ತಾಯಿ ಮಾಡಿದ ಸಾಲಕ್ಕೆ ಮಗಳಿಗೆ ಕಿರುಕುಳ

ಲೋಕದರ್ಶನ ವರದಿ

ಕಾರವಾರ 08: ತಾಯಿ ಮಾಡಿದ ಸಾಲಕ್ಕೆ ಮಗಳಿಗೆ ಸಾಲ ನೀಡಿದವರು ಕಿರುಕುಳ ನೀಡಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಅವಮಾನ ಮಾಡಿದ್ದೇ 21 ವರ್ಷದ ನಾಗಶ್ರೀ ಅಶೋಕ ದಾಗಿನದಾರಳನ್ನು ಸಾಲ ವಸೂಲಿಕಾರರು ಬಲಿ ಪಡೆದಿದ್ದಾರೆ ಎಂದು ಕನರ್ಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಂಚಾಲಕ ಮಂಜುನಾಥ ಕುಮಾರ್ ಜಿ.ಆಗೇರ ಆರೋಪಿಸಿದರು. 

ಕಾರವಾರದ ಪತ್ರಿಕಾಭವನದಲ್ಲಿ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿ ಮಾಡಿದ ಅವರು ನಾಗಶ್ರೀ ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ  ಪೊಲೀಸರು ನಾಗಶ್ರೀ ಸಾವಿನ ವೇಳೆ ವಶಪಡಿಸಿಕೊಂಡ ಡೆತ್ ನೋಟ್ನ್ನು  ಸಂಬಂಧಿಕರಿಗೆ ನೀಡುತ್ತಿಲ್ಲ. ಸಾಲ ವಸೂಲಿಯ ವೇಳೆ ಕಿರುಕುಳ ನೀಡಿದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ ಎಂದು ಮಂಜುನಾಥ ಹಾಗೂ ನಾಗಶ್ರೀ ಅವರ ತಾಯಿ ಅರ್ಚನಾ  ಆರೋಪಿಸಿದರು. ನಾಗಶ್ರೀ ಸಾವಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸ್ವಸಹಾಯ ಸಂಘಗಳ ಹೆಸರಲ್ಲಿ ಮಹಿಳಾ ಗುಂಪುಗಳಿಗೆ ನೀಡುವ ಸಾಲ ಮತ್ತು ಅದರ ಬಡ್ಡಿದರ ಪರಿಶೀಲನೆಯಾಗಬೇಕು. ಅತೀಯಾದ ಬಡ್ಡಿಯಿಂದ ಬಡವರು ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಮೈಕ್ರೋ ಫೈನಾನ್ಸಗಳಿಗೆ ಕಡಿವಾಣ ಹಾಕದಿದ್ದರೆ ಇಂಥ ಆತ್ಮಹತ್ಯೆಗಳು ಜಿಲ್ಲೆಯಲ್ಲಿ ಹೆಚ್ಚಲಿವೆ ಎಂದು ಮಂಜುನಾಥ ಆಗೇರ ಆರೋಪಿಸಿದರು. ನಾಗಶ್ರೀ ಬಡ ಕುಟುಂಬದವಳು. ರೈಸ್ ಮಿಲ್ನಲ್ಲಿ ಕೆಲಸ ಮಾಡಿ ಬದುಕುತ್ತಿದ್ದಳು. ಪರಿಶಿಷ್ಟ ಜಾತಿಯ ಈ ಯುವತಿಯನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ್ದು, ಕಿರುಕುಳ ನೀಡಿದ್ದೇ ಆಕೆಯ ಬಲಿಗೆ ಕಾರಣವಾಗಿದೆ ಎಂದರು.

ಜಿಲ್ಲೆಯಲ್ಲಿ ಕೆಲ ಮೈಕ್ರೋ ಫೈನಾನ್ಸ್ ಹಾಗೂ ಸ್ವ ಸಹಾಯ ಸಂಘಗಳು ಸಾಲ ವಸೂಲಿಯ ನೆಪದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದು  ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು  ಮಂಜುನಾಥ ಆಗೇರ ಒತ್ತಾಯಿಸಿದರು.  

ಕೆಲ ಸ್ವ ಸಹಾಯ ಸಂಘಗಳು 18 ವರ್ಷ ಮೇಲ್ಪಟ್ಟ ವಿದ್ಯಾಥರ್ಿಗಳಿಗೂ ಸಾಲ ನೀಡಲು ಶುರು ಮಾಡಿವೆ. ಇದು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೇ ವಿಪರೀತ ಬಡ್ಡಿ ಆಕರಿಸುತ್ತಿವೆ. ಇದರಿಂದ ಸಾಲ ಪಡೆದ ಮಹಿಳೆಯರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮೇಲಿಂದ ಸಾಲ ವಸೂಲಿಯ ಸಲುವಾಗಿ ಮಹಿಳೆಯರ ಮನೆಯಲ್ಲಿ ಅಪರಿಚಿತ ಪುರುಷರು ರಾತ್ರಿ 10 ಗಂಟೆಯವರೆಗೂ ಠಿಕಾಣಿ ಹೂಡಿದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದರು. 

ಲೆಕ್ಕ ಪತ್ರ ಸರಿ ಇಲ್ಲ; 

ಸ್ವ ಸಹಾಯ ಸಂಘಗಳಲ್ಲಿ ಸಾಲಗಾರರು ತುಂಬಿದ ಹಣ ಹಾಗೂ ಸದಸ್ಯರ ಉಳಿತಾಯ ಹಣವನ್ನು ಸದಸ್ಯರದ್ದೇ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಆದರೆ ಬಹುತೇಕ ಸ್ವ ಸಹಾಯ ಸಂಘಗಳಲ್ಲಿ ಸದಸ್ಯರ ಹೆಸರಿನಲ್ಲಿ  ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿಲ್ಲ. ಸಂಘದಿಂದಲೇ ಹಣ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ಹಣ ಹೇಗೆ ಖಚರ್ಾಗಿದೆ ಎಂಬುದು ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದರು. ಕೆಲ ಮೈಕ್ರೋಫೈನಾನ್ಸಗಳು ರಾಷ್ಟ್ರಿಕೃತ ಬ್ಯಾಂಕ್ನಿಂದ ಶೇ.10;50 ಬಡ್ಡಿದರಲ್ಲಿ ಸಾಲ ಪಡೆದು, ಸ್ವಸಹಾಯ ಗುಂಪುಗಳಿಗೆ 16.75 ದರದ ಬಡ್ಡಿಯಲ್ಲಿ ಸಾಲ ನೀಡುತ್ತಿವೆ. ಅಲ್ಲದೇ ಇನ್ನು ಕೆಲ ಫೈನಾನ್ಸಗಳು ಅತೀಯಾದ ಬಡ್ಡಿ ವಿಧಿಸುತ್ತಿವೆ. ಹಾಗಾಗಿ ಕೆಲ ಸ್ವಸಹಾಯ ಮಹಿಳಾ ಗುಂಪುಗಳು ರೋಸಿ ಹೋಗಿವೆ. ಎರಡು ಸಂಘಗಳಲ್ಲಿ ಸದಸ್ಯೆಯಾಗಿರುವ ಮಹಿಳೆಯರಿಗೆ ಸಾಲ ನೀಡಬಾರದು ಎಂದು ನಿಯಮ ಹೇಳುತ್ತಿದೆ. ಈ ನಿಯಮ ಉಲ್ಲಂಘಿಸಿ ಕೆಲ ಮೈಕ್ರೋ ಫೈನಾನ್ಸಗಳು ಸಾಲ ನೀಡುತ್ತವೆ. ನಂತರ ಸಾಲ ವಸೂಲಿಗೆ ಒತ್ತಡ ಹಾಕುತ್ತಿವೆ. ಈ ಸಂಬಂಧ 5 ಜನೇವರಿ 2017ರಲ್ಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈಗಲಾದರೂ ಇಂಥ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ, ಸಹಕಾರಿ ಸಂಘಗಳ ಉಪನಿಬಂಧಕರು ಕಠಿಣ ಕ್ರಮ ಜರುಗಿಸಬೇಕು. ಯಾರು ಕಾನೂನು ಉಲ್ಲಂಘಿಸಿ ವ್ಯವಹಾರ ಮಾಡುತ್ತಾರೆಂದು ಲಿಖಿತ ದೂರು ನೀಡಲಾಗಿದೆ. ಇನ್ನಾದರೂ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗಬೇಕು ಎಂದು ಕನರ್ಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಂಚಾಲಕ ಮಂಜುನಾಥ ಕುಮಾರ್ ಜಿ.ಆಗೇರ ಆಗ್ರಹಿಸಿದರು. ದೂರನ್ನು ಜಿಲ್ಲಾಧಿಕಾರಿ ಕಚೇರಿಯ ಮೂಲಕ ಸಕರ್ಾರಕ್ಕೆ ನೀಡಲಾಗಿದೆ. ಸಹಕಾರಿ ಸಂಘಗಳ ಉಪನಿಬಂಧಕರಿಗೆ ಸಹ ನೀಡಲಾಗಿದೆ. ಇನ್ನಾದರೂ ಕ್ರಮಕ್ಕೆ ಮುಂದಾಗಿ ಬಡ ಕುಟುಂಬಗಳನ್ನು ರಕ್ಷಿಸಬೇಕೆಂದು ಅವರು ವಿನಂತಿಸಿದರು.