ಲೋಕದರ್ಶನ ವರದಿ
ಕಾರವಾರ 29: ಕೈಗಾದಲ್ಲಿ ಅಣುವಿದ್ಯುತ್ ಉತ್ಪಾದನೆಯ ಘಟಕ 5 ಮತ್ತು 6 ಸ್ಥಾಪಿಸಲು ಕೇಂದ್ರ ಸಕರ್ಾರ ಮುಂದಾಗಿರುವುದನ್ನು ವಿರೋಧಿಸಿ ಕೈಗಾ ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಪಾದಯಾತ್ರೆ ನಡೆಸಿದರು. ಯೋಜನೆಯನ್ನು ತಕ್ಷಣ ಕೈ ಬಿಡಬೇಕು. ನ್ಯೂಕ್ಲಿಯರ್ ಪವರ್ ಕಾಪರ್ೂರೇಶನ್ ಇಂಡಿಯಾಕ್ಕೆ ಕೈಗಾದಲ್ಲಿ ಮತ್ತೆರಡು ಘಟಕ ಸ್ಥಾಪನೆಗೆ ಅನುಮತಿ ನೀಡಿರುವುದನ್ನು ರದ್ದು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಕಾರವಾರ ತಾಲೂಕಿನ ಕದ್ರಾ ಗ್ರಾಮ ಸಮೀಪದ ಕುನರ್ಿಪೇಟೆ ಗ್ರಾಮದ ಮೂಲಕ ಮಲ್ಲಾಪುರ ಗ್ರಾಮಪಂಚಾಯತಿ ಕಚೇರಿ ತನಕ ಸುಮಾರು 6 ಕಿ.ಮೀ. ದೂರ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, 5 ಮತ್ತು 6 ನೇ ಘಟಕ ಸ್ಥಾಪನೆ ಯೋಜನೆ ಕೈಬಿಡಿ ಎಂದು ಘೋಷಣೆ ಕೂಗಿದರು. ಅಣು ವಿಕಿರಣ ಹೊರ ಹಾಕುವ ಮತ್ತು ಜನರ ಆರೋಗ್ಯ ಹಾಳು ಮಾಡುವ ಯೋಜನೆ ಬೇಡವೇ ಬೇಡ ಎಂದು ಕೇಂದ್ರ ಸಕರ್ಾರವನ್ನು ಒತ್ತಾಯಿಸಿದರು.
ಮಲ್ಲಾಪುರದ ಕೈಗಾ ಪ್ರೊಜೆಕ್ಟ್ ಲ್ಯಾಂಡ್ಲೂಸರ್ ಅಸೋಸಿಯೇಷನ್,ಹಟರ್ುಗಾ ಗ್ರಾಮದ ಕೈಗಾ-ಕಾಳಿ ಸಂತ್ರಸ್ಥರ ಸಂಘ ಮತ್ತು ಕದ್ರಾದ ಕದ್ರಾ ಆಣೆಕಟ್ಟಿನ ನಿರಾಶ್ರಿತರ ಸಂಘ ಹಾಗೂ ಹರೂರಿನ ಶ್ರೀದೇವಿ ಯುವಕ ಸಂಘದ ಬೆಂಬಲದೊಂದಿಗೆ ಕೈಗಾ ಅಣುಸ್ಥಾವರದ 16 ಕಿ.ಮೀ.ವ್ಯಾಪ್ತಿಯ ಪ್ರದೇಶದಲ್ಲಿ ವಾಸಿಸುವ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆ ನಿಮಿತ್ತ ಕದ್ರಾ ಮತ್ತು ಮಲ್ಲಾಪುರ ಟೌನ್ಶಿಪ್ನಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಪಾದಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರು ಪಾದಯಾತ್ರೆ ಮೂಲಕ ಮಲ್ಲಾಪುರ ಗ್ರಾಮ ಪಂಚಾಯತ್ ಕಚೇರಿ ಎದುರು ಸಮಾವೇಶಗೊಂಡರು. ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಪಂಚಾಯತಿಯ ಪಿಡಿಓ ಮುಖಾಂತರ ಜಿಲ್ಲಾಡಳಿತ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. ಪಿಡಿಓ ವಿನೋದ ಕೆ.ಮಾಳ್ಸೇಕರ ಮನವಿ ಸ್ವೀಕರಿಸಿ ಮಾತನಾಡಿ, ಮನವಿಯನ್ನು ಜಿಲ್ಲಾಡಳಿತ ಹಾಗೂ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪರಿಸರವಾದಿ ಹಾಗೂ ವೃಕ್ಷಲಕ್ಷ ಆಂದೋಲನದ ಅನಂತ್ ಆಶೀಸರ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿ, ಕ್ಯಾನ್ಸರ್ನಂತಹ ಕಾಯಿಲೆ ಹರಡಲು ಕಾರಣವಾಗಿರುವ ಕೈಗಾ ಅಣುವಿದ್ಯುತ್ ಯೋಜನೆಗಾಗಿ ಮತ್ತೆ 5 ಮತ್ತು 6 ನೇ ಘಟಕ ಸ್ಥಾಪನೆಗೆ ಮುಂದಾಗಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಕ್ರಮ ಖಂಡನೀಯ. ಇಲ್ಲಿನ ಯೋಜನಾ ಪ್ರದೇಶದಲ್ಲಿ ಟ್ರಿಷಿಯಂ ರಾಸಾಯನಿಕ ಸೋರಿಕೆಯಂತಹ ಅವಘಡಗಳು ನಡೆದಿವೆ ಹಾಗೂ ನಡೆಯುತ್ತಿವೆ. ಇಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಅಧಿಕಾರಿಗಳು ಎಲ್ಲವನ್ನೂ ಕದ್ದುಮುಚ್ಚಿ ವ್ಯವಹಾರ ನಡೆಸುತ್ತಾರೆ. ಅತೀ ಸೂಕ್ಷ್ಮವಾದ ಪರಿಸರ ವಲಯವಾದ ಈ ಪ್ರದೇಶದ ವ್ಯಾಪ್ತಿಯಲ್ಲಿ ಕ್ಯಾನ್ಸರ್ನಂತಹ ಮಾರಕ ರೋಗ ಹೆಚ್ಚುತ್ತಿದ್ದರೂ ಅಣುವಿದ್ಯುತ್ ನಿಗಮ ನಡೆಸಿದ ಅಂತಿಮ ಸವರ್ೇ ವರದಿ ಬಿಡುಗಡೆ ಮಾಡುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗವಿಲ್ಲದ ಈ ಯೋಜನೆಯಿಂದ ಜನರಿಗೆ ಕ್ಯಾನ್ಸರ್ ಉಡುಗೊರೆ ಸಿಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
80ರ ದಶಕದ ಹೋರಾಟದ ನೆನಪು :
ಪರಿಸರದ ನಾಶ ವಿರೋಧಿಸಿ ಕೈಗಾ ಅಣುವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ 80 ರ ದಶಕಗಳಲ್ಲಿ ಭಾರಿ ಹೋರಾಟ ನಡೆದಿತ್ತು. ಪರಿಸರವಾದಿ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ಯೋಜನೆಯ ದುಷ್ಪರಿಣಾಮದ ಬಗ್ಗೆ ಆಗಲೇ ಗ್ರಹಿಸಿದ್ದರು. ಹೀಗಾಗಿ ಅವರು ಯೋಜನೆಯ ವಿರೋಧಿ ಆಂದೋಲನದಲ್ಲಿ ಧುಮಿಕಿದ್ದರು. ಈಗಾಗಲೇ ಇಲ್ಲಿ ಸ್ಥಾಪಿಸಲಾಗಿರುವ 200 ಮೆ.ವ್ಯಾ. ಸಾಮಥ್ರ್ಯದ ನಾಲ್ಕು ಘಟಕಗಳಿಂದ ಸ್ಥಳೀಯ ಜನರ ಆರೋಗ್ಯ ಕೆಡುತ್ತಿದೆ. ಈ ನಡುವೆ ಸರಕಾರ ಇಲ್ಲಿನ ಗ್ರಾಮೀಣ ಜನರ ಆರೋಗ್ಯದ ಮೇಲೆ ಮತ್ತಷ್ಟು ದುಷ್ಪರಿಣಾಮ ಹೆಚ್ಚಿಸುವ ಸುಮಾರು 700 ಮೆಗಾ ವ್ಯಾಟ್ ಸಾಮಥ್ರ್ಯದ ಯೋಜನೆ ಕೈಗೆತ್ತಿಕೊಳ್ಳುತ್ತಿದೆ. ಈ ಯೋಜನೆಯ ಸಾರ್ವಜನಿಕ ಅಹವಾಲು ಸಭೆಯನ್ನು ಜಿಲ್ಲಾಡಳಿತದ ವತಿಯಿಂದ ಮುಂದಿನ ಡಿ.15 ರಂದು ಕರೆಯಲಾಗಿದೆ. ಅಂದು ಜಿಲ್ಲೆಯ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಜನೆಯ ವಿರುದ್ಧ ಅಭಿಪ್ರಾಯ ಮಂಡಿಸಬೇಕು ಎಂದು ಕರೆ ನೀಡಿದರು.
ಕೈಗಾ ಅಣುವಿದ್ಯುತ್ ಯೋಜನೆಯಿಂದ ಹೊರ ರಾಜ್ಯಗಳಿಗಷ್ಟೇ ವಿದ್ಯುತ್ ದೊರೆಯುತ್ತಿದೆ. ಆದರೆ ಕೈಗಾ ಸುತ್ತಮುತ್ತಲಿನ ಸ್ಥಳೀಯ ಜನರು ಕಾರ್ಗತ್ತಲಿನಲ್ಲಿ ಬದುಕುತ್ತಿದ್ದಾರೆ. ಇಲ್ಲಿನ ಜನರ ಉದ್ಧಾರಕ್ಕಾಗಿ ಎಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂಬುದರ ಬಗ್ಗೆ ನಿಗಮವು ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಸತೀಶ್ ಸೈಲ್, ಪರಿಸರ ಹೋರಾಟಗಾರ ಉಮೇಶ ಭಾಗ್ವತ್, ಶಾಂತಾರಾಂ, ಶಾಂತಾ ಬಾಂದೇಕರ ಸಾಂದಭರ್ಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯೆ ಅಶ್ವಿನಿ ಪೆಡ್ನೇಕರ, ಸ್ಥಳೀಯ ಮುಖಂಡರಾದ ಗುರುದಾಸ್ ಫಾಯದೆ,ಮಧುಕರ ದೇವಿದಾಸ್, ಗಣಪತಿ,ರಾಜೇಶ ಗಾಂವಕರ,ಶ್ಯಾಮ್ನಾಥ್ ನಾಯ್ಕ, ಸಂತೋಷ ಗೌಡ ಇತರರು ಇದ್ದರು.