ಭಾಗ್ಯನಗರದಲ್ಲಿ ಜೂ. 28ರಂದು ಕೊಪ್ಪಳ ತಾಲೂಕು 2 ನೆಯ ಚುಟುಕು ಸಾಹಿತ್ಯ ಸಮ್ಮೇಳನ

ಭಾಗ್ಯನಗರದಲ್ಲಿ  ಜೂ. 28ರಂದು ಕೊಪ್ಪಳ ತಾಲೂಕು 2 ನೆಯ ಚುಟುಕು ಸಾಹಿತ್ಯ ಸಮ್ಮೇಳನ Koppal Taluk 2nd Chutuku Sahitya Sammelana to be held in Bhagyanagar on June 28

ಕೊಪ್ಪಳ  24: ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಕೊಪ್ಪಳ ತಾಲೂಕಾ  ಎರಡನೇ ಚುಟುಕು ಸಾಹಿತ್ಯ ಸಮ್ಮೇಳನ ಜೂ.28ರಂದು ಜರುಗಲಿದೆ.ಕವಿ ಹಾಗೂ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಚಿತ್ರಗಾರ ಅವರ ಸವಾ9ಧ್ಯಕ್ಷ್ಯತೆಯಲ್ಲಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್‌. ಅರಸು ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ,   ತಾಲುಕು ಅಧ್ಯಕ್ಷ ಮೈಲಾರ​‍್ಪ ಉ0ಕಿ ಅಧ್ಯಕ್ಷತೆ ವಹಿಸುವರು, ಸಂಸದ ರಾಜಶೇಖರ ಹಿಟ್ನಾಳ ಅವರು  ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ, ಶ್ರೀನಿವಾಸ ಚಿತ್ರಗಾರ ಅವರ ಎಳೆಯರಿಗಾಗಿ ಒತ್ತಕ್ಷರ ಇಲ್ಲದ ಕಥೆಗಳು ಕೃತಿಯನ್ನು  ಅವರು ಬಿಡುಗಡೆಗೊಳಿಸುವರು, ಈರ​‍್ಪ ಬಿಜಲಿ ಅವರ ನಿಖಿಲ್ ನ ಬಣ್ಣದ ಕೊಡೆ ಕೃತಿಎನ್ನು ಎಂಎಲ್ಸಿ ಹೇಮಲತಾ ನಾಯಕ ಅವರು ಬಿಡುಗಡೆಗೊಳಿಸುವರು,  ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಅವರು ಕವಿ ಎಪಿ ಅಂಗಡಿ ಅವರ ಕಲಾ ಕೃತಿ ಬಿಡುಗಡೆ ಗೋಳಿಸುವರು, 

ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಮೇಶ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ,ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್‌.ಎಸ್‌.ಪಾಟೀಲ್, ಕೆ. ಬಿ.ಬ್ಯಾಳಿ,  ಗಣ್ಯರಾದ ಶ್ರೀನಿವಾಸ ಗುಪ್ತಾ, ಅಮ್ಜದ್ ಪಟೇಲ್, ಗುರುರಾಜ್ ಹಲಗೇರಿ, ಸಿ.ವಿ.ಚಂದ್ರಶೇಖರ, ತುಕರಾಮಪ್ಪ  ಗಡಾದ, ಮೀಡಿಯ ಕ್ಲಬ್ ಅಧ್ಯಕ್ಷ ದೇವು ನಾಗನೂರು, ಕಾಯ9 ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ಬೀ.ಆರ್,ಕವಿ ಸಿರಾಜ್ ಬಿಸರಳ್ಳಿ ಸೇರಿದಂತೆ ಇತರರು ಆಗಮಿಸುವರು,  ನಂತರ ಗೋಷ್ಠಿ 1 ರಚುಟುಕು ಸಾಹಿತ್ಯ ಬೆಳೆದು ಬಂದ ಬಗೆ ಕುರಿತು ಶಿ. ಕಾ.ಬಡಿಗೇರ ಅವರು ಉಪನ್ಯಾಸ ನೀಡಲಿದ್ದಾರೆ,  ಡಾ.ಮಹಾಂತೇಶ್ ಮಲ್ಲನಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ, ಸಾಹಿತಿಗಳಾದ ರವಿತೇಜ ಅಬ್ಬಿಗೇರಿ,ಡಾ.ಬಸವರಾಜ್ ಪೂಜಾರ್,  ಬೀರ​‍್ಪ ಅಂಡಗಿ, ಕೋಮಲಾ ಕುದರಿ ಮೋತಿ, ಬಸವರಾಜ್  ಶೀಲವಂತರ, ಡಾ.ಬಸವರಾಜ್ ಗಡಾದ, ಡಾ.ಫಕೀರ​‍್ಪ ವಜ್ರಬಂಡಿ, ಮಹಬೂಬ ನದಾಫ್ ಅತಿಥಿಗಳಾಗಿ ಆಗಮಿಸುವರು, ಗೋಷ್ಠಿ 2 ರಲ್ಲಿ ಕೊಪ್ಪಳ ತಾಲ್ಲೂಕು ಅಭಿವೃದ್ದಿ  ಒಂದು ಅವಲೋಕನ ಕುರಿತು ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಅವರು  ಕುರಿತು ವಿಷಯ ಮಂಡಿಸಲಿದ್ದಾರೆ,