ಕಾರವಾರ: ಹೊರ ರಾಜ್ಯಗಳಾದ ಕನರ್ಾಟಕ ಮತ್ತು ಕೇರಳದಿಂದ ಗೋವಾಕ್ಕೆ ಬರುವ ಮೀನು ಆಮದಿನ ಮೇಲೆ ಅಲ್ಲಿನ ಸಕರ್ಾರದ ಆರೋಗ್ಯ ಇಲಾಖೆ ಹಲವು ರಚನಾತ್ಮಕ ನಿಯಮಗಳನ್ನು ಹೇರಿ ಆದೇಶ ಹೊರಡಿಸಿದೆ. ಕನರ್ಾಟಕದ ಕರಾವಳಿ ಜಿಲ್ಲೆಗಳಿಂದ ಹಾಗೂ ಕೇರಳದಿಂದ ಗೋವಾ ರಾಜ್ಯಕ್ಕೆ ನೂರಾರು ಲಾರಿಗಳ ಮೂಲಕ ಮೀನು ರಫ್ತಾಗುತ್ತಿದ್ದು, ಇದು ಪ್ರತಿ ತಿಂಗಳು ಕೋಟ್ಯಾಂತರ ರೂ, ವಹಿವಾಟಿಗೆ ಕಾರಣವಾಗಿದೆ.
ಕಳೆದ ಅಗಸ್ಟನಲ್ಲಿ ಕನರ್ಾಟಕದ ಕರಾವಳಿ ಜಿಲ್ಲೆಗಳಿಂದ ಬರುವ ಮೀನುಗಳಿಗೆ ಫಾಮರ್ೊಲಿನ್ ಲೇಪಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಮೀನು ಆಮದಿಗೆ ಪೂರ್ಣ ನಿರ್ಬಂಧ ಹೇರಿತ್ತು. ನಂತರ ಫಾಮರ್ೋಲಿನ್ ದ್ರಾವಣವನ್ನು ಮೀನುಗಳಿಗೆ ಹಚ್ಚಿಲ್ಲ ಎಂಬುದು ದೃಢಪಡಿಸಿಕೊಂಡ ನಂತರ ಮೀನು ಲಾರಿಗಳು ಗೋವಾ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿತ್ತು. ಗೋವಾ ಮೀನು ಸಗಟು ವ್ಯಾಪಾರಿಗಳ ಸಂಘ ಗೋವಾದ ಆರೋಗ್ಯ ಇಲಾಖೆಗೆ ಹಲವು ದೂರುಗಳನ್ನು ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಸಕರ್ಾರ ಮತ್ತುಷ್ಟು ಬಿಗಿ ನಿಲುವುಗಳನ್ನು ಇದೀಗ ತೆಗೆದುಕೊಂಡಿದೆ. ಕಳೆದ ಶುಕ್ರವಾರ ರಾತ್ರಿಯಿಂದಲೇ ಹೊರ ರಾಜ್ಯದ ಮೀನುಲಾರಿಗಳು ಗೋವಾ ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ. ಪರಿಣಾಮ ಶನಿವಾರ ಬೆಳಿಗಿನ ವೇಳೆಗೆ ನೂರಾರು ಮೀನು ಲಾರಿಗಳು ಕನರ್ಾಟಕ ಮತ್ತು ಗೋವಾ ಗಡಿಯಲ್ಲಿ ಸಾಲುಗಟ್ಟಿ ನಿಂತಿದ್ದವು.
ಗೋವಾ ಆರೋಗ್ಯ ಇಲಾಖೆ ಮೀನು ಆಮದಿನ ಮೇಲೆ ಹಲವು ನಿಯಮಗಳನ್ನು ರೂಪಿಸಿ ಅವುಗಳನ್ನು ಹೊರ ರಾಜ್ಯದ ಮೀನು ವ್ಯಾಪಾರಿಗಳು, ಮೀನು ರಫ್ತುದಾರರು ಪಾಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಮೀನು ಲಾರಿಗಳಿಗೆ ಗೋವಾಕ್ಕೆ ಪ್ರವೇಶ ನೀಡಿ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾದ ಮೀನುಗಾರಿಕಾ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಚೆಕ್ ಪೋಸ್ಟಗಳಲ್ಲಿ ಮೀನು ಲಾರಿಗಳ ಲೈಸೆನ್ಸ, ಮೀನು ವ್ಯಾಪಾರ ವಹಿವಾಟಿನ ಪರವಾನಿಗೆ ಪತ್ರ, ಮೀನು ಸಾಗಾಟಕ್ಕೆ ಬಳಸುವ ವೈಜ್ಞಾನಿಕ ಸೌಕರ್ಯದ ನಿದರ್ಿಷ್ಟ ಲಾರಿಗಳನ್ನು ಮೀನು ರಫ್ತಿಗೆ ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಿತೊಡಗಿದ್ದಾರೆ. ಕಳೆದ ಶುಕ್ರವಾರದಿಂದ ಗೋವಾ ಆರೋಗ್ಯ ಇಲಾಖೆ ವಿಧಿಸಿರುವ ಎಲ್ಲಾ ಕಟ್ಟಳೆಗಳನ್ನು ಮೀನು ಸರಬುರಾಜುದಾರರು ಪಾಲಿಸಿದ್ದಾರೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಗೋವಾ ರಾಜ್ಯಕ್ಕೆ ಮೀನು ರಫ್ತು ಮಾಡುವವರು ಗೋವಾದ ಪುಡ್ ಆಂಡ್ ಡ್ರಗ್ಸ ಆಡಳಿತ (ಎಫ್ಡಿಎ) ವಿಭಾಗದಿಂದ ಪರವಾನಿಗೆ ಪತ್ರ ಪಡೆದಿರಬೇಕು. ಪುಡ್ ಸೇಫ್ಟಿ ಮೇಜರ್ಸಗಳು ವಾಹನದಲ್ಲಿರಬೇಕು. ಗುಣಮಟ್ಟದ ಮೀನುಗಳನ್ನು ಮಾತ್ರ ರಫ್ತು ಮಾಡಬೇಕು. ಮೀನು ಸಾಗಾಣಿಕೆ ವಾಹನ ನೊಂದಣಿಯಾಗಿರಬೇಕು. ಟ್ರಾನ್ಸಪೋರ್ಟ ಲೈಸೆನ್ಸ ಹೊಂದಿರಬೇಕು ಎಂಬ ನಿಯಮಗಳನ್ನು ರೂಪಿಸಿದೆ. ಅಲ್ಲದೇ ಗೋವಾ ಪ್ರವೇಶಿಸುವ ಮೀನು ಸಾಗಾಣಿಕೆ ವಾಹನಗಳನ್ನು ತಪಾಸಣೆ ಮಾಡಿಯೇ ಒಳ ಬಿಡುವಂತೆ ಗೋವಾದ ಟ್ರಾನ್ಸಪೋರ್ಟ ವಿಭಾಗ ಮತ್ತು ಗೋವಾದ ಉತ್ತರ ವಲಯ, ದಕ್ಷಿಣ ವಲಯದ ಪೊಲೀಸ್ ಇಲಾಖೆಯ ಮುಖ್ಯಸ್ಥರಿಗೆ ಆದೇಶ ನೀಡಿದೆ.
ಗೋವಾ ನಿಯಮಗಳನ್ನು ಹಠಾತ್ ಹೇರಲಾಗಿದೆ ಎಂದು ಮೀನು ರಫ್ತುದಾರರು ಆರೋಪಿಸಿದ್ದಾರೆ. ಇದರಿಂದ ಲಾರಿಯಲ್ಲಿ ತಂದ ಮೀನುಗಳು ಕೆಡುತ್ತವೆ. ಲಕ್ಷಾಂತರ ರೂ. ನಷ್ಟವಾಗುತ್ತದೆ ಎಂಬುದು ಮೀನು ವ್ಯಾಪಾರಿಗಳ ಅಳಲು. ನಿಯಮಗಳನ್ನು ಅಳವಡಿಸಿಕೊಳ್ಳಲು ಕಾಲಾವಾಕಾಶ ಬೇಕು ಎಂದು ಮೀನು ರಪ್ತುದಾರರು ಹೇಳುತ್ತಿದ್ದಾರೆ.
ಕೆಲವರಿಂದ ಸ್ವಾಗತ:
ಕನರ್ಾಟಕ ಸಕರ್ಾರ ಮೀನು ಹಿಡಿಯುವ ಬಲೆ ಮತ್ತು ಬೋಟ್ಗಳ ಖರೀದಿಗೆ ಸಬ್ಸಿಡಿ ನೀಡುತ್ತದೆ. ಡಿಸೆಲ್ ಮೇಲೆ ಸಬ್ಸಿಡಿ ಇದೆ. ಜಿಲ್ಲೆಯ ವ್ಯಾಪ್ತಿಯ ಸಮುದ್ರದಲ್ಲಿ ಮೀನು ಬೇಟೆ ನಡೆಯುತ್ತಿದೆ. ಆದರೆ ಲಾಭಕ್ಕಾಗಿ ಹೆಚ್ಚಿನ ಮೀನನ್ನು ರಫ್ತು ಮಾಡಲಾಗುತ್ತದೆ. ಮೀನುಗಾರರಿಗೆ ಸಕರ್ಾರಗಳು ಸಬ್ಸಿಡಿ ನೀಡುವುದು ಜನರ ತೆರಿಗೆ ಹಣದಿಂದ. ಆದರೂ ಸ್ಥಳೀಯರಿಗೆ ಮೀನು ಸಿಗುವುದೇ ಕಡಿಮೆ. ಸಿಕ್ಕರೂ ಅಧಿಕ ಬೆಲೆ ತೆರಬೇಕು.ಗುಣಮಟ್ಟದ ಮೀನು ಸಹ ಸ್ಥಳೀಯರಿಗೆ ಸಿಗುವುದಿಲ್ಲ. ಸ್ಥಳೀಯರಿಗೆ ಇಂತಿಷ್ಟು ಪ್ರಮಾಣದಲ್ಲಿ ಮೀನು ತೆಗೆದಿಟ್ಟು, ನಂತರ ರಪ್ತು ಮಾಡಲಿ. ಈ ಸಂಬಂಧ ಮೀನುಗಾರಿಕಾ ಇಲಾಖೆ , ಸಕರ್ಾರ ನಿಯಮ ರೂಪಿಸಬೇಕು ಎಂದು ಸ್ಥಳೀಯ ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ. ಸ್ಥಳೀಯರಿಗೆ ಮೊದಲು ಮೀನು ಮಾರಾಟ ಮಾಡುತ್ತೇನೆ. ಅದು ಸರಿಯಾದ ಕ್ರಮ. ಹೆಚ್ಚಿನ ಮೀನನ್ನು ಬೇಕಾದರೆ ರಫ್ತು ಮಾಡಲಿ ಎಂದು ನದಿ ಮೀನು ಮಾರಾಟಗಾರ ಅರವಿಂದ ನಾಯ್ಕ ಪ್ರತಿಕ್ರಿಯಿಸಿದ.