ಅಕ್ಕಮಹಾದೇವಿ ಪ್ರತಿಮೆಯ ಬೃಹತ್ ಮೆರವಣಿಗೆ: ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
Grand procession of Akkamahadevi statue: Ceremony to fill the graves of the elders
ಲೋಕದರ್ಶನ ವರದಿ
ಕಂಪ್ಲಿ 04: 12ನೇ ಶತಮಾನದ ಅದ್ವಿತೀಯ ಶಿವಶರಣೆ, ವೈರಾಗ್ಯ ನಿಧಿ ಅಕ್ಕಮಹಾದೇವಿಯ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಅಕ್ಕನ ಪ್ರತಿಮೆಯ ಬೃಹತ್ ಮೆರವಣಿಗೆ,ತೊಟ್ಟಿಲು ಹಾಗೂ ಮುತೈದೆಯರಿಗೆಹುಡಿ ತುಂಬುವ ಕಾರ್ಯಕ್ರಮಗಳು ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿದವು. ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಅವರಣದಲ್ಲಿರುವ ಅಕ್ಕಮಹಾದೇವಿಯ ಅಮೃತ ಶಿಲೆಯ ಪ್ರತಿಮೆಗೆ ಬೆಳಿಗ್ಗೆ ವಿವಿಧ ಅಭಿಷೇಕಗಳನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಸಂಜೆ ಅಲಂಕೃತ ವಾಹನದಲ್ಲಿ ಅಕ್ಕನ ಪ್ರತಿಮೆಯನ್ನು ಇಟ್ಟು ವಿವಿಧ ಹೂಗಳು ಮತ್ತು ವಿದ್ಯುದೀಪಗಳಿಂದ ಅಲಂಕರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ದೂರಿಯಿಂದ ಮೆರವಣಿಗೆಯನ್ನು ನಡೆಸಿದರು.
ನಂತರ ಶ್ರೀ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಮೆರವಣಿಗೆ ಮುಕ್ತಾಯಗೊಂಡ ನಂತರ ಅಲ್ಲಿ ಅಕ್ಕಮಹಾದೇವಿಯ ತೊಟ್ಟಿಲು ಕಾರ್ಯಕ್ರಮವನ್ನು ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸಮಾಜದ ಮಹಿಳೆಯರು ತೊಟ್ಟಿಲು ಹಾಡುಗಳನ್ನು ಪ್ರಸ್ತುತ ಪಡಿಸುವ ಮೂಲಕ ನೆರವೇರಿಸಿದರು. ನಂತರ ಲಿಂ.ಗೊಗ್ಗ ವಿಶಾಲಾಕ್ಷಮ್ಮನವರ ಸ್ಮರಣಾರ್ಥ ಮುತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರಿಗೆ ಉಡಿಯನ್ನು ತುಂಬಿದರು. ಕೊನೆಯಲ್ಲಿ ಅನ್ನ ಸಂತರೆ್ಣಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ್ ಹಿರೇಮಠ, ಪದಾಧಿಕಾರಿಗಳಾದ ಲಕ್ಷ್ಮೀ ಕಾಮಗಂಡಿ, ಬಿ.ಸುಮಂಗಲ, ಪುಷ್ಪಾ ಬಿ.ಎಂ, ಎಸ್.ಸಿಂಧೂಗೌಡ, ಸುಜಾತಾ ತಾಂಡೂರು, ರಶ್ಮೀ ಕಲ್ಗುಡಿ, ಅನ್ನಪೂರ್ಣ.ಟಿ., ಅನುಪಮ ಅರವಿ, ವಸ್ತ್ರದ ಶಾಂತಾ, ಚಿನ್ನದಕಂತಿ ಶೋಭಾ, ಮಧುಮತಿ ತಂಬ್ರಳ್ಳಿ, ಸಿದ್ದಮಲ್ ಜಯಲಕ್ಷ್ಮೀ, ಕೋರಿ ಜಯಶ್ರೀ, ಉಮಾದೇವಿ ಕಾಮರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 