ದಾಂಡೇಲಿ 06: ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಉದ್ಬವಿಸಿ ವೈಯ್ಯಾರದಿಂದ ಬಳಕುತ್ತಾ ದಾಂಡೇಲಿ ತಾಲೂಕಿನಿಂದ ಹಾದು ಹೋಗುವ ಜಿಲ್ಲೆಯ ಜೀವ ನದಿ ಕಾಳಿ ಕಾರವಾರದ ಸಮುದ್ರದಲ್ಲಿ ವಿಲೀನವಾಗುತ್ತದೆ. ರಾಜ್ಯದ 17 ಕಲುಷಿತ ನದಿಗಳಲ್ಲಿ ನಮ್ಮ ಕಾಳಿ ನದಿಯು ಒಂದಾಗಿರುವುದು ಪರಿಸರ ಪ್ರೇಮಿಗಳಿಗೆ ಧಿಗ್ಬ್ರಮೆ ಮೂಡಿಸುವ ಸಂಗತಿಯಾಗಿದೆ.
ಜೀವನದಿ ಕಾಳಿಯ ಕಲುಷಿತಕ್ಕೆ ಹಲವು ಕಾರಣಗಳಲ್ಲಿ ಕಣ್ಣಿಗೆ ಅತ್ಯಂತ ಕುಕ್ಕುವಂತೆ ಗೋಚರಿಸುವುದು ದಾಂಡೇಲಿ ತಾಲೂಕಿನ ವೆಸ್ಟ ಕೋಸ್ಟ ಪೇಪರ್ ಮಿಲ್ನಲ್ಲಿ ಉತ್ಪತ್ತಿಯಾಗುವ ರಾಸಾಯನಿಕಯುಕ್ತ ದುನರ್ಾತ ಬೀರುವ ವಿಷಕಾರಿ ತ್ಯಾಜ್ಯ ನೀರು ಕಾಲುವೆ ಮುಖಾಂತರ ಕಾಳಿ ನದಿಯ ಒಡಲನ್ನು ಸೇರುತ್ತಿರುವುದು, ಇತ್ತಿಚೇಗೆ ಜಿಲ್ಲೆಯ ಸ್ಥಳೀಯ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಜಿಲ್ಲಾ ಪರಿಸರ ಅಧಿಕಾರಿ ವಿಜಯಾ ಹೆಗಡೆ ಪೇಪರ್ ಮಿಲ್ನಿಂದ ಹೊರ ಬೀಡುವ ರಾಸಾಯನಿಕಯುಕ್ತ ದುನರ್ಾತ ಬೀರುವ ವಿಷಕಾರಿ ತ್ಯಾಜ್ಯ ನೀರು ಸಂಸ್ಕರಿಸಿ ಕಾಲುವೆ ಮುಖಾಂತರ ನದಿಗೆ ಬಿಡಲಾಗುತ್ತಿದೆ ಇದರಿಂದ ಕಾಳಿ ನದಿಯ ನೀರು ಕಲುಷಿತವಾಗುತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಪರಿಸರ ಅಧಿಕಾರಿಯ ಈ ಹೇಳಿಕೆ ಸ್ಥಳೀಯರಲ್ಲಿ ಸಾಕಷ್ಟು ಸಂಶಯಕ್ಕೆ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ದಿನದ 24 ಘಂಟೆಗಳ ಕಾಲ ಹರಿದು ಹೋಗುವ ತ್ಯಾಜ್ಯ ನೀರು ಪೇಪರ್ ಮಿಲ್ ಯಾವ ಭಾಗದಲ್ಲಿ ಸಂಸ್ಕರಿಸಿ ಬಿಡಲಾಗುತ್ತಿದೆ ಸದ್ಯದ ಮಟ್ಟಿಗೆ ಯಾರಿಗೂ ತಿಳಿಯದ ಘಟನೆಯಾಗಿದೆ. ರಾಸಾಯನಿಕ ತ್ಯಾಜ್ಯ ನೀರಿನಿಂದ ಕಾಳಿ ನದಿಯಲ್ಲಿರುವ ಅನೇಕ ವೈವಿದ್ಯಮಯ ಜೀವ ಜಲಚರಗಳು ನಾಶವಾಗುತ್ತಿರುವುದಲ್ಲದೆ ನೀರು ಸೇವಿಸಿದ ಮಾನವ ಹಾಗೂ ಪ್ರಾಣಿ ಪಕ್ಷಿಗಳು ಸಹ ವಿವಿಧ ರೀತಿಯ ರೋಗಕ್ಕಿಡಾಗುತ್ತಿರುವುದು ಅಲ್ಲಗಳೆಯುವಂತಿಲ್ಲ.
ಕಾಖರ್ಾನೆಯಿಂದ ಹೊಗೆ ಹೊರ ಸುಸುವ ಚಿಮಣಿಗಳಿಗೆ ಮತ್ತು ತ್ಯಾಜ್ಯ ನೀರು ಹರಿದು ಹೋಗುವ ಸ್ಥಳದಲ್ಲಿ ಸೆನ್ಸರ್ಗಳನ್ನು ಅಳವಡಿಸಿ ರಾಜ್ಯ ನಿಯಂತ್ರಣ ಮಂಡಳಿಯ ಸರ್ವರಿಗೆ ಜೋಡಿಸಲು ಕೇಂದ್ರ ನಿಯಂತ್ರಣ ಮಂಡಳಿಯಿಂದ ಆದೇಶವಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸಾರ್ವಜನಿಕರಿಗೆ ಹಾಗೂ ಸರಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲಾ ಪರಿಸರ ಅಧಿಕಾರಿಗಳು ದಾಂಡೇಲಿಗೆ ಬಂದು ಪರಿಶೀಲನೆ ಮಾಡಿದ್ದೆ ಆದರೆ ದಾಂಡೇಲಿಯ ಜನತೆ ಸಾಕ್ಷಿ ನೀಡಲು ಸಿದ್ದರಾಗಿದ್ದು ಆಗ ಸತ್ಯ ಸಂಗತಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಪೇಪರ್ ಮಿಲ್ ನಿಂದ ಹರಿದು ಹೋಗುವ ತ್ಯಾಜ್ಯ ನೀರು ಸಂಸ್ಕರಿಸಿ ಬಿಡುತ್ತಿರುವುದು ನಿಜವೇ ಆಗಿದ್ದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಅಕ್ಷರ ಮಾಧ್ಯಮ ವರದಿಗಾರರ ಹಾಗೂ ದೃಷ್ಯ ಮಾಧ್ಯಮ ವರದಿಗಾರರ ಮತ್ತು ಪರಿಸರ ವಾದಿಗಳೊಂದಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿ ಕರೆದು ತ್ಯಾಜ್ಯ ನೀರು ಸಂಸ್ಕರಿಸಿ ಕಾಳಿ ನದಿಗೆ ಬಿಡುತ್ತಿರುವುದು ನಿಜವೆಂದು ಬಹಿರಂಗ ಪಡಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.