ಧಾರವಾಡ : ಎಂ. ಡಿ. ಗೋಗೇರಿಯವರು ಸಾವಿರಾರು ಕವಿತೆಗಳನ್ನು ರಚಿಸಿದ್ದಾರೆ, ಶರಣರ ಕನ್ನಡ ವಚನಗಳನ್ನು ಉರ್ದು ಭಾಷೆಗೆ ತರ್ಜು ಮೆ ಮಾಡಿದ್ದಾರೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ರಚಿಸಿದ ಕವನಗಳು, ನೀತಿಯ ಮಾತು, ಸಚ್ಚಾರಿತ್ರ್ಯ ಜೀವನ, ಪ್ರಕೃತಿಯ ಪ್ರೀತಿ, ಬಾಲ್ಯವಿವಾಹ ಪದ್ಧತಿ ನಿಷೇಧ, ಬಾಲಕಾರ್ಮಿ ಕ ಪದ್ಧತಿಯನ್ನು ಧಿಕ್ಕರಿಸಬೇಕು, ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು, ಗಂಡು-ಹೆಣ್ಣು ಎಂಬ ಬೇಧಭಾವ ಮಾಡಬಾರದು, ಹೆಣ್ಣುಮಕ್ಕಳನ್ನು ಎಲ್ಲರೂ ಗೌರವದಿಂದ ಕಾಣಬೇಕು ಇತ್ಯಾದಿ ಸಮಾಜಮುಖಿ ಅಂಶಗಳನ್ನು ಹೊಂದಿವೆ ಎಂದು ಧಾರವಾಡ ಬಸವ ಕೇಂದ್ರ ಸಂಘಟನಾ ಕಾರ್ಯದರ್ಶಿ ಬಸವಂತ ತೋಟದ ಹೇಳಿದರು.
ಕರ್ನಾ ಟಕ ವಿದ್ಯಾವರ್ಧಕ ಸಂಘವು, ಎಂ. ಡಿ. ಗೋಗೇರಿ ದತ್ತಿ ಅಂಗವಾಗಿ ಎಂ. ಡಿ. ಗೋಗೇರಿಯವರು ರಚಿಸಿದ `ಗೀತೆಗಳ ಗಾಯನ' ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಜಾತಿ, ಜಾತಿ ಎಂದು ಬಡಿದಾಡದೇ ನೀತಿಯಿಂದ ಬದುಕಬೇಕು, ಎಲ್ಲ ಧಮರ್ಿಯರನ್ನು ಪ್ರೀತಿಸಬೇಕು, ಏಕೆಂದರೆ ಪ್ರತಿಯೊಬ್ಬರ ಹುಟ್ಟು ಭಗವಂತನ ಇಚ್ಚೆ, ಯಾರೂ ದೇವರಲ್ಲಿ ಅರ್ಜಿ ಹಾಕಿಕೊಂಡು ಆ ಜಾತಿ-ಈ ಜಾತಿಯಲ್ಲಿ ಹುಟ್ಟಿಸು ಎಂದು ಬೇಡಿಕೊಂಡಿರುವುದಿಲ್ಲ. ಭೂಮಿಯ ಮೇಲೆ ಇರುವಷ್ಟು ದಿನ ಸಮಾಜಕ್ಕೆ ಏನನ್ನಾದರೂ ಒಳ್ಳೆಯದನ್ನು ನೀಡಬೇಕು, ಏನನ್ನಾದರೂ ಸಾಧಿಸಬೇಕು, ಎಲ್ಲರೂ ನಿಷ್ಠೆ, ಪ್ರಾಮಾಣಿಕತೆಯಿಂದ ಪರಸ್ಪರ ಸೌಹಾರ್ಧತೆಯಿಂದ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂಬ ಪ್ರಮುಖ ಅಂಶಗಳನ್ನು ಹೊಂದಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್. ಬಿ. ಗುತ್ತಲ ವಹಿಸಿದ್ದರು.
ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಲಿಂಗಯ್ಯ ಹಿರೇಮಠ ತಮ್ಮ ಕಂಚಿನ ಕಂಠದಿಂದ ಎಂ.ಡಿ. ಗೋಗೇರಿಯವರು ರಚಿಸಿದ ಗೀತೆಗಳ ಗಾಯನ ನಡೆಸಿಕೊಟ್ಟು ಸಭೀಕರ ಮನತಣಿಸಿದರು. ಇವರಿಗೆ ಸುರೇಶ ನಿಡಗುಂದಿ ತಬಲಾ ಸಾಥ್ ನೀಡಿದರು.
ವೇದಿಕೆಯಲ್ಲಿ ಎಂ. ಡಿ. ಗೋಗೇರಿ ಹಾಗೂ ಸಂಘದ ಕಾರ್ಯಾ ಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಗಾಮನಗಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.
ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ), ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಬ. ಹಿರೇಮಠ ಹಾಗೂ ಮಲ್ಲಿಕಾರ್ಜು ನ ಚಿಕ್ಕಮಠ, ಬಿ. ಎಸ್. ಶಿರೋಳ, ಸದಾಶಿವ ಜನಗೌಡರ, ಬಿ. ಕೆ. ಹೊಂಗಲ, ರಾಮಚಂದ್ರ ಧೋಂಗಡೆ, ಎಂ. ಬಿ. ಹೆಗ್ಗೇರಿ, ಮಹಾಂತೇಶ ನರೇಗಲ್ಲ, ಚನಬಸಪ್ಪ ಅವರಾಧಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.