ಸಮ್ಮೇಳನದ ಸರ್ವಾದ್ಯಕ್ಷರಾಗಿ ಕುಲಸಚಿವೆ ಡಾ. ವಿಜಯಲಕ್ಷ್ಮೀ ತಿರ್ಲಾಪೂರ
ಶಿಗ್ಗಾವಿ : ಶಿಗ್ಗಾವಿಯಲ್ಲಿ ಫೆ. 8 ರಂದು ನಡೆಯಲಿರುವ ಶಿಗ್ಗಾವಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ನ 5 ನೇ ಸಮ್ಮೇಳನದ ಸರ್ವಾದ್ಯಕ್ಷರನ್ನಾಗಿ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ವಿಜಯಲಕ್ಷ್ಮೀ ತಿರ್ಲಾಪೂರ (ಪುಟ್ಟಿ) ಅವರನ್ನು ತಾಲೂಕಾ ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕಾ ಕ.ಸಾ.ಪ ಕೋಶಾದ್ಯಕ್ಷ ಬಸವರಾಜ ಹೆಸರೂರ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲಾದ್ಯಕ್ಷರಾದ ಲಿಂಗಯ್ಯ ಹಿರೇಮಠ ಅವರು ತೊಡಗಿಕೊಂಡಿರುವುದರಿಂದ ಕಳೆದ ಜ.5 ರಂದು ನಡೆದ ತಾಲೂಕಾ ಕಸಾಪ ಕಾರ್ಯಕಾರಿಣಿ ಸಭೆಯಲ್ಲಿಯ ತೀರ್ಮಾನವನ್ನ ಪುರಸ್ಕರಿದ್ದು ಸಮ್ಮೇಳನದ ಯಶಸ್ವಿಗೆ ಮನವಿ ಮಾಡಿದರು.
ತಾಲೂಕಾ ಕಸಾಪ ಅದ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ಕಳೆದ ನಾಲ್ಕು ಸಮ್ಮೇಳನಗಳನ್ನ ಯಶಸ್ವಿಗೊಳಿಸಲಾಗಿದೆ ಐದನೇ ತಾಲೂಕಾ ಸಮ್ಮೇಳನ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ, ಜಿಲ್ಲಾದ್ಯಕ್ಷರು ಜಿಲ್ಲಾ ಸಮ್ಮೇಳನದಲ್ಲಿ ತೊಡಗಿಕೊಂಡಿರುವುದರಿಂದ ಅವರ ಅಪ್ಪಣೆಯ ಮೇರೆಗೆ ತಾಲೂಕಾ ಸಮೀತಿಯ ಕೋಶಾದ್ಯಕ್ಷರಾದ ಬಸವರಾಜ ಹೆಸರೂರ ಅವರು ಸಮ್ಮೇಳನ ಅಧ್ಯಕ್ಷರ ಘೊಷಣೆಯನ್ನ ಮಾಡಿದ್ದಾರೆ, ಫೆ 8 ರಂದು ನಡೆಯುವ ಸಮ್ಮೇಳನದಲ್ಲಿ ವಿವಿಧ ಪಂಡೀತ ಪಾಮರ ಉಪನ್ಯಾಸಕರಿಂದ ಉಪನ್ಯಾಸಗಳು, ಕವಿಘೋಷ್ಟಿ, ಭವ್ಯ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ, ಅಂದು ಹುಲಗೂರ ರಸ್ತೆಯ ಪಾದಗಟ್ಟಿಯಿಂದ ಚನ್ನಮ್ಮ ಸರ್ಕಲ್ ಮೂಲಕ ಹಾಯ್ದು ಸಂಗನಬಸವ ಮಂಗಲ ಭವನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ, ಸಮ್ಮೇಳನಾದ್ಯಕ್ಷರ ಘೋಷಣೆಯಾಗಿದ್ದು ಸಮ್ಮೇಳನಾದ್ಯಕ್ಷರಿಗೆ ಅಧಿಕೃತ ಅಹ್ವಾನವನ್ನ ಜಿಲ್ಲಾ ಸಮ್ಮೇಳನ ಮುಗಿದ ತಕ್ಷಣ ಅಹ್ವಾನಿಸಲಾಗುವುದು ಎಂದರು.
ಶಿಗ್ಗಾವಿ ಹೋಬಳಿ ಘಟಕದ ಅದ್ಯಕ್ಷೆ ಲಲಿತಾ ಹಿರೇಮಠ ಮಾತನಾಡಿ ಸಮ್ಮೇಳನದ ಸರ್ವಾದ್ಯಕ್ಷರು ಮಹಿಳಾ ಅದ್ಯಕ್ಷರಾಗಿದ್ದು ಮಹಿಳಾ ಸದಸ್ಯರು ಹಾಗೂ ಮಹಿಳಾ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ನಿಕಟ ಪೂರ್ವ ಕಸಾಪ ಅದ್ಯಕ್ಷ ಎಸ್ ಎನ್ ಮುಗಳಿ, ಸರಕಾರಿ ನೌಕರರ ಸಂಘದ ತಾಲೂಕಾ ಅದ್ಯಕ್ಷ ಅರುಣ್ ಹುಡೇದಗೌಡ್ರ, ದುಂಡಶಿ ಹೋಬಳಿ ಘಟಕದ ಅದ್ಯಕ್ಷ ಐ ಎಲ್ ಭೋಸಲೆ, ನಿಕಟಪೂರ್ವ ಕೆಎಸ್ಜಿಇಎ ಅದ್ಯಕ್ಷ ಸಿ ಡಿ ಯತ್ನಳ್ಳಿ, ಸದಸ್ಯರಾದ ಶಂಬು ಕೇರಿ, ಲತಾ ನಿಡಗುಂದಿ, ಪ್ರತಿಭಾ ಗಾಂಜಿ, ಬಸವರಾಜ ಬಮ್ಮಿಗಟ್ಟಿ, ವಿನಾಯಕ ರೇವಣಕರ, ಶಿವನಾಗಪ್ಪ ಶೆಟ್ಟರ, ಎಂ ಎಚ್ ಬೆಂಡಿಗೇರಿ, ಸಿ ಎನ್ ಕಲಕೋಟಿ, ಮಲ್ಲಪ್ಪ ಬಾರಕೇರ, ಬಸವರಾಜ ಶಿಗ್ಗಾವಿ ಸೇರಿದಂತೆ ತಾಲೂಕಿನ ಕಸಾಪ ಸದಸ್ಯರು ಇದ್ದರು. ಕಾರ್ಯದರ್ಶಿ ರಮೇಶ ಹರಿಜನ ಕಾರ್ಯಕ್ರಮ ನಿರ್ವಹಿಸಿದರು.