ಮಹಾಲಕ್ಷ್ಮೀ ದೇವಿ ಕಾರ್ತಿಕೋತ್ಸವ
ಹಳ್ಳೂರ 14 : ಗ್ರಾಮದಲ್ಲಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಆರಾಧ್ಯ ದೇವತೆಯಾದ ಮಹಾಲಕ್ಷ್ಮೀ ದೇವಿ ಕಾರ್ತಿಕೋತ್ಸವ ಕಾರ್ಯಕ್ರಮವು ಅತೀ ವಿಜೃಂಭಣೆಯಿಂದ ನಡೆಯಿತು. ಪಲ್ಲಕ್ಕಿ ಉತ್ಸವ, ಡೊಳ್ಳು ಕುಣಿತ ನಡೆದು ಪಲ್ಲಕ್ಕಿ ಮೇಲೆ ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ ಬೆಂಡು ಬತ್ತಾಸು ಖಾರಿಕು ಹಾರಿಸಿ ಹರಕೆ ತೀರಿಸಿದರು. ಭಕ್ತರು ಬಂಡಾರದಲ್ಲಿ ಭಂಡಾರದಲ್ಲಿ ಮಿಂದೆದಿದ್ದರು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು.