ಸಾಮಾಜೀಕೀಕರಣ ಪ್ರಕ್ರಿಯೆಯಲ್ಲಿ ನೀರೀಕ್ಷೆಗಳಿಂದ ಲಿಂಗಪಾತ್ರಗಳ ರಚನೆ
Gender roles are formed through expectations during the socialization process
ಹುಲಕೋಟಿ 23 : ಲಿಂಗ ಸಂವೇದನೆ ಎಂದರೆ ಎಲ್ಲ ಲಿಂಗಗಳ ಅರಿವು, ಸಹಾನುಭೂತಿ ಮತ್ತು ಗೌರವ ಬೆಳೆಸುವ ಮೂಲಕ ಭೇದಭಾವವನ್ನು ನಿವಾರಿಸಿ ಸಮಾನ ಅವಕಾಶಗಳನ್ನು ಕಲ್ಪಿಸುವ ಪ್ರಕ್ರಿಯೆ ಎಂದು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ. ನಳಿನಿ ಬೆಂಗೇರಿ ಹೇಳಿದರು. ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕವು ಆಯೋಜಿಸಿದ್ದ ‘ಲಿಂಗ ಸಂವೇದನೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ‘ಸೆಕ್ಸ್’ ಮತ್ತು ‘ಜೆಂಡರ್’ ನಡುವಿನ ವ್ಯತ್ಯಾಸವನ್ನು ತಿಳಿಸುತ್ತ, ಸೆಕ್ಸ್ ಜೈವಿಕ ಭೇದಗಳನ್ನು ಸೂಚಿಸುವುದಾದರೆ ಜೆಂಡರ್ ಸಮಾಜ ಮತ್ತು ಸಂಸ್ಕೃತಿಯಿಂದ ನಿರ್ಮಿತ ಪಾತ್ರಗಳು ಮತ್ತು ನೀರೀಕ್ಷೆಗಳಾಗಿದ್ದು, ಭೇದಭಾವ, ರೂಢಿಮಾತುಗಳು, ಹಿಂಸಾಚಾರ, ಶಿಕ್ಷಣದಲ್ಲಿ ಅಸಮಾನತೆ, ಸಾಮಾಜಿಕ ಅನ್ಯಾಯ ಮುಂತಾದ ಸಮಸ್ಯೆಗಳನ್ನು ಎದುರಿಸಲು ಲಿಂಗ ಸಂವೇದನೆ ಅಗತ್ಯವಾಗಿದೆ. ಮನೆ ಸಾಮಾಜಿಕ ಕಲಿಕೆಯ ಮೊದಲ ಸಂಸ್ಥೆಯಾಗಿದ್ದು, ಮಕ್ಕಳಲ್ಲಿ ಸಮಾನತೆ ಬೆಳೆಸುವ ಜವಾಬ್ದಾರಿ ಪೋಷಕರದ್ದಾಗಿದೆ. ಶಾಲಾ-ಕಾಲೇಜುಗಳು, ಸ್ವಯಂಸೇವಾ ಸಂಸ್ಥೆಗಳು ಸಮಾವೇಶಾತ್ಮಕ ಶಿಕ್ಷಣ, ಸಮುದಾಯ ಕಾರ್ಯಕ್ರಮಗಳು ಮತ್ತು ಕಾನೂನು ಜಾಗೃತಿ ಶಿಬಿರಗಳ ಮೂಲಕ ವಿದ್ಯಾರ್ಥಿಗಳ ಮನೋಭಾವ ರೂಪಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು.
ಮಹಿಳಾ ಘಟಕದ ಸಂಯೋಜಕಿ ಡಾ. ಸಾರಿಕಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಾಮಾಜೀಕೀಕರಣ ಪ್ರಕ್ರಿಯೆಯಲ್ಲಿ ಕುಟುಂಬ, ಸಂಸ್ಕೃತಿ, ಮಾಧ್ಯಮ ಮತ್ತು ಸಾಮಾಜಿಕ ನೀರೀಕ್ಷೆಗಳು ಲಿಂಗಪಾತ್ರಗಳನ್ನು ರೂಪಿಸುತ್ತಿದ್ದು, ಇಂದು ನಿಜವಾದ ಸಮಾನತೆ ಎಲ್ಲಿದೆ? ಪ್ರಶ್ನೆ ಮೂಲಕ ವಿದ್ಯಾರ್ಥಿಗಳನ್ನು ಚಿಂತನೆಗೆ ಪ್ರೇರೇಪಿಸಿದರು. ಕುಮಾರಿ ರಂಜಿತಾ ಕಡಿಯವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕಿ ರೋಹಿಣಿ ರಾಚಣ್ಣನವರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಐಕ್ಯುಎಸಿ ಸಂಯೋಜಕ ಡಾ. ಜಿತೇಂದ್ರ ಜಾಗೀರದಾರ ವೈದಿಕ ಯುಗದಿಂದ ಇಂದಿನವರೆಗೆ ಮಹಿಳೆಯರ ಸ್ಥಿತಿಯನ್ನು ಉದಾಹರಣೆಗಳ ಮೂಲಕ ವಿವರಿಸುತ್ತ, ವೈದಿಕ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಸ್ವಾತಂತ್ರ್ಯ ಇದ್ದರೂ ನಂತರದ ಕಾಲದಲ್ಲಿ ನಿಬಂರ್ಧಗಳು ಬಂದವೆಂದು ಹೇಳಿದರು.
ಎನ್.ಎಸ್.ಎಸ್. ಘಟಕದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಸಮಾಜದಲ್ಲಿ ಲಿಂಗ ಸಮಾನತೆ, ಸಾಮಾಜಿಕ ಜವಾಬ್ದಾರಿ ಮತ್ತು ಪರಸ್ಪರ ಗೌರವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರೆಡೆಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕೆಂದು ತಿಳಿಸಿದರು. ಸಾಂಸ್ಕೃತಿಕ ಘಟಕದ ಸಂಯೋಜಕ ರಮೇಶ ಹುಲಕುಂದ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಲಿಂಗ ಸಂವೇದನೆ, ಸಮಾನತೆ ಮತ್ತು ಸಾಮಾಜಿಕ ಸೌಹಾರ್ದದ ಅರಿವು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಪ್ರಾಂಶುಪಾಲೆ ಪ್ರೊ. ಸುಧಾ ಕೌಜಗೇರಿ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಲಿಂಗ ಸಮಾನತೆಯನ್ನು ಅನುಸರಿಸಬೇಕೆಂದು ಕರೆ ನೀಡಿದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಪಾಲನಕರ ವಂದನಾರೆ್ಣಗೈದರು. ಇಂಗ್ಲಿಷ್ ಸಹ ಪ್ರಾಧ್ಯಾಪಕಿ ಮಹಾನಂದ ಹಿರೇಮಠ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ನಳಿನಿ ಬೆಂಗೇರಿ ಅವರು ತಾವು ರಚಿಸಿರುವ ಸಮಾಜಶಾಸ್ತ್ರ ವಿಷಯದ ವಿವಿಧ ಸೆಮಿಸ್ಟರ್ ಪಠ್ಯಾಧಾರಿತ ಪುಸ್ತಕಗಳನ್ನು ಕಾಲೇಜಿನ ಗ್ರಂಥಾಲಯಕ್ಕೆ ಶಾಸ್ತ್ರದಾನ ಮಾಡಿ ಗೌರವಕ್ಕೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು, ಎನ್.ಎಸ್.ಎಸ್. ಸ್ವಯಂ ಸೇವಕಿಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 