ಗದಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ : 79125 ಫಲಾನುಭವಿಗಳಿಗೆ ಪಾವತಿ

ಗದಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ : 79125 ಫಲಾನುಭವಿಗಳಿಗೆ ಪಾವತಿ  Grihalakshmi in Gadag district: Payment to 79125 beneficiaries

 ಗದಗ  31: ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸೆಪ್ಟೆಂಬರ್ 2025 ರ ಮಾಹೆಯವರೆಗೆ ತಲಾ 2,000 ರೂ.ಗಳಂತೆ ಗದಗ ತಾಲೂಕಿನ 79125 ಫಲಾನುಭವಿಗಳಿಗೆ  15.82 ಕೋಟಿ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು  ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಸಭೆಯ ಅಧ್ಯಕ್ಷರಾದ ಅಶೋಕ ಮಂದಾಲಿ  ತಿಳಿಸಿದರು. 

ಗದಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ  ಸೆಪ್ಟೆಂಬರ್ -2025 ರ ಮಾಹೆಯಲ್ಲಿ  ಒಟ್ಟು 2,50,165 ಫಲಾನುಭವಿಗಳಿಗೆ 50,03,30,000 / ರೂ. ಪಾವತಿಸಲಾಗಿದೆ  ಪಾವತಿಗೆ  ಬಾಕಿ ಉಳಿದಿರುವ ಅರ್ಜಿಗಳನ್ನು ಕೂಲಂಕುಷವಾಗಿ ಪರೀಶೀಲಿಸಿ ಕ್ರಮ ಕೈಗೊಳ್ಳಬೇಕು.  ಗದಗ ಮತಕ್ಷೇತ್ರದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರ ಪಟ್ಟಿಯನ್ನು ಗ್ಯಾರಂಟಿ ಸಮಿತಿಗೆ  ಸಲ್ಲಿಸಬೇಕು.  ಅರ್ಹ ಫಲಾನುಭವಿಯು  ಪಡಿತರ ಚೀಟಿ ಸೌಲಭ್ಯದಿಂದ ವಂಚಿತನಾಗಬಾರದು.  ಯಾವುದೇ ಅಮಿಷಕ್ಕೊಳಗಾಗದೇ ಬಡಜನರಿಗೆ ಹಸಿವು ನೀಗಿಸುವ  ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು  ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದರು.  

ಗದಗ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರಾದ ಕೃಷ್ಣಗೌಡ ಎಚ್ ಪಾಟೀಲ ಅವರು ಮಾತನಾಡಿ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಪಾವತಿಯಲ್ಲಿ ವಿಳಂಬವಾದರೂ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಬದ್ಧತೆ ಸರ್ಕಾರದ್ದಾಗಿದೆ. ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಆರ್ಥಿಕಾಭಿವೃದ್ಧಿಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸದಾ ಸನ್ನದ್ಧ ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿದೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.  ಇದೇ ಸಂದರ್ಭದಲ್ಲಿ  ಸಭೆಯಲ್ಲಿ ಶಕ್ತಿ ಹಾಗೂ ಯುವ ನಿಧಿ ಯೋಜನೆ  ಪ್ರಗತಿ ಪರೀಶೀಲನೆ ಜರುಗಿತು.  

ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಶಂಭು ಕಾಳೆ,  ಮೀನಾಕ್ಷಿ ಬೆನಕಣ್ಣವರ, ಸಾವಿತ್ರಿ ಹೂಗಾರ, ದಯಾನಂದ ಪವಾರ, ಸಂಗು ಕರೆಕಲಮಟ್ಟಿ, ಎನ್‌.ಬಿ.ದೇಸಾಯಿ, ಸಂಗಮೇಶ ಎಂ ಹಾದಿಮನಿ, ರಮೇಶ ಹೊನ್ನಿನಾಯ್ಕರ , ದೇವರಡ್ಡಿ ತಿರ್ಲಾಪುರ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್‌ಬಾರಕೇರ , ಭಾಷಾ ಮಲ್ಲಸಮುದ್ರ,  ತಾ.ಪಂ. ಕಾರ್ಯನಿರ್ವಹಣಾದಿಕಾರಿ ಮಲ್ಲಯ್ಯ ಕೊರವನವರ,  ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ,ವಿ ಸೇರಿದಂತೆ ಗ್ಯಾರಂಟಿ ಯೋಜನೆಯ ಅಧಿಕಾರಿಗಳು ಹಾಜರಿದ್ದರು.