ನ.16ರಂದು ನಗರದಲ್ಲಿ ಹಾಫ್ ಮ್ಯಾರಾಥಾನ್

ನ.16ರಂದು ನಗರದಲ್ಲಿ ಹಾಫ್ ಮ್ಯಾರಾಥಾನ್  Half marathon in the city on November 16th

ಬೆಳಗಾವಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ ವತಿಯಿಂದ ‘ಪ್ರತಿಯೊಂದು ಹೆಜ್ಜೆಗೂ ಒಂದೊಂದು ಕಥೆಯಿದೆ’ ಎಂಬ ಧ್ಯೇಯವಾಕ್ಯದೊಂದಿಗೆ ನ.16ರಂದು ನಗರದಲ್ಲಿ ಹಾಫ್ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಶಶಿಕಾಂತ ನಾಯ್ಕ ಹೇಳಿದರು.   ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಅನೇಕ ಓಟಗಾರರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 3ಕಿಮೀ ಫನ್ ರನ್ ಆಗಿದ್ದು, ಉಳಿದ ವಿಭಾಗಗಳೆಲ್ಲವೂ ಸ್ಪರ್ಧಾತ್ಮಕವಾಗಿರುತ್ತವೆ. ಆಯಾ ವಿಭಾಗದ ವಿಜೇತರಿಗೆ ಬಹುಮಾನಗಳನ್ನೂ ಸಹ ನೀಡುತ್ತಿದ್ದೇವೆ. ನೋಂದಾಯಿತ ಓಟಗಾರರ ಹೆಸರುಗಳನ್ನು ಆಧರಿಸಿ ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯದ ವಿಜೇತರನ್ನು ಆಯ್ಕೆ ಮಾಡಲಿದ್ದೇವೆ. ವಾಯವ್ಯ ಲ್ಯಾಬ್, ಟಿ ಟೋಸ್ಟ್‌ ಆ್ಯಂಡ್ ಕೋ, ಕೆಎಲ್‌ಇ ಸೊಸೈಟಿ, ಎಂಎಲ್‌ಐಆರಿ​‍್ಸ, ಜ್ಯೂನಿಯರ್ ಲೀಡರ್ಸ್‌ ವಿಂಗ್, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕ್ರೀಡ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಈ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದರು. ಕೆಎಲ್‌ಇ ಸೊಸೈಟಿಯಿ ಲಿಂಗರಾಜ್ ಕಾಲೇಜು ಮೈದಾನದಿಂದ ಅಂಗಡಿ ಕಾಲೇಜ್‌ವರೆಗೆ ನಡೆಯಲಿದೆ ಎಂದು ವಿವರಿಸಿದರು. ಆರೋಗ್ಯಕರ ಜೀವನ, ಸದೃಢತೆ ಹಾಗೂ ಸಮುದಾಯದಲ್ಲಿ ಉತ್ಸಾಹಭರಿತ ವಾತಾವರಣ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಹಾಫ್ ಮ್ಯಾರಾಥಾನ್ 21ಕಿಮೀ, 10ಕಿಮೀ, 5ಕಿಮೀ ಹಾಗೂ 3ಕಿಮೀ ವಿಭಾಗದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು. 

ಮ್ಯಾರಾಥಾನ್‌ಗೂ ಮುಂಚೆ ನ. 13 ಮತ್ತು 14ರಂದು ನಗರದ ನಗರದ ಮಿಲೇನಿಯಂ ಗಾರ್ಡನ್‌ನಲ್ಲಿ ಡಾ.ಸಾಠೆಯವರ ಆರೋಗ್ಯ ಮಿತ್ರ ಫೌಂಡೇಶನ್ ಸಹಯೋಗದಲ್ಲಿ ಆರೋಗ್ಯ ಮತ್ತು ಫಿಟನೆಸ್ ಮೇಳವನ್ನು ಆಯೋಝಿಸಲಾಗಿತ್ತು. ಈ ಮೇಳದಲ್ಲ ಸದೃಢ ಆರೋಗ್ಯಕ್ಕೆ ಸಂಬಂಧಿಸಿದ ಮಳಿಗೆಗಳು, ಮಕ್ಕಳಿಗಾಗಿ ಕ್ರಿಯಾತ್ಮಕ ಆಟಗಳು, ಸ್ಪರ್ಧೆಗಳು ಹಾಗೂ ಉಪನ್ಯಾಸಗಳು ನಡೆಯಲಿವೆ ಎಂದು ಹೇಳಿದರು.  ಲೋಕೇಶ ಹೊಂಗಲ, ನಿಲೇಶ ಬಂಗ, ಸಚಿವ ಕುಲಗೋಡ, ಉಮೇಶ ರಾಮಗುರವಾಡಿ, ಡಿ.ಬಿ.ಪಾಟೀಲ, ಡಾ.ವರ್ಷಾ ಸಾಠೆ, ನರೇಶ ಕುಲಗೋಡ, ಸಂಜೀವ ದೇಶಪಾಡೆ, ಕೆ.ವಿ.ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.