ಸರಕಾರದ ಆರೋಗ್ಯ ಕಾರ್ಯಕ್ರಮಗಳು ಜನರ ಮನೆ ಬಾಗಿಲು ಮುಟ್ಟಲಿ: ಡಾ. ಹೊನಕೇರಿ


ಗದಗ 18: ಸರಕಾರ ರೂಪಿಸುವ ಎಲ್ಲಾ ಆರೋಗ್ಯ ಕಾರ್ಯಕ್ರಮಗಳು ಗ್ರಾಮೀಣ ಮತ್ತು ಅಲಕ್ಷಿತ ಸಮುದಾಯಗಳನ್ನು ಮುಟ್ಟಬೇಕು ಆ ನಿಟ್ಟನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮಗಳನ್ನು ಸಮುದಾಯದ ಬಳಿಕೊಂಡೊಯ್ದು ಜನರ ಮನ ಮುಟ್ಟುವಂತೆ ಸೇವೆಸಲ್ಲಿಸಬೇಕು ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿಗಳಾದ ಡಾ.ಎಸ್ ಎಮ್ ಹೊನಕೇರಿ ಹೇಳಿದರು

ಅವರ ಗದಗ ನಗರದ ತಾಲೂಕಾ ಆರೋಗ್ಯಾಧಿಕಾರಿಗಳ ಕಾಯರ್ಾಲಯದಲ್ಲಿ ದಿ. 16ರಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾಯರ್ಾಲಯ, ಜಿಲ್ಲಾ ಆಯ್ ಇ ಸಿ ವಿಭಾಗ, ತಾಲೂಕಾ ಆರೋಗ್ಯಾಧಿಕಾರಿಗಳ ಕಾಯರ್ಾಲಯ,ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವಾಸ್ ಮತ್ತು ವ್ಹಿ ಹೆಚ್ ಎಸ್ ಎನ್ ಸಿ ಯೋಜನೆಯ ಕುರಿತು ತಾಲೂಕಾ ಮಟ್ಟದ ಮೇಲ್ವಿಚಾರಕ ಸಿಬ್ಬಂದಿಗೆ ಎರಡು ದಿನದ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ಸರಕಾರ ಜನಾರೋಗ್ಯಕ್ಕಾಗಿ ಹಲವಾರು ಯೋಜನೆಗಳುನ್ನು ರೂಪಿಸುತ್ತಿದ್ದು ಆ ಎಲ್ಲಾ ಯೋಜನೆಗಳು ಜನರ ಬಳಿ ಕೊಂಡೊಯ್ದು ಜನರಿಗೆ ತಲುಪಿಸವ ಜವಾಬ್ದಾರಿ ಇಲಾಖೆಂದ್ದಾಗಿರುತ್ತದೆ ಆ ನಿಟ್ಟಿನಲ್ಲಿ ಇಲಾಖೆಯ ಎಲ್ಲಾ ವೃಂದದವರು ಇತರೆ ಇಲಾಖೆಯ ಸಹಭಾಗಿತ್ವ ಮತ್ತು ಸಮುದಾಯದ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಇನ್ನೊರ್ವ ಅತಿಥಿಗಳಾದ ಜಿಲ್ಲಾ ಕುಟುಂಬ ಕಲ್ಯಾಣ ಯೋಜನಾಧಿಕಾರಿಗಳಾದ ಡಾ. ವಾಯ್ ಕೆ ಭಜಂತ್ರಿ ಮಾತನಾಡಿ ಪ್ರಜಾ ಪ್ರಭತ್ವ ಆಸಯದಂತೆ ಸರಕಾರ ಗ್ರಾಮೀಣ ಜನರಿಗೆ ತಮ್ಮ ಗ್ರಾಮದ ಆರೋಗ್ಯ ಮತ್ತು ನೈರ್ಮಲ್ಯದ ಕಲ್ಪನೆ ಬೆಳಿಸಿಕೊಂಡು ತಮ್ಮ ಗ್ರಾಮದ, ಗ್ರಾಮೀಣ ಜನರ ಸಮಷ್ಠಿ ಆರೋಗ್ಯದ ಬಗ್ಗೆ ಕಾಳಿಜಿ ಮಾಡಿಕೊಳ್ಳುವಂತೆ ಸರಕಾರ ಗ್ರಾಮೀಣ ಜನರ ಸಲವಾಗಿಯೇ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿಗಳನ್ನು ರಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಆದಿಸೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಗ್ರಾಮೀಣ ಜನತೆ ತಮ್ಮ ಗ್ರಾಮದ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಬಗ್ಗೆ ಚಿಂತನೆ ಮಾಡುವಂತಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುನಿಸೆಫ್ ರಾಜ್ಯ ಸಲಹೆಗಾರರಾದ ಮನೋಜ್ ಸಭಾಸ್ಟಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್ ಸುರೇಶ ಸಪನ್ಮೂಲ ವ್ಯಕ್ತಿಗಳಾದ ಬಿಜಾಪೂರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಆಶಾ ಮಾರ್ಗದರ್ಶಕಿ ಸವಿತಾ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪದ್ಮಾವತಿ ಚಿಲ್ಲಾಳ ನಿರೂಪಿಸಿದರು ಕೆ ಎ ಹಾದಿಮನಿ ಸ್ವಾಗತಿಸಿದರು.