ಗೃಹಲಕ್ಷ್ಮೀ ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆ: ರೆಡ್ಡಿ ಶ್ರೀನಿವಾಸ

Grihalakshmi subsidy to be deposited in beneficiaries' accounts: Reddy Srinivas

ಗೃಹಲಕ್ಷ್ಮೀ ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆ: ರೆಡ್ಡಿ ಶ್ರೀನಿವಾಸ 

ಕೊಪ್ಪಳ 12: ರಾಜ್ಯ ಸರ್ಕಾರದ ಪ್ರಮುಖ ಮಹತ್ವಕಾಂಕ್ಷೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ತಿಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಡಿಸೆಂಬರ್‌-2024ರ ಮಾಹೆಯ ಮತ್ತು ಇನ್ನುಳಿದ ಬಾಕಿ ಕಂತುಗಳ ಮೊತ್ತಗಳ ಪೈಕಿ ಕೊಪ್ಪಳ ಜಿಲ್ಲೆಯ 3,13,734 ಫಲಾನುಭವಿಗಳಿಗೆ ಒಟ್ಟು 62.74 ಕೋಟಿ ರೂ. ಮೊತ್ತವನ್ನು ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಜಮೆಯಾಗಿದ್ದು, ಜಿಲ್ಲೆಯ ತಾಲೂಕುಗಳಾದ ಕೊಪ್ಪಳದ 83,632 ಫಲಾನುಭವಿಗಳು, ಕುಷ್ಟಗಿಯ 62,568 ಫಲಾನುಭವಿಗಳು, ಯಲಬುರ್ಗಾದ 57,670 ಫಲಾನುಭವಿಗಳು, ಕಾರಟಗಿ ಮತ್ತು ಕನಕಗಿರಿ ಒಳಗೊಂಡಂತೆ ಗಂಗಾವತಿ ತಾಲ್ಲೂಕಿನ 1,09,864 ಫಲಾನುಭವಿಗಳ ಖಾತೆಗೆ ಸಹಾಯಧನವು ಜಮೆಯಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಕಛೇರಿಯ ಪ್ರಕಟಣೆ ತಿಳಿಸಿದೆ.