ಭಕ್ತಿ ಪೂರ್ವಕ ಜರುಗಿದ ಹನುಮಾನ್ ಜಯಂತಿ
Hanuman Jayanti celebrated with devotion
ಯಮಕನಮರಡಿ 03: ಸಮೀಪದ ಇಂದ್ರಾ ನಗರ ದಲ್ಲಿ ದಿನಾಂಕ 2 ರಂದು ಶ್ರೀ ಹನುಮಾನ್ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು ಗ್ರಾಮದ ಯುವಕಮಿತ್ರರು ಹಾಗೂ ಹಿರಿಯರು ಸೇರಿ ಶ್ರೀ ಹನುಮಾನ್ ದೇವರಿಗೆ ರುದ್ರಾಭಿಷೇಕ ಮಹಾಪ್ರಸಾದ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿ ಇಡೀ ಗ್ರಾಮದ ಜನರಿಗೆ ಸಾಯಂಕಾಲ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು ಎಲ್ಲ ಯುವಕ ಮಿತ್ರರು ಭಕ್ತಿ ಪೂರ್ವಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹನುಮಾನ್ ದೇವರ ಕೃಪೆಗೆ ಪಾತ್ರರಾದರು ಯುವಕ ಮಿತ್ರರು ಮಾತನಾಡುತ್ತಾ ನಮ್ಮ ಗ್ರಾಮದ ಎಲ್ಲ ಕಾರ್ಯಕ್ರಮಗಳಲ್ಲಿ ನಾವು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದು ಹೇಳಿದರು ನಮ್ಮ ಎಲ್ಲ ಕಾರ್ಯಕ್ರಮಗಳನ್ನು ನಾವು ರಾಜಕೀಯ ರಹಿತ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿರ್ಧರಿಸಿದ್ದು ಇನ್ನು ಮುಂದೆ ಗ್ರಾಮದಲ್ಲಿ ಬೇಕಾಗುವ ಅನುಕೂಲತೆಗಳನ್ನು ಎಲ್ಲರೂ ಯುವಕಮಿತ್ರರು ಒಗ್ಗಟ್ಟಿನಿಂದ ಮಾಡುತ್ತೇವೆ ಎಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 