ಭಗವಾನ ಆದಿನಾಥ ಮೂರ್ತಿ ಹಸ್ತಾಂತರ
ಯಮಕನಮರಡಿ 25: ಸ್ಥಳೀಯ ಲಾರಿ ಚಾಲಕ ಅಬ್ಬಾಸ ಫಣಿಬಂದ ಅವರು ಮುಂಬೈದಿಂದ ಸ್ವಗ್ರಾಮಕ್ಕೆ ಬರುತ್ತಿದ್ದಾಗ ಪೂನಾ ನಗರದ ಹೊರವಲಯದಲ್ಲಿ ಭಗವಾನ ಆದಿನಾಥ ಸಿಮಂದರ್ ಸ್ವಾಮಿಯ ಶಿಲಾ ಮೂರ್ತಿಯು ಸಿಕ್ಕಿದ್ದು ಅದನ್ನು ಚಾಲಕ ಅಬ್ಬಾಸ ಇತನು ನೋಡಿ ತಕ್ಷಣ ಶಿಲಾಮೂರ್ತಿಯನ್ನು ತೆಗೆದುಕೊಂಡು ಬಂದು ಯಮಕನಮರಡಿ ಗ್ರಾಮದ ಜೈನ ಧರ್ಮದ ಕುಲಬಾಂಧವರಾದ ಮಹಾವೀರ ಬಿಲ್ಲನ್ನವರ ಅವರಿಗೆ ಸಲ್ಲಿಸಿದರು.
ಅವರು ಶಿಲಾ ಮೂರ್ತಿಯನ್ನು ತೆಗೆದುಕೊಂಡು ಸಮಾಜದ ಜನರಿಗೆ ತಿಳಿಸಲು ವಾಟ್ಸಾಪ್ ಮೂಲಕ ಸುದ್ದಿಜಾಲದಲ್ಲಿ ಹಾಕಿದಾಗ ಅದನ್ನು ನೋಡಿ ಬೆಳಗಾವಿಯ ನಿತೇಶ ಪಿ ಜೈನ, ಹಾಗೂ ಅಂಕಿತ ಪೋರವಾಲ, ದರ್ಶನ ಜಯಂತ ಪಟೇಲ, ಮಹೇಶ ಪಟೇಲ, ಇವರು ದೂರವಾಣಿ ಮೂಲಕ ಮಹಾವೀರ ಬಿಲ್ಲನ್ನವರನ್ನು ಸಂಪರ್ಕಿಸಿ ಸದರ ಶಿಲಾ ಮೂರ್ತಿಯನ್ನು ತೆಗೆದುಕೊಂಡು ಹೊಗಲು ಯಮಕನಮರಡಿಗೆ ಬಂದಾಗ ಭೆೆಟ್ಟಿ ನೀಡಿ ಮೂರ್ತಿಯನ್ನು ರಾಜಸ್ಥಾನಕ್ಕೆ ವಾಪ್ಪಸ್ಸು ಕಳಿಸುವ ಮೂಲಕ ಭರವಸೆ ನೀಡಿದರು.
ಜೈನ ಧರ್ಮದ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ತಾವು ಹಸ್ತಾಂತರದ ಮೂಲಕ ಪಡೆದುಕೊಂಡರು. ಗ್ರಾಮದ ಜೈನ ಮುಖಂಡರಾದ ಅಶೋಕ ರಣದೇವಿ, ಶ್ರಿಕಾಂತ ಭೋರನ್ನವರ, ಪತ್ರಕರ್ತರಾದ ಗೋಪಾಲ ಚಪಣಿ ಹಾಗೂ ಮಹಾವೀರ ಬಿಲ್ಲನ್ನವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಭಕ್ತಿ ಪೂರ್ವಕ ಶಿಲಾ ಮೂರ್ತಿಯನ್ನು ಅಂಕಿತ ಪೋರವಾಲ ಅವರಿಗೆ ಹಸ್ತಾಂತರಿಸಿದರು.