ಪ್ರೊ. ಜಿ. ಬಿ. ಸಂಗೋಟೆ ಅವರಿಗೆ ಗುರುವಂದನೆ

ಪ್ರೊ. ಜಿ. ಬಿ. ಸಂಗೋಟೆ ಅವರಿಗೆ ಗುರುವಂದನೆ Guruvandam to Prof. G. B. Sangote

ಬೆಳಗಾವಿ 23 : ನಿವೃತ್ತರಾದ ಪ್ರೊ. ಜಿ. ಬಿ. ಸಂಗೋಟೆಅವರಿಗೆಅವರ ಶಿಷ್ಯವೃಂದದವರಿಂದ ಗುರುವಂದನಾ ಸಮಾರಂಭವನ್ನು ಬೆಳಗಾವಿಯ ಶಿವಬಸವನಗರದಲ್ಲಿರುವ ಸಂಕಪಾಳ ಹೆರಿಟೇಜ್‌ಕೆಫೆಯಲ್ಲಿ ದಿನಾಂಕ 22-02-2026ರಂದು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು. 

ನಿಡಸೋಸಿಯ ಎಸ್‌.ಜೆ.ಪಿ.ಎನ್‌. ಪಾಲಿಟೆಕ್ನಿಕ್‌ಕಾಲೇಜಿನಲ್ಲಿ ಬೋಧಕರಾಗಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಚಾರ್ಯರಾಗಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಪ್ರೊ. ಸಂಗೋಟೆಅವರ ಶ್ರೇಷ್ಠ ಸೇವೆಯನ್ನು ಸ್ಮರಿಸುವಉದ್ದೇಶದಿಂದ ಈ ಕಾರ್ಯಕ್ರಮಆಯೋಜಿಸಲಾಯಿತು. 

ಕಾರ್ಯಕ್ರಮದಲ್ಲಿ 1990ರಿಂದ 1995ರವರೆಗೆ ಪಾಸಾದ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಗುರುಗಳಾದ ಪ್ರೊ. ಸಂಗೋಟೆಯವರ ಮಾರ್ಗದರ್ಶನ, ಆದರ್ಶ ವ್ಯಕ್ತಿತ್ವ, ಪ್ರೇರಣಾದಾಯಕ ಬೋಧನೆ ಹಾಗೂ ಕಷ್ಟಸಮಯದಲ್ಲಿ ನೀಡಿದ ಸಹಕಾರವನ್ನುಕೃತಜ್ಞತೆಯಿಂದ ಸ್ಮರಿಸಿದರು. “ಗುರುಗಳ ಮಾರ್ಗದರ್ಶನವೇ ನಮ್ಮಜೀವನದ ದಿಕ್ಕನ್ನು ತೋರಿಸಿತು” ಎಂದು ಹಳೆಯ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. 

ಗೌರವ ಸೂಚಕವಾಗಿ ಪ್ರೊ. ಜಿ. ಬಿ. ಸಂಗೋಟೆಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಅವರತಾಯಿಯವರನ್ನೂ ಹಾಗೂ ಧರ್ಮಪತ್ನಿಯವರನ್ನೂ ಸಹ ಸನ್ಮಾನಿಸಿ ಗೌರವಿಸಲಾಯಿತು. 

ಗುರುಗಳ ಪರಿಚಯವನ್ನು ಶ್ರೀ ಸತೀಶ ಬುಳ್ಳನ್ನವರ ಮಾಡಿದರು. ಖ್ಯಾತ ಉದ್ಯಮಿಗಳೂ ಹಾಗೂ ಪರಮಾಪ್ತ ಶಿಷ್ಯರಾದ ಬಸವರಾಜ ಗೋಲಭಾವಿ, ಮಹಮ್ಮದಇಕ್ಬಾಲ, ಬಾರ್ಗೀರ, ಜಮೀಲ ಸಂಗೊಳ್ಳಿ, ಜಗದೀಶ ಬಡಿಗೇರ, ಲಕ್ಷ್ಮಣ ಶೆಂಡೆ, ವಿದ್ಯಾಧರ ನಾಂದ್ರೇ, ಸುರೇಂದ್ರ ಬಡಿಗೇರ, ಶ್ರೀಮತಿ ಲಕ್ಷ್ಮೀತಾಯಿ ಶಿರಗೆ, ಉಮೇಶ ಹಾದಿಮನಿ, ಶಿವಲಿಂಗ ಗುಮಚಿ, ಶಿವಾನಂದ ಮಠದ, ಸದಾನಂದ ಪಾಟೀಲ, ವಿರೂಪಾಕ್ಷ ಚೌಗಲಾ, ಸುರೇಶ ಚೌಗಲಾ ದಂಪತಿಗಳು, ಕಿರಣದೊಡಮನಿ (ಇಂಜಿನಿಯರ್, ಕೆಇಬಿ) ಸೇರಿದಂತೆಅನೇಕರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭಾರತಿ ಮಠದ ಅವರು ನಿರ್ವಹಿಸಿದರು. ಎಂ. ಬಿ. ಸಂಕನ್ನವರ ವಂದನಾರೆ​‍್ಣ ಮಾಡಿದರು. ಸಮಾರಂಭದ ಸಮಸ್ತ ಉಸ್ತುವಾರಿಯನ್ನುದಯಾನಂದ ಮಗದುಮ್ಮ ವಹಿಸಿಕೊಂಡಿದ್ದರು. ಈ ಗುರುವಂದನಾ ಸಮಾರಂಭವು ಗುರು-ಶಿಷ್ಯ ಸಂಬಂಧದ ಪಾವಿತ್ರ್ಯವನ್ನು ಮತ್ತೊಮ್ಮೆ ಸ್ಮರಿಸುವಂತಾಗಿತ್ತು.