ವಿಜಯಪುರ ಬಸ್ ನಿಲ್ದಾಣದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಿ: ಗುರುನಾಥ ಆಗ್ರಹ

ವಿಜಯಪುರ ಬಸ್ ನಿಲ್ದಾಣದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಿ: ಗುರುನಾಥ ಆಗ್ರಹ Gurunath demands installation of Rayanna statue at Vijayapura bus stand

             ದೇವರಹಿಪ್ಪರಗಿ 31: ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿಜಯಪುರ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಹತ್ತಿರ ಪ್ರತಿಷ್ಠಾಪಿಸುವಂತೆ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಗುರುನಾಥ ಮುರಡಿ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಹಮ್ಮಿಕೊಂಡಿದ್ದ ನೂತನವಾಗಿ ಆಯ್ಕೆಯಾದ ಕಾನಿಪ ಪದಾಧಿಕಾರಿಗಳಿಗೆ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಪಡೆದ ಸಾತಿಹಾಳ ಶಿಕ್ಷಕರಿಗೆ ಸನ್ಮಾನ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನೇವರಿ ದಿ.09 ರಂದು ವಿಜಯಪುರಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬರಲಿದ್ದು ಅಂದು, ನಗರದ ಬಸ್ ನಿಲ್ದಾಣದ ಮುಂದೆ ನೂತನವಾಗಿ ನಿರ್ಮಿಸಲಾದ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಉದ್ಘಾಟಿಸಲಿದ್ದಾರೆ.

             ಚೆನ್ನಮ್ಮನವರ ಬಲಗೈ ಬಂಟನಾದ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಸ್ಥಾಪಿಸಲು ಬಸ್ ನಿಲ್ದಾಣದಲ್ಲಿ ಭೂಮಿ ಪೂಜೆ ನೆರವೇರಿಸಬೇಕು ಎಂಬುವುದು ಎಲ್ಲಾ ಸಮುದಾಯದ ಒತ್ತಾಯವಾಗಿದೆ. ಶೀಘ್ರದಲ್ಲಿ ಸರ್ಕಾರ ತನ್ನ ಸ್ಪಷ್ಟ ನಿಲವು ತಿಳಿಸಬೇಕು. ಇಲ್ಲದಿದ್ದರೆ ಕಪ್ಪು ಬಾವುಟದ ಸ್ವಾಗತ ಕೊರಬೇಕಾಗುತ್ತದೆ ಎಂದರು. ಹಾಗೂ ಕೆಲ ಮುಖಂಡರು ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿಗಳಿಂದ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಉದ್ಘಾಟನೆ ಮಾಡಿಸಬಾರದು ಎನ್ನುವುದು ಹಾಶಾಸ್ಪದ ಎಂದು ಹೇಳಿದರು.ಮುಖಂಡರಾದ ಪ್ರಕಾಶ ದೊಡಮನಿ, ಸಿದ್ದು ಬುಳ್ಳಾ ಹಾಗೂ ಸುನೀಲ ಮಾಗಿ ಅವರು ಮಾತನಾಡಿ ವಿಜಯಪುರದ ಬಸ್ ನಿಲ್ದಾಣದ ಮುಂದೆ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ಜಾಗವಿದ್ದು, ಸರ್ವ ಸಮುದಾಯದ ಆಗ್ರಹದಂತೆ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು.

            ಇದೇ ಸಂದರ್ಭದಲ್ಲಿ ಮುಖಂಡರುಗಳಾದ ನಾಗಪ್ಪ ಶಿವೂರ,ಶರಣು ಪೂಜಾರಿ, ಅಪ್ಪು ಪಟ್ಟೇದ, ಮಾಳಪ್ಪ ಪೂಜಾರಿ, ಪರಮಾನಂದ ಪೂಜಾರಿ, ಗುರುಸಿದ್ಧ ಪೂಜಾರಿ, ಜಟ್ಟೆಪ್ಪ ಪೂಜಾರಿ, ಶರಣಪ್ಪ ಪೂಜಾರಿ, ಸಿದ್ದು ದೊಡ್ಡಿನ,ಭೀರು ದೇವೂರ, ಚಂದು ಪೂಜಾರಿ, ಗೂಳಪ್ಪ ಚೌದ್ರಿ, ಯಮನಪ್ಪ, ಆನಂದ್ಯ ವಗ್ಗರ,ಮಾಳು ಪೂಜಾರಿ, ಅಮೋಗಿ ಕಗ್ಗೋಡ, ಸಿದ್ದು ಬಮನಳ್ಳಿ, ಮಾಳು ಹತ್ತರ್ಕಿಹಾಳ, ಜಗ್ಗು ದೊಡ್ಡಿನ, ರೇವಣಸಿದ್ದ ಯಾಳವಾರ ಸೇರಿದಂತೆ ಹಲವಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.