ಅಂಚೆ ಇಲಾಖೆಯಿಂದ ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ: ಮಹಾಂತೇಶ
Government schemes from the Postal Department to doorsteps: Mahantesh
ದೇವರಹಿಪ್ಪರಗಿ 29: ಭಾರತೀಯ ಅಂಚೆ ಇಲಾಖೆಯಿಂದ ಸರ್ಕಾರದ ಸಾಕಷ್ಟು ಯೋಜನೆಗಳನ್ನು ಮನೆಬಾಗಲಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ. ಸಾರ್ವಜನಿಕರು ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಅಂಚೆ ಅಧೀಕ್ಷಕ ಮಹಾಂತೇಶ ತೋಗರಿ ಹೇಳಿದರು.
ತಾಲೂಕಿನ ಬಮ್ಮನಜೋಗಿ ಗ್ರಾಮದ ಹನುಮಾನ ಮಂದಿರದಲ್ಲಿ ಬುಧವಾರದಂದು ಹಮ್ಮಿಕೊಂಡಿದ್ದ ಅಂಚೆ ಜನಸಂರ್ಕ ಅಭಿಯಾನದಲ್ಲಿ ಅವರು ಮಾತನಾಡಿ. ಅಂಚೆ ಇಲಾಖೆ ಹಲವು ವರ್ಷಗಳಿಂದ ಕೇವಲ ಸಂವಹನ ಹಾಗೂ ಪತ್ರವ್ಯವಹಾರಗಳ ನಿರ್ವಹಣೆಗೆ ಸೀಮಿತವಾಗಿತ್ತು. ಆದರೆ ಇಂದು ಬ್ಯಾಂಕಗಳಂತೆ ಕೆಲಸ ಮಾಡುತಿದ್ದು ಇಲಾಖೆಯಡಿ ದೊರಯುವ ಪಿ. ಎಲ್.ಐ ಹಾಗೂ ಆರ್.ಪಿ.ಎಲ್. ಐ, ಅಪಘಾತ ವಿಮೆ, ಆರ್.ಡಿ, ಸುಕನ್ಯ ಯೋಜನೆ, ಪಿ.ಪಿ.ಎಫ್, ಉಳಿತಾಯ ಖಾತೆ ಸಹಿತ ಇರುವ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಂಚೆ ಉಪ ಅಧಿಕ್ಷಕರಾದ ಬಿ.ಎಸ.ದಾಸರ್ ಅವರು ಮಾತನಾಡಿ, ಬಡವರ ಹಾಗೂ ಕೂಲಿ ಕಾರ್ಮಿಕರ ಅವಶ್ಯಕತೆಗಳು ಅರಿತುಕೊಂಡ ಅಂಚೆ ಇಲಾಖೆಯು ಜನರ ವಯಸ್ಸಿನ ಅನುಗುಣವಾಗಿ ಹಲವಾರು ಸೇವೆಗಳಾದ ಬ್ಯಾಂಕ್ ಸೇವೆ, ಆನ್ ಲೈನ್ ಮೊಬೈಲ್ ಬ್ಯಾಂಕಿಂಗ್, ಸಣ್ಣ ಉಳಿತಾಯ ಮತ್ತು ರೈತರಿಗೆ ಪ್ರಧಾನಮಂತ್ರಿ ಜೀವ ವಿಮಾ ಯೋಜನೆಗಳ ಮೂಲಕ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳುವ ಮೂಲಕ ಮನೆ ಬಾಗಿಲಿಗೆ ಅಂಚೆ ಸೇವೆಗಳು ನಮ್ಮ ಇಲಾಖೆ ತರುತ್ತಿದೆ ಎಂದರು.
ಗ್ರಾಮದ ಮುಖಂಡರಾದ ರಾಜಶೇಖರ ಕೊಣಸಿರಸಗಿ ಮಾತನಾಡಿ, ಅಂಚೆ ಇಲಾಖೆಯು ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ ಜನಸ್ನೇಹಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತದೆ. ಸಿಬ್ಬಂದಿ ಸಹ ಅಷ್ಟೇ ವಿನಯತೆಯಿಂದ ಸಹಕಾರ ಸೇವೆ ನೀಡುತ್ತಾರೆ ಎಂದರು.
ಐಪಿಪಿಬಿ ಜಿಲ್ಲಾ ವ್ಯವಸ್ಥಾಪಕರಾದ ವಿಶ್ವನಾಥ, ಗ್ರಾಮ ಪಂಚಾಯತ ಸದಸ್ಯ ಬಸವರಾಜ ಕಡಕೋಳ, ರಾಮನಗೌಡ ಪಾಟೀಲ, ಬಸವರಾಜ ನಂದಗೇರಿ, ಅಂಚೆ ಮೇಲ್ವಿಚಾರಕರಾದ ಬಸವರಾಜ ಇವಣಗಿ, ಅಮರೇಶ ಕಲಶೇಟ್ಟಿ, ಮನೋಹರ ಪೋಳ, ಹಾಗೂ ದೇವರಹಿಪ್ಪರಗಿ ಮತ್ತು ಶಿವಣಗಿ ಅಂಚೆ ಸಿಬ್ಬಂದಿಯಾದ ನಬಿರಸೂಲ ಗಡಗಲಾವ್, ಪ್ರಬು ಬಿಸನಾಳ, ರಾಮನಗೌಡ ಬಿರಾದಾರ, ಪ್ರವೀಣ ಕುಲಕರ್ಣಿ, ರಂಜೀತ ತಳಕೇರಿ, ಎಲ್.ಎಚ್.ನಧಾಫ, ಪ್ರವೀಣ ಮಾಳೆಗಾರ, ಅಂಕುಶ ಯಾಧವ, ಭಾಗ್ಯ ಪುರವಂತಮಠ, ಸುನೀತಾ ನಾಟಿಕಾರ, ಲಕ್ಷ್ಮೀ ಪೂಜಾರಿ, ಸುನಂದಾ ಬಿರಾದಾರ, ಸಂಗ್ರಾಮಸಿಂಗ್ ಹಜೇರಿ ಹಾಗೂ ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 