ದೇಶದಲ್ಲಿ ಸೌಹಾರ್ದ, ಸಹಬಾಳ್ವೆ ಹೆಚ್ಚಿಸಬೇಕು: ಜಡಿಮಠದ ಶ್ರೀಗಳು

ದೇಶದಲ್ಲಿ ಸೌಹಾರ್ದ, ಸಹಬಾಳ್ವೆ ಹೆಚ್ಚಿಸಬೇಕು: ಜಡಿಮಠದ ಶ್ರೀಗಳು  Harmony and coexistence should be increased in the country: Jadi Matha monks

                  ದೇವರಹಿಪ್ಪರಗಿ 23:‘ಸಹಬಾಳ್ವೆಯೇ ಸಂಪತ್ತಾಗಿರುವ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸೌಹಾರ್ದ ಕ್ಷೀಣಿಸುತ್ತಿದೆ’ ಎಲ್ಲಾ ಹಬ್ಬಗಳು ಸೌಹಾರ್ದ ಸಂದೇಶ ನೀಡಿದೆ. ಸರ್ವ ಧರ್ಮೀಯರು ಸೇರಿ ಹಬ್ಬಗಳನ್ನು ಆಚರಿಸುವುದರಿಂದ ಪರಸ್ಪರ ಪ್ರೀತಿ ಭಾವನೆ ಹೆಚ್ಚಾಗುತ್ತದೆ ಎಂದು ಜಡೆಮಠದ ಷ.ಬ್ರ ಜಡಿಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.ಪಟ್ಟಣದ ಜೆಎಂಜೆ ಸಮಾಜ ಸೇವಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರ ಧರ್ಮೀಯ ಶಾಂತಿ ಕ್ರಿಸ್ ಮಸ್  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು.ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಸಾರುವ ಮೂಲಕ ಸಹಬಾಳ್ವೆ ಸಹೋದರತೆ ಹಾಗೂ ಪ್ರೀತಿ, ವಿಶ್ವಾಸಕ್ಕೆ ಮಾದರಿಯಾದ ದೇಶವಾಗಿದೆ.

                  ಅನೇಕ ಸಂತರು ಇಲ್ಲಿ ಮೌಲ್ಯಗಳನ್ನು ಬಿತ್ತಿ ಹೋಗಿದ್ದಾರೆ. ನಾವೆಲ್ಲರೂ ಸೇರಿ ಸೌಹಾರ್ದ, ಶಾಂತಿ, ಪ್ರೀತಿ, ಮಾನವೀಯತೆ, ವಿಶ್ವಾಸ ಹಂಚುವ ಕೆಲಸ ಮಾಡೋಣ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಒಂದನೆಯ ಸ್ವಾಮಿ ವಿಲ್ಸನ್ ಮೊರಾಸ್ ಎಸ್‌.ಜೆ ಅವರು ಮಾತನಾಡಿ,‘ಪ್ರತಿವರ್ಷ ಸರ್ವ ಧರ್ಮೀಯರೊಂದಿಗೆ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಒಬ್ಬರನೊಬ್ಬರು ಪ್ರೀತಿಸಬೇಕು. ದಾನದ ಗುಣ ಬೆಳೆಸಿಕೊಳ್ಳ ಬೇಕು. ಅಂದಾಗ ಮಾತ್ರ ಕ್ರಿಸ್ಮಸ್ ಆಚರಣೆ ಸಾರ್ಥಕವಾಗುತ್ತದೆ. ಬೇರೆ ಧರ್ಮಗಳನ್ನು ಗೌರವಿಸಬೇಕು. ಕ್ರಿಸ್ತನ ತ್ಯಾಗದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

                 ಅರೇಬಿಕ್ ಶಿಕ್ಷಕರಾದ ಎಂ.ಎಸ್‌.ಮಸ್ಕಿ ಅವರು ಮಾತನಾಡಿ, ದೇವರಹಿಪ್ಪರಗಿ ಪಟ್ಟಣ ಸೌಹಾರ್ದದ ನೆಲ, ಇಲ್ಲಿ ಎಲ್ಲರೂ ಸೇರಿ ಎಲ್ಲಾ ಧರ್ಮಗಳ ಹಬ್ಬಗಳನ್ನು ಆಚರಿಸುತ್ತಾರೆ. ಸೌಹಾರ್ದ ಸಾರುವ ರಮ್ಜಾನ್ ಆಚರಣೆಯೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ನಿರ್ದೇಶಕಿ ಸಿಸ್ಟರ ಹೃದಯಾ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಎಲ್ಲಾ ಅತಿಥಿಗಳಿಗೆ, ಪಾಲಕರಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದಗಳು ತಿಳಿಸಿದರು .ವಿಜಯಪುರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸೇರಿದಂತೆ ಹಲವಾರು ಜನರನ್ನು ಸನ್ಮಾನಿಸಿ, ಗೌರವಿಸಲಾಯಿತು.

                 ನಂತರ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ, ಭಜನ, ಕ್ರಿಸ್ ಮಸ್ ಕ್ಯಾರೋಲ್ ಹಾಗೂ್ ಸಾಂಪ್ರದಾಯಕ ನಾಟಕಗಳ ಮೂಲಕ ಕ್ರಿಸ್ ಮಸ್ ನಿಜವಾದ ಅರ್ಥ ಪ್ರೀತಿ ಮತ್ತು ಹಂಚಿಕೆಯ ಸಂದೇಶ ಸಾರಿದರು. ನಂತರ ಶಾಂತಿ ಮತ್ತು ಮನವೀಯತೆಗಾಗಿ ಕ್ರಿಸ್ ಮಸ್ ಕೇಕ್ ಕಟ್ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಜೆಎಂಜೆ ಸಂಸ್ಥೆಯ ಸಹೋದರಿಯರು,ಝೇವಿಯರ ಈಗಲಪಾಟಿ, ಶಾಂತಾಬಾಯಿ,ಪಟ್ಟಣದ ವಿವಿಧ ಧರ್ಮದ ಪ್ರಮುಖರು, ಗಣ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.