ಗುರುದೇವ ಡಾ. ರಾನಡೆಯವರ ಪುಣ್ಯತಿಥಿ ಆಚರಣೆ
Gurudev Dr. Ranade's death anniversary celebration
ಗುರುದೇವ ಡಾ. ರಾನಡೆಯವರ ಪುಣ್ಯತಿಥಿ ಆಚರಣೆ
ಬೆಳಗಾವಿ 07: ಗುರುದೇವ ಡಾ. ಆರ್.ಡಿ. ರಾನಡೆಯವರ 68ನೇ ಪುಣ್ಯತಿಥಿ ಕಾರ್ಯಕ್ರಮ ದಿ. 6ರಂದು ಗುರುದೇವ ಡಾ. ರಾನಡೆ ಮಂದಿರ ಹಿಂದವಾಡಿ ಬೆಳಗಾವಿಯಲ್ಲಿ ವಿದ್ಯಾರ್ಥಿ ಸಮಾವೇಶವನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೆಎಲ್‌ಎಸ್ ಆಯ್‌ಎಮ್‌ಇಆರ್ ಹಾಗೂ ಕೆಎಲ್‌ಇ ಎಮ್‌ಬಿಎ ಮತ್ತು ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು 200ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದರು.
ರೋಟರಿ ಜಿಲ್ಲಾ ಗವರ್ನರ್ ಶರದ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗುರುದೇವ ರಾನಡೆಯವರ ಸಿದ್ಧಾಂತವಾದ ದೇವನೊಬ್ಬ ಜಗವೊಂದೆ ಎಂಬ ಸಿದ್ಧಾಂತವನ್ನು ನಾವು ನಂಬುತ್ತೇವೆ. ನಮ್ಮ ಕಾರ್ಯ ನಮ್ಮ ಬಗ್ಗೆ ಹೇಳಬೇಕು. ಆರೀತಿಯಲ್ಲಿ ಸೇವಾ ಕಾರ್ಯವನ್ನು ನಾವು ಮಾಡಬೇಕು. ಎಸಿಪಿಆರ್. ಸಂಸ್ಥೆ ಆಧ್ಯಾತ್ಮ ಮತ್ತು ಶಿಕ್ಷಣ ವಿಭಾಗದಲ್ಲಿ ಆ ಸೇವೆಯನ್ನು ಮಾಡುತ್ತಲಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಪ್ರೋ. ಡಿ.ಜಿ.ಕುಲಕರ್ಣಿ ಅವರು ಸಂತೋಷದ ತತ್ವ: ಅಂದು ಇಂದು ಎಂಬ ವಿಷಯದ ಮೇಲೆ ಮಾತನಾಡಿ ನಾವು ಹೇಗೆ ಸಂತೋಷವಾಗಿ ಇರಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ಕೊಟ್ಟರು.
ಇನ್ನೊಬ್ಬ ಉಪನ್ಯಾಸಕ ಡಾ. ಉಮೇಶ ಭೂಷಿ ಮಾತನಾಡಿ ದೈಹಿಕ ಮತ್ತು ಮಾನಸಿಕ ಸಂತೋಷ ಎಂಬ ಕುರಿತು ಮಾತನಾಡಿ ಆಸೆಯೇ ದುಖಃಕ್ಕೆ ಕಾರಣ. ನೀರೀಕ್ಷೆ ಕಡಿಮೆ ಇದ್ದಷ್ಟು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂತೋಷವಾಗಿ ಇರುತ್ತೇವೆ ಎಂದು ನುಡಿದರು.
ಸ್ವಗತ ಹಾಗೂ ಆಶಯ ಭಾಷಣ ಮಾಡಿದ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಿ.ಝಿರಲಿ ಗುರುದೇವರ ಆಶಯದಂತೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಮತ್ತು ತತ್ವಶಾಸ್ತ್ರದ ಪರಿಚಯ ನೀಡುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಅವರ ಪುಣ್ಯತಿಥಿ ನಿಮಿತ್ತ ವಿದ್ಯಾರ್ಥಿಗಳನ್ನು ಕರಿಸಿ ತತ್ವ ಶಾಸ್ತ್ರದ ಪರಿಚಯದೊಂದಿಗೆ ನೈತಿಕ ಮೌಲ್ಯವನ್ನು ನೀಡುವ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಧಿಕಾ ತರಳೆ ಸುಮಧುರವಾಗು ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.ಸಲೋನಿ ಪಾಟೀಲ ನಿರೂಪಿಸಿದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 