ಮುಳಸಾವಳಗಿಯಲ್ಲಿ ಮಹಾಶಿವಶರಣೆ ಅಕ್ಕಮಹಾದೇವಿ ಮೂರ್ತಿ ಪ್ರತಿಷ್ಠಾಪನೆಯ ಅದ್ದೂರಿ ವಾರ್ಷಿಕೋತ್ಸವ
Grand anniversary of the installation of the Mahashivasaran Akkamahadevi idol in Mulasavalagi
ಮುಳಸಾವಳಗಿಯಲ್ಲಿ ಮಹಾಶಿವಶರಣೆ ಅಕ್ಕಮಹಾದೇವಿ ಮೂರ್ತಿ ಪ್ರತಿಷ್ಠಾಪನೆಯ ಅದ್ದೂರಿ ವಾರ್ಷಿಕೋತ್ಸವ
ದೇವರಹಿಪ್ಪರಗಿ 1: ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರದಂದು ಮಹಾಶಿವಶರಣೆ ಅಕ್ಕಮಹಾದೇವಿ ಅವರ ಪ್ರಥಮ ವರ್ಷದ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಿತು.ಗ್ರಾಮದ ಮಲ್ಲಯ್ಯನ ದೇವಸ್ಥಾನದಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಟ್ರಾಕ್ಟರ ಸಮೇತವಾಗಿ ಭವ್ಯ ಮೆರವಣಿಗೆ ಮೂಲಕ ಅಕ್ಕಮಹಾದೇವಿಯವರ ಹಾಡುಗಳಿಂದ ಮಕ್ಕಳ ಕೋಲಾಟ ಎಲ್ಲರ ಗಮನ ಸೆಳೆಯಿತು.ಗ್ರಾಮದ ನೂರಾರು ಮಹಿಳೆಯರು ತುಂಬಿದ ಆರತಿ ಸಮೇತವಾಗಿ ಪಾಲ್ಗೊಂಡಿದ್ದರು.ಭಜನಾಮೇಳ ನೊಡುಗರ ಗಮನ ಸೆಳೆಯಿತು. ಮಕ್ಕಳು ಅಕ್ಕಮಹಾದೇವಿ, ಬಸವಣ್ಣ ಹಾಗೂ ಶ್ರೀಶೈಲ ಮಲ್ಲಿಕಾರ್ಜುನನ ವೇಷಭೂಷಣ ಧರಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಮೆರವಣಿಗೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿಯವರ ಜೀವನ ಚರಿತ್ರೆಯ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಹಣಮಂತ್ರಾಯ ಹಿರೂರ ಮಾತನಾಡಿದರು. ಅಂದಾನಯ್ಯ ಹಿರೇಮಠ,ಶರಣಗೌಡ ಪಾಟೀಲ,ಮಲಕು ಸುರಗಿಹಳ್ಳಿ,ಶಿವಾನಂದ ಹೊನ್ನಳ್ಳಿ,ಮಲ್ಲನಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಭೀಮರಾಯ ಪೊಲೇಶಿ,ಸಿದ್ದು ಹದರಿ, ಭಾಗೀರಥಿ ನಾಗರಳ್ಳಿ, ಶಾಂತಾಬಾಯಿ ಗಬ್ಬೂರ, ಭಾರತಿ ಗಬ್ಬೂರ, ಸರೂಬಾಯಿ ಉಕುಮನಾಳ, ದಾನಮ್ಮನಾಗರಳ್ಳಿ, ಭಾಗೀರಥಿ ಆಲಗೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 