ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನಲೆ ಧ್ವಜಾರೋಹಣ ನೆರವೇರಿಸಿದ ಹೆಚ್‌.ಗುರುರಾಜ

ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನಲೆ ಧ್ವಜಾರೋಹಣ ನೆರವೇರಿಸಿದ ಹೆಚ್‌.ಗುರುರಾಜ H. Gururaja hoisted the flag on the occasion of All India Cooperation Week.

ಕಂಪ್ಲಿ   14:  ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನಲೆ ಸಹಕಾರ ಸಂಘದ ಉಪಾಧ್ಯಕ್ಷ ಹರಿಜನ ಗುರುರಾಜ ಧ್ವಜಾರೋಹಣ ಶುಕ್ರವಾರ ನೆರವೇರಿಸಿದರು. ನಂತರ ಮುಖ್ಯ ಕಾರ್ಯನಿರ್ವಾಹಕ ಕಟ್ಟೆ ಎರಿ​‍್ರಸ್ವಾಮಿ ಮಾತನಾಡಿ, 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನಮ್ಮ ಎಲ್ಲರ ಸಹಕಾರ ಮನೋಭಾವ, ಪರಸ್ಪರ ನಂಬಿಕೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಅತ್ಯಂತ ಮಹತ್ವದ ಕ್ಷಣವೆಂದು ಪರಿಗಣಿಸುತ್ತೇವೆ. ಸಹಕಾರ ಅಂದ್ರೆ ಕೇವಲ ವ್ಯವಸ್ಥೆಯಲ್ಲ,  

ಇದು ಜನಶಕ್ತಿ, ನಂಬಿಕೆ, ಒಗ್ಗಟ್ಟು, ಮತ್ತು ಸಮಾನತೆಯ ಬೆಳಕು. ಬೆಳೆದೇ ಬೆಳೆಸೋಣ, ನಡೆಯದೇ ನಡೆಸೋಣ ಎಂಬ ಮನಸ್ಸಿನಿಂದ ಆರಂಭವಾದ ಈ ಚಳವಳಿ ಇಂದು ಲಕ್ಷಾಂತರ ಜನರ ಜೀವನಕ್ಕೆ ಬೆಳಕು ತಂದಿದೆ. ಈ ಸಂದರ್ಭದಲ್ಲಿ ಸಂಘದ ಸಂಘದ ಅಧ್ಯಕ್ಷ ಕೆ.ರಾಜೇಶ್, ನಿರ್ದೇಶಕರಾದ ಬಿ.ಸೋಮಶೇಖರ, ಕಟ್ಟೆ ಎರಿ​‍್ರಸ್ವಾಮಿ, ಎಲ್‌.ಎಸ್‌.ರುದ್ರ​‍್ಪ, ಕೆ.ಮಹಮದ್ ರಫಿಕ್, ಎಂ.ಸಿದ್ದಲಿಂಗೇಶ್ವರ, ನಾಯಕರ ವಿರೇಶ, ಸಿಬ್ಬಂದಿಗಳಾದ ಕೃಷ್ಣಪ್ಪ, ಗಾದಿಲಿಂಗಪ್ಪ, ಅಶೋಕ್ ಇದ್ದರು. 

ನ.003: ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನಲೆ ಸಹಕಾರ ಸಂಘದ ಉಪಾಧ್ಯಕ್ಷ ಹರಿಜನ ಗುರುರಾಜ ಧ್ವಜಾರೋಹಣ ಶುಕ್ರವಾರ ನೆರವೇರಿಸಿದರು.