನದಲ್ಲಿ ರಕ್ತದಾನ, ನೇತ್ರದಾನ ಹಾಗೂ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಲೇ ಇರುತ್ತೇವೆ ಎಂದರು.
ಕರವೇ (ಯುವಸೈನ್ಯ) ರಾಜ್ಯ ಉಪಾಧ್ಯಕ್ಷ ಪ್ರಶಾಂತ ಯಾವಗಲ್ ಅಧ್ಯಕ್ಷತೆವಹಿಸಿ ಮಾತನಾಡಿದರು 2ನೇ ಭಾರಿಗೆ ರಕ್ತ ದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಅನಕೂಲವಾಗಲಿದೆ ಇಂತಹ ಕಾರ್ಯಕ್ರಮಗಳನ್ನು ಮತ್ತೇ ಮತ್ತೇ ಹಮ್ಮಿಕೊಳ್ಳುತ್ತೇವೆ ಎಂದರು.
ಬಸವೇಶ್ವರ ರೂರಲ್ ಎಜ್ಯುಕೇಶನ್ ಟ್ರಸ್ಟ ಕಾರ್ಯದಶರ್ಿ ಶರಣಪ್ಪ ಕೊಟಗಿ, ಡಾ. ಉಮೇಶ ಹಳ್ಳಿಕೇರಿ, ಕನರ್ಾಟಕ ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷರು ದ್ರಾಕ್ಷಾಯಿಣಿ ಬಸವರಾಜ, ಆರ್, ಬಿ, ಮಾನ್ಕರ, ಸಪರಶುರಾಮ ಚಲವಾದಿ, ಶಿವಯೋಗಿ ಟೆಂಗಿನಕಾಯಿ ವೇದಿಕೆ ಮೇಲಿದ್ದರು.
ನಗರಾಧ್ಯಕ್ಷ ಡಿ. ಬಿ. ಕಡೆಮನಿ ಸ್ವಾಗತಿಸಿದರು. ಕಾಶಿನಾಥ ಕಾಕಂಡಿಕಿ ನಿರೂಪಿಸಿದರು. ಸುರೇಶ ಹರ್ತಿ ವಂದಿಸಿದರು.