ಕಾರವಾರ 29: ತಾಲೂಕಿನ ಸದಾಶಿವಗಡ ಮತ್ತು ಅಸ್ನೋಟಿಯ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ ಸುಮಾರು 80 ಲೀ. ಗೋವಾ ಮದ್ಯದ ಸಮೇತ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋವಾದಿಂದ ಸದಾಶಿವಗಡಕ್ಕೆ ಅಕ್ರಮ ಮದ್ಯ ಸಾಗಾಟಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ಬುಧವಾರ ಅಬಕಾರಿ ತಂಡ ಸದಾಶಿವಗಡ ಮತ್ತು ಅಸ್ನೋಟಿ ರೈಲ್ವೆ ನಿಲ್ದಾಣದಲ್ಲಿ ಅಬಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಪ್ರತ್ಯೇಕ ದಾಳಿ ನಡೆಸಿತು.
ಈ ಸಂದರ್ಭದಲ್ಲಿ ಗೋವಾ ಮದ್ಯವನ್ನು ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸದಾಶಿವಗಡದ ನಿಲೇಶ್ ಸಾಯಿನಾಥ ಪಡೋಳ್ಕರ್ ಮತ್ತು ಸಾಯಿನಾಥ ಲಾಡು ಪಡೋಳ್ಕರ್ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 60 ಲೀ. ಗೋವಾ ಮದ್ಯ ಹಾಗೂ 20 ಲೀ ಗೋವಾ ಬಿಯರ್ನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಸಾಗಾಟಕ್ಕೆ ಬಳಿಸಿದ್ದ ದ್ವಿಚಕ್ರವಾಹವನ್ನು ಜಪ್ತು ಮಾಡಿದರು. . ಅಕ್ರಮ ಗೋವಾ ಮದ್ಯ ಹಾಗೂ ದ್ವಿಚಕ್ರ ವಾಹನದ ಒಟ್ಟು ಮೌಲ್ಯ 90 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಅಬಕಾರಿ ಅಧಿಕಾರಿ ತಿಳಿಸಿದ್ದಾರೆ.