ಸಾಹಿತ್ಯ ಕ್ಷೇತ್ರಕ್ಕೆ ಹನುಮಂತಪ್ಪ ಅಂಡಗಿ ಕೊಡುಗೆ ಅಪಾರ:ಡಾ.ಬಿ.ಕೆ.ರವಿ

Hanumanthappa Andagi's contribution to the field of literature is immense: Dr. B.K. Ravi

ಸಾಹಿತ್ಯ ಕ್ಷೇತ್ರಕ್ಕೆ ಹನುಮಂತಪ್ಪ ಅಂಡಗಿ ಕೊಡುಗೆ ಅಪಾರ:ಡಾ.ಬಿ.ಕೆ.ರವಿ 

ಕೊಪ್ಪಳ 10: ಸಾಹಿತ್ಯ ಕ್ಷೇತ್ರಕ್ಕೆ ಡಾ.ಹನುಮಂತಪ್ಪ ಅಂಡಗಿ ಅವರ ಕೊಡುಗೆಯು ಅಪಾರವಾಗಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು. ಅವರು ರವಿವಾರ ನಗರದ ಸರಕಾರಿ ನೌಕರರ ಭವನದಲ್ಲಿ ಬೆಳಕು ಚಾರಿಟೇಬಲ್ ಟ್ರಸ್ಟ್‌ ಬೆಂಗಳೂರು ಹಾಗೂ ಅರುಣೋದಯ ಶಿಕ್ಷಣ ಮತ್ತು ಗ್ರಾಮೀಣಾವೃದ್ದಿ ಸಂಸ್ಥೆ ಚಿಲವಾಡಗಿ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಧನ್ವಾ ಪ್ರಶಸ್ತಿ ಪ್ರದಾನ ಹಾಗೂ ದಿ.ಡಾ.ಹನುಮಂತಪ್ಪ ಅಂಡಗಿ ಅವರ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಡಾ.ಹನುಮಂತಪ್ಪ ಅಂಡಗಿ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಜಾನಪದ ಹಾಡುಗಳನ್ನು ಹಾಡುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದಾರೆ.ಪ್ರೌಢ ಶಾಲೆಯ ಶಿಕ್ಷಕನಾಗಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ತನ್ನ ವೃತ್ತಿಯನ್ನು ನಿರ್ವಹಿಸುವುದರ ಜೊತೆ ಜೊತೆಯಲ್ಲಿ ಸಮಾಜ ವಿವಿಧ ಗಣ್ಯರ ಜೀವನ ಹಾಗೂ ಅವರ ಸಾಧನೆಯ ಕುರಿತಾಗಿ ಅಭಿನಂದನಾ ಗ್ರಂಥಗಳನ್ನು ರಚಿಸುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲಿ ಸಮಾನವಾಗಿ ನೋಡುವುದರ ಜೊತೆಗೆ ಅವರಿಗೆ ಅವಕಾಶಗಳನ್ನು ಒದಗಿಸಿ ಕೊಟ್ಟಾಗ ಮಾತ್ರ ಮಹಿಳಾ ದಿನಾಚರಣೆಗೆ ಮಹತ್ವ ಬರಲು ಸಾಧ್ಯವಾಗುತ್ತದೆ.ಸಮಾಜದಲ್ಲಿ ಮಹಿಳೆಯ ಪಾತ್ರ ಬಹಳ ಮಹತ್ವದಾಗಿದೆ ಎಂದು ಹೇಳಿದರು.  ಸಾಹಿತಿ ಸುರೇಶ ಕಂಬಳಿ ಅವರ ತುಂಡು ಚಂದಿರ ಕೃತಿಯನ್ನು ಬಿಡುಗಡೆಗೊಳಿಸಿದ ಸರಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ ಮಾತನಾಡಿ,ಸುರೇಶ ಕಂಬಳಿ ಅವರು ಈಗಾಗಲೇ ಹಲವಾರು ಕೃತಿಗಳನ್ನು ರಚನೆ ಮಾಡುವ ಮೂಲಕ ಯುವ ಸಾಹಿತಿಯಾಗಿ ಬೆಳೆಯುತ್ತಿದ್ದಾರೆ.ತುಂಡು ಚಂದಿರ ಎಂಬ ಕೃತಿಯು ಕುಡಾ ಬಹಳ ಉತ್ತಮವಾದ ಕೃತಿಯಾಗಿದೆ.ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು.ಡಾ.ಹನುಮಂತಪ್ಪ ಅಂಡಗಿ   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಕು ಚಾರಿಟೇಬಲ್ ಟ್ರಸ್ಟ್‌ ನ ಗೌರವ ಸಲಹೆಗಾರರಾದ ಬೀರ​‍್ಪ ಅಂಡಗಿ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಾಲೂಕಿನ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ 21 ಜನ ಶಿಕ್ಷಕರನ್ನು ಕ್ಲಸ್ಟರ್ ಗೆ ಒಬ್ಬರಂತೆ ಯಾವುದೇ ಅರ್ಜಿಯನ್ನು ಆಹ್ವಾನಿಸದೇ ಧನ್ವಾ ಪ್ರಶಸ್ತಿ ನೀಡಲಾಗುತ್ತಿದೆ.ಮುಂದಿನ ವರ್ಷ ವಿವಿಧ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಗುರುತಿಸಿ  ಅವರಿಗೂ ಕೂಡಾ ಪ್ರಶಸ್ತಿ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು. ವಾರ್ತ ಮತ್ತು ಜನ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ ಮಾತನಾಡುತ್ತಾ,ಡಾ.ಹನುಮಂತಪ್ಪ ಅಂಡಗಿ ಅವರು ಎಲ್ಲಾರ ಜೊತೆಯಲ್ಲಿ ಸ್ನೇಹಮಹಿಯಾಗಿ ಇರುತ್ತಿದ್ದರೂ.ಅವರು ಇನ್ನೂ ಬದುಕಬೇಕು ಎಂಬ ಅವರಿಗೆ ಇತ್ತು.ಆದರೆ ಕ್ಯಾನ್ಸರ್ ಕಾಯಿಲೆ ಅವರನ್ನು ಬಿಡಲಿಲ್ಲಾ.ಅವರ ಹೆಸರು ಉಳಿಯುವ ಹಾಗೇ ಮುಂದಿನ ದಿನಮಾನಗಳಲ್ಲಿ ಕಾರ್ಯಕ್ರಮವನ್ನು ಆಯೋಜನೆಯನ್ನು ಮಾಡುವುದರ ಮೂಲಕ ಮುಂದಿನ ಪಿಳಿಗೆಯು ಕೂಡಾ ಅವರ ಸಾಧನೆಯನ್ನು ಅರಿಯುವಂತಾಗಬೇಕು ಎಂದು ಹೇಳಿದರು. ನಗರಸಭೆಯ ಅಧ್ಯಕ್ಷರಾದ ಅಮ್ಜದ ಪಟೇಲ ಸಾವಿತ್ರಿಬಾ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸಾಹಿತಿಗಳಾದ ಈಶ್ವರ ಹತ್ತಿ,ಸಿದ್ದಲಿಂಗಪ್ಪ ಕೊಟ್ನೇಕಲ್,ಚಲನಚಿತ್ರ ಅಕಾಡಮಿಯ ಸದಸ್ಯರಾದ ಸಾವಿತ್ರಿ ಮುಜುಮದಾರ ಮಾತನಾಡಿದರು. 21 ಜನ ಶಿಕ್ಷಕರಿಗೆ ಧನ್ವಾ ಪ್ರಶಸ್ತಿಯನ್ನು ಸಚಿವರಾದ ಶಿವರಾಜ ತಂಗಡಗಿ,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ,ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ಬಾಲಭವನ ಸೊಸೈಟಿಯ ಅಧ್ಯಕ್ಷರಾದ ಬಿ.ಆರ್‌.ನಾಯ್ಡು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ,ಮಾಧ್ಯಮ ಅಕಾಡಮಿಯ ಸದಸ್ಯರಾದ ನಿಂಗಜ್ಜ.ಕೆ.,ಜಾನಪದ ಅಕಾಡಮಿಯ ಸದಸ್ಯರಾದ ಮಹೆಬೂಬ ಕಿಲ್ಲೇದಾರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ,ನೌಕರರ ಸಂಘದ ಜಂಟಿ ಕಾರ್ಯದರ್ಶಿ ನಾಗರಾಜ ಕುಷ್ಟಗಿ,ನಿರ್ದೇಶಕರಾದ ಪ್ರಾಣೇಶ ಪೂಜಾರ,ಶರಣಪ್ಪ ರಡ್ಡೇರ,ಜಾಹೀರ,ಪತ್ತಿನ ಸಂಘದ ನಿರ್ದೇಶಕರಾದ ಹನುಮಂತಪ್ಪ ಕುರಿ,ಮಲ್ಲಪ್ಪ ಗುಡದನ್ನವರ ಸೇರಿದಂತೆ ಅನೇಕರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಫರೀದಾಬೇಗಂ ನಿರೂಪಿಸಿದರು. ಶಿಕ್ಷಕಿ ಭಾರತಿ ಹವೆಳೆ ಪ್ರಾರ್ಥನೆ ನೇರವೇರಿಸಿದಳು.ಶಿಕ್ಷಕಿ ಸುಜಾತ ಕುರಿ ಸ್ವಾಗತಸಿ,ಗೀತಾ.ಎಸ್‌.ಎಂ. ವಂದಿಸಿದರು.