40ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ
Government medical college protest enters 40th day
40ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ
ವಿಜಯಪುರ, 28 : 40 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯು ರಕ್ತ ಸಹಿ ಸಂಗ್ರಹಣ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ರಕ್ತದಲ್ಲಿ ಸಹಿಸಂಗ್ರಹ ಮಾಡಿದ ಬಟ್ಟೆಯನ್ನು ಮಾನ್ಯ ಜಿಲ್ಲಾಧಿಕಾರಿ ಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಯಿತು. ಈ ಹೋರಾಟಕ್ಕೆ ವಿಜಯಪುರ ಜಿಲ್ಲೆಯ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಹೋರಾಟಗಾರರು ಬೆಂಬಲಿಸಿ ರಕ್ತದ ಮೂಲಕ ಸಹಿ ಹಾಕಿದರು. ಈ ರಕ್ತ ಸಹಿ ಸಂಗ್ರಹ ಜನರ ಒಗ್ಗಟ್ಟು ಮತ್ತು ತ್ಯಾಗದ ಶಕ್ತಿಯನ್ನು ಬಿಂಬಿಸುತ್ತದೆ. ಇದು ಸರಕಾರಕ್ಕೆ ಒಗ್ಗಟ್ಟು ಮತ್ತು ಹೋರಾಟದ ಶಕ್ತಿಯನ್ನು ತೋರಿಸುತ್ತದೆ.
ಈ ರಕ್ತ ಸಹಿ ಚಳುವಳಿ ಹಿಂಸಾತ್ಮಕ ಪ್ರತಿರೋಧದ ಬದಲು ಅಹಿಂಸೆಯ ಶಸ್ತ್ರ. ಈ ಒಂದು ರಕ್ತ ಸಹಿ ಸಂಗ್ರಹ ಚಳುವಳಿ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಜೀವನವನ್ನೆ ಒತ್ತೆ ಇಡುವ ಸನ್ನದ್ದತೆ ಎಂಬ ಸಂದೇಶವು ಸರಕಾರಕ್ಕೆ ಹೋರಾಟಗಾರರ ದೃಡ ನಿಶ್ಚಯವನ್ನು ತಿಳಿಸುತ್ತದೆ. ಈ ನಿಯೋಗದಲ್ಲಿ ಹೋರಾಟ ಸಮಿತಿಯ ಅರವಿಂದ ಕುಲಕರ್ಣಿ, ಅಕ್ರಂಮಾಷಳಕರ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ,ಲಲಿತಾ ಬಿಜ್ಜರಗಿ, ಸುರೇಶ ಬಿಜಾಪುರ, ಲಕ್ಷ್ಮಣ ಹಂದ್ರಾಳ, ಭರತಕುಮಾರ ಹೆಚ್ ಟಿ, ಶ್ರೀನಾಥ ಪೂಜಾರಿ, ಲಕ್ಷ್ಮಣ ಕಂಬಾಗಿ, ನೀಲಾಂಬಿಕಾ ಬಿರಾದರ, ಮೀನಾಕ್ಷಿ ಸಿಂಗೆ, ಕಿರಣ ಮೇಲಿಕೆರಿ, ಕಾವೇರಿ ರಜಪೂತ, ಎಮ್ ಎಮ್ ಗುರಿಕಾರ ಹಾಗೂ ಮುಂತಾದವರು ಭಾಗವಹಿಸಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 