ಭೋವಿ ಸಮಾಜದ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ಹನುಮಂತಪ್ಪ ಅರೆಗೊಪ್ಪ
Hanumanthappa Aregoppa appointed as district president of Bhovi Samaj committee
ಮುಂಡಗೋಡ 07: ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ಹನುಮಂತಪ್ಪ ಆರೆಗೊಪ್ಪ ಅವರು ಗುರುವಾರ ಆಯ್ಕೆಯಾಗಿದ್ದಾರೆ. ತಾಲೂಕಿನ ಬಾಚಣಕಿ ಗ್ರಾಮದ ಪರೀವೀಕ್ಷಣಾ ಮಂದಿರದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಪರ-ವಿರೋಧ ನಡುವೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹನುಮಂತಪ್ಪ ಆರೆಗೊಪ್ಪ ಅವರು ಮಾತನಾಡಿ ಭೋವಿ ಸಮಾಜದ ಏಳಿಗೆಗಾಗಿ ಹಳ್ಳಿಹಳ್ಳಿಗಳಿಗೆ ಭೇಟಿಯಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ನಮ್ಮ ಸಮಾಜದ ಅಭಿವೃದ್ಧಿಗಾಗಿ ತಾವು ಯಾವತ್ತು ಸಿದ್ಧ ಎಂದು ಹನಮಂತಪ್ಪ ಆರೇಗೊಪ್ಪ ಹೇಳಿದರು.
ತಾಲೂಕು ಘಟಕದ ಅಧ್ಯಕ್ಷ ದಯಾನಂದ ಕಳಸಾಪುರ, ಉಪಾಧ್ಯಕ್ಷ ಬಂಗಾರಿ ಭೋವಿ, ಕಾರ್ಯದರ್ಶಿ ಹನುಮಂತ ಭೋವಿ, ಖಜಾಂಚಿ ಅಶೋಕ ಭೋವಿ, ದಲಿತ, ಮುಖಂಡ ಚಿದಾನಂದ ಹರಿಜನ, ತಾಲೂಕು ಮಾಜಿ ಅಧ್ಯಕ್ಷ ರವಿ ಹಾವೇರಿ, ರವಿ ಪೂಜಾರ, ವಿರೂಪಾಕ್ಷ ಕಳಲಕೊಂಡ, ಗೋವಿಂದ ವರೂರ, ರವಿ ಪೂಜಾರ, ವೆಂಕಟೇಶ ಭೋವಿ, ಗೀರೀಶ ಶೃಂಗೇರಿ, ಚಂದ್ರಶೇಖರ ಮುಡಸಾಲಿ, ತಿರುಪತಿ ಭೋವಿ, ಪ್ರಕಾಶ ಭೋವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ 