ಒಳ್ಳೆಯದು ಕೆಟ್ಟದ್ದನ್ನು ಮನಸ್ಸಿನ ನಿರ್ಧಾರವಾಗಿದೆ-ಹುಲೆಪ್ಪನವರಮಠ
Good or bad is the mind's decision-Huleppanavaramatha
ಒಳ್ಳೆಯದು ಕೆಟ್ಟದ್ದನ್ನು ಮನಸ್ಸಿನ ನಿರ್ಧಾರವಾಗಿದೆ-ಹುಲೆಪ್ಪನವರಮಠ
ಮೂಡಲಗಿ 03 : ‘ಮನುಷ್ಯನ ಇಂದ್ರಿಯಗಳಿಗೂ ಮತ್ತು ಮನಸ್ಸಿಗೆ ನೇರ ಸಂಬಂಧವಿದ್ದು,ಒಳ್ಳೆಯದು ಮತ್ತುಕೆಟ್ಟದ್ದನ್ನು ಮಾಡವುದು ಮನಸ್ಸಿನ ನಿರ್ಧಾರವಾಗಿದೆ’ ಎಂದುಬೆಳಗಾವಿಯ ಸಾಹಿತಿಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು. ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ಶರಣರದೃಷ್ಟಿಯಲ್ಲಿ ಮನಸ್ಸು’ ವಿಷಯ ಕುರಿತು ಮಾತನಾಡಿದ ಅವರು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆದರ್ಶ ವ್ಯಕ್ತಿಯಾಗಿ ಸಮಾಜಕ್ಕೆ ಭೂಷಣರಾಗಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ಅರಭಾವಿಯ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಮಾತನಾಡಿ ನಾಡಿನಲ್ಲಿ ಅನೇಕ ಶರಣರು ತಮ್ಮ ಮನಸ್ಸನ್ನು ನಿಯಂತ್ರಿಸಿ ಸಮಾಜವನ್ನು ಬೆಳಗುವ ಕಾರ್ಯ ಮಾಡಿದರು. ಮನ್ಸಿನ ನಿಯಂತ್ರಣದಿಂದ ಅವರೆಲ್ಲ ಸಂತರು, ಮಹಾತ್ಮರಾದರು ಎಂದರು.ಮುಖ್ಯ ಅತಿಥಿಯಾಗಿ ಅರಭಾವಿಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ನಿವೃತ್ತ ಕಂದಾಯ ನೀರೀಕ್ಷಕ ದುಂಡಪ್ಪಾ ಸತ್ತಿಗೇರಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.ಅಪ್ಪಾಸಾಹೇಬ ಕುರುಬರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸತ್ತಿಗೇರಿ ತೋಟದ ಭಕ್ತರು ಅನ್ನ ಪ್ರಸಾದ ಸೇವೆಯನ್ನು ಸಲ್ಲಿಸಿದರು. ಪ್ರೊ.ವಿ.ಕೆ.ನಾಯಿಕ ಕಾರ‌್ಯಕ್ರಮ ನಿರೂಪಿಸಿದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 