ಅನಾಥ ಮಕ್ಕಳಿಗೆ ಪ್ರೀತಿ, ಆತ್ಮವಿಶ್ವಾಸ ನೀಡಿ: ಜಾಡಬುಕೆ

ಹುಬ್ಬಳ್ಳಿ 17: ಇನ್ನರ್ ವೀಲ್ ಕ್ಲಬ್ನ ಸದಸ್ಯರು ಅನಾಥ ಮಕ್ಕಳನ್ನು ದತ್ತು  ತೆಗೆದುಕೊಳ್ಳುವ ಕಡೆ ಗಮನ ಹರಿಸಬೇಕು ಹಾಗೂ ಅವರ ಶಿಕ್ಷಣ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಕ್ಲಬ್ನ ಜಿಲ್ಲಾ ಚೇರಮನ್ ನಂದಾ ಅರುಣ ಜಾಡಬುಕೆ ಹೇಳಿದರು.

ಅವರು ಇನ್ನರ್ ವೀಲ್ ಕ್ಲಬ್ನ ಸಭೆಯಲ್ಲಿ ಮಾತನಾಡಿದರು. ಅನಾಥ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅನಾಥ ಮಕ್ಕಳಿಗೆ ಪ್ರೀತಿ, ಆತ್ಮವಿಶ್ವಾಸ ನೀಡಬೇಕು. ದೇಶದಲ್ಲಿ ಮಾರಕವಾಗಿ ಕಾಡುತ್ತಿರುವ ಪ್ಲಾಸ್ಟಿಕನ್ನು ಯಾರು ಬಳಸಬಾರದು.  ಪ್ಲಾಸ್ಟಿಕನ್ನು ಸಂಪೂರ್ಣ ನಿಷೇಧಿಸಬೇಕು. ಮಾಕರ್ೆಟ್ಗೆ ಬಟ್ಟೆ ಚೀಲಗಳನ್ನು ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ ಬ್ಯಾಗನ್ನು ತಿರಸ್ಕರಿಸಬೇಕು ಅವರು ಕರೆ ನೀಡಿದರು.

ಇನ್ನರ್ ವೀಲ್ ಸ್ಕೂಲ್ ಯೋಜನೆ ಅಡಿಯಲ್ಲಿ ಉಣಕಲ್ನಲ್ಲಿರುವ ವಾಯ್.ಎಸ್.ಪರಣ್ಣವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನರ್ ವೀಲ್ ಕ್ಲಬ್ನವರು ಲಕ್ಷಾಂತರ ರೂಪಾಯಿ ಖಚರ್ು ಮಾಡಿ ಗೋಡೆಗೆ ಬಣ್ಣ, ಶೌಚಾಲಯ ಸ್ವಚ್ಛತೆ, ಮಕ್ಕಳಿಗೆ ನೋಟ ಪುಸ್ತಕ, ಸ್ಕೂಲ್ ಬ್ಯಾಗ್, ಚಾಪೆ, ಪುಸ್ತಕ, ಇನ್ನಿತರ ಸಾಮಗ್ರಿ ನೀಡಿದ್ದಾರೆ. ಇನ್ನರ್ ವೀಲ್ ಸ್ಕೂಲ್ ಕಾರ್ಯಕ್ರಮವನ್ನು ನಂದಾ ಅರುಣ ಜಾಡಬುಕೆ ಉದ್ಘಾಟಿಸಿದರು.

ಪಿಡಿಸಿ ರುಕ್ಸಾನಾ ಕಿತ್ತೂರ, ಇನ್ನರ್ ವೀಲ್ ಕ್ಲಬ್ ಪಶ್ಚಿಮ ವಲಯದ ಅಧ್ಯಕ್ಷ ರಶ್ಮೀ ವಿ. ಪಾಟೀಲ, ಸುನೀತಾ ಭಾಗೆವಾಡಿ, ವಿಜಯಲಕ್ಷ್ಮೀ ಗಡವಾಲ್, ಪ್ರವೀಣಾ ಕೋಳೆಕರ, ಶೃತಿ ಭೂಸನೂರಮಠ, ರಶ್ಮಿ ಎ. ಪಾಟೀಲ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಸಿ.ಬಿ.ಮರಿಗೌಡ್ರ,  ಡಾ.ಎಸ್.ಬಿ.ಹಿರೇಮಠ, ರಾಜಣ್ಣ ಮೆಣಸಿನಕಾಯಿ, ಬ್ಯಾಲಾಳ, ರಾಜೇಶ್ವರಿ ಮೆಣಸಿನಕಾಯಿ, ರೇಖಾ ವಡೇಕರ, ಮಂಜುಳಾ ಹೂಗಾರ, ಎನ್.ಜಿ.ಗುರುಪುತ್ರನವರ,  ಚನ್ನಬಸಪ್ಪ ಜಿ. ಶೆಟ್ಟರ, ವಿಶ್ವನಾಥ ಪಾಟೀಲ, ಜ್ಯೋತಿ ಶೇಟ್, ಲತಾ ಜಮಖಂಡಿ, ರಮ್ಯಾ ಶೆಟ್ಟಿ, ಕೀತರ್ಿ ಕುಮತಗಿ, ಕಾವೇರಿ ಸಿದ್ನಾಳ, ಮೇಘನಾ, ರೂಪಾ, ಶೃತಿ ಹೆಬಸೂರ, ಪ್ರತಿಭಾ ಎಸ್.ಸಿ. ಪ್ರಿಯದಶರ್ಿನಿ ಕೊಟ್ಟೂರಶೆಟ್ಟರ, ಮುಂತಾದವರು ಇದ್ದರು