ಜಗತ್ತಿನಲ್ಲಿ ಶ್ರೇಷ್ಠತೆಯು ಕಳಾಕಳಿಯಿಂದ ಬರುತ್ತದೆ: ಸೋಮರಡ್ಡಿ ಅಳವಂಡಿ.
Greatness in the world comes from humility: Somaraddi Alavandi.
ಜಗತ್ತಿನಲ್ಲಿ ಶ್ರೇಷ್ಠತೆಯು ಕಳಾಕಳಿಯಿಂದ ಬರುತ್ತದೆ: ಸೋಮರಡ್ಡಿ ಅಳವಂಡಿ.
ಕೊಪ್ಪಳ 13 : ಜಗತ್ತಿನಲ್ಲಿ ಶ್ರೇಷ್ಠತೆಯು ಕಳಾಕಳಿಯಿಂದ ಬರುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ ಅವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ದಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೊಪ್ಪಳ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ-2025 ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.ಅವರು ಮುಂದುವೆರೆದು ಮಾತನಾಡಿ ಎಲ್ಲರೂ ಮಾನವೀಯ ಸೇವೆಯನ್ನು ಮಾಡಬೇಕು. ನಮ್ಮ ಅಕ್ಕ ಪಕ್ಕ ದವರು ಸಂಕಷ್ಟಕ್ಕೆ ಒಳಪಟ್ಟಾಗ ಅವರ ನೆರವಿಗೆ ದಾವಿಸಬೇಕು.ಎಲ್ಲರಲ್ಲಿ ಮಾನವೀಯತೆ, ಸಮಾಜದ ಪರ ಕಾಳಜಿ ಇರಬೇಕು. ನೀವು ಅಕ್ಕ್ಕ ಪಕ್ಕ ದ ಸಮಸ್ಯೆಗಳಿಗೆ ಪರಿಹಾರ ಹುಡುಕಿದರೆ ನಿಮ್ಮ ಜೀವನದಾರಿ ಸುಗಮವಾಗುತ್ತದೆ. ನಿಮಗೆ ಉತ್ತಮವಾದ ಅವಕಾಶಗಳು ಇವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ. ವಿದ್ಯಾರ್ಥಿಗಳು ಪ್ರೆಶ್ನೆ ಮಾಡುವ ಮನಸ್ಥಿತಿಯನ್ನು ಬೆಳಿಸಿಕೊಳ್ಳಬೇಕು.
ನಮ್ಮ ಚಿಂತನೆಗಳು ಸಮಾಜ ಮುಖಿವಾಗಿರಬೇಕು. ಕೊಪ್ಪಳದ ರೆಡ್ ಕ್ರಾಸ್ ವತಿಯಿಂದ ಒಂದು ಲಕ್ಷ ಇಪ್ಪತ್ತು ಸಾವಿರ ಜನರಿಗೆ ರಕ್ತ ಕೊಟ್ಟಿದೆ. ರೆಡ್ ಕ್ರಾಸ್ ಘಟಕವು ಅನೇಕ ಜನಪರ ಉಪಯೋಗ ಕೆಲಸಗಳನ್ನು ಮಾಡಿದೆ. ಜಗತ್ತಿನ 198 ದೇಶ ಗಳಲ್ಲಿ ರೆಡ್ ಕ್ರಾಸ್ ಶಾಖೆಗಳು ಇವೆ. ಇದರ ಉದ್ದೇಶ ಮಾನವ ಕಲ್ಯಾಣವಾಗಿದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ನಿರ್ದೇಶಕರಾದ ಡಾ. ಶಿವನಗೌಡ ಪಾಟೀಲ್ ಅವರು ವಿಶ್ವ ರೆಡ್ ಸಂಸ್ಥೆಯ ಇತಿಹಾಸ ಮತ್ತು ಪ್ರಥಮ ಚಿಕಿತ್ಸೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅವರು ಮಾತನಾಡುತ್ತಾ ಒಬ್ಬ ವ್ಯಕ್ತಿಗೆ ಅಪಘಾತವಾದಗ ತಕ್ಷಣ ಸಿಗುವ ಮತ್ತು ತುರ್ತು ಸಂದರ್ಭದಲ್ಲಿ ಸಿಗುವ ಸೌಲಭ್ಯಗಳಿಂದ ಚಿಕಿತ್ಸೆ ಕೊಡಬೇಕು. ಇಲ್ಲಿ ಸಮಯ ಇರುವುದಿಲ್ಲ.
ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಿ ತಿಳಿಸಬೇಕು.ಪರಿಸ್ಥಿತಿಯನ್ನು ಹದಕೇಡದಂತೆ ನೋಡಿಕೊಳ್ಳಬೇಕು. ಗಾಯಳುಗಳಿಗೆ ಧೈರ್ಯ ಕೊಡಬೇಕು. ಇದರ ಮುಖ್ಯ ಉದ್ದೇಶ ಜೀವ ರಕ್ಷಣೆ. ಇದರಿಂದ ಜೀವನ ಚೇತರಿಕೆಗೆ ಸಹಾಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಕಾಮನೂರಿನ ಆಯುರ್ವೇದ ಚಿಕಿತ್ಸಾಲಯದ ವೈದ್ಯಧಿಕಾರಿ ಶ್ರೀ ಮತಿ ಕವಿತ ಹ್ಯಾಟಿ ವವರು ಮಹಿಳಾ ಅರೋಗ್ಯ ಕುರಿತು ಮತ್ತು ಪ್ರಥಮ ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಯವರು ಮಾತನಾಡುತ್ತ ರೆಡ್ ಸಂಸ್ಥೆಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಎಲ್ಲರಲ್ಲಿ ಸೇವಾ ಮನೋಭಾವನೆಯನ್ನು ಬೆಳಿಸಿಕೊಳ್ಳಬೇಕು. ಎಲ್ಲರೂ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ, ಅರಿವು ಮತ್ತು ತಿಳಿವಳಿಕೆ ಇರಬೇಕು. ಇದು ಎಲ್ಲರಿಗೂ ಸಹಾಯವಾಗುತ್ತದೆ ಎಂದು ತಿಳಿದರು.ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ನಿರ್ದೇಶಕರು ಮತ್ತು ಸಂಯೋಜಕರಾದ ರಾಜೇಶ್ ಯಾವಗಲ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ. ಅಶೋಕ ಕುಮಾರ, ಶಿಕ್ಷಣ ಪ್ರೇಮಿ ಬಿ. ಜಿ. ಕರಿಗಾರ, ಕಾಲೇಜಿನ ಹಿರಿಯ ಪ್ರಾಧ್ಯಾಪಕರದಾ ಡಾ. ಪ್ರದೀಪ್ ಕುಮಾರ, ಪ್ರೊ.ವಿಟೋಬ, ಡಾ. ನರಸಿಂಹ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಅಶೋಕ ಕುಮಾರ ನಿರೂಪಿಸಿ, ಸ್ವಾಗತಿಸಿದರು. ಅಕ್ಕಮ್ಮ ಪ್ರಾರ್ಥನೆ ಗೀತೆ ಹಾಡಿದರು. ಡಾ. ಪ್ರದೀಪ್ ಕುಮಾರ ವಂದಿಸಿದರು..
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 