ಗವಿ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ

ಗವಿ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ Gavi Siddheshwar Swamiji's discourse program was inaugurated by His Holiness

             ಮಹಾಲಿಂಗಪುರ 23: ಮನುಷ್ಯರಾಗಿ ಹುಟ್ಟಿದ್ದು ದುರ್ಲಭ, ಮನುಷ್ಯತ್ವ ಸಂಪಾದನೆ ಮಾಡುವುದು ದುರ್ಲಭ, ಅಷ್ಟೆ ಅಲ್ಲ ಮಹಾತ್ಮರ ಸನ್ನಿಧಾನ ಸಿಗುವುದು ಕೂಡಾ ದುರ್ಲಭವೆಂದು ಸ್ಥಳೀಯ ಸಿದ್ದಾರೂಢ ಮಠದ ಸಹಜಾನಂದ ಶ್ರೀಗಳು ಹೇಳಿದರು.  

                ಪಟ್ಟಣದಲ್ಲಿ ನಡೆದ ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಒಂಬತ್ತು ದಿನಗಳ ಪ್ರವಚನ ಕಾರ್ಯಕ್ರಮಕ್ಕೆ ಶ್ರೀಗಳ ಸಮ್ಮುಖದಲ್ಲಿ ಸರ್ವಧರ್ಮ ಧರ್ಮಾಧಿಕಾರಿಗಳು ಸಸಿಗೆ ನೀರುಣ್ಣಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು 9 ದಿನಗಳ ಕಾಲ ಗವಿಸಿದ್ದೇಶ್ವರ ಶ್ರೀಗಳ ಪ್ರವಚನ ಕೇಳುವ ನೀವುಗಳೆ ಪುನ್ಯವಂತರು. ಬಿಳುವವರನ್ನು ಎತ್ತಿಹಿಡಿಯುವುದೆ ನಿಜವಾದ ಧರ್ಮ ಮತ್ತು ಮಾನಸಿಕವಾಗಿ ಕುಂದಿ ಹೋದ ನೊಂದ ಹೃದಯಗಳಿಗೆ ಸಾಂತ್ವನ ಹೇಳದೆ ಇರುವವರು ಮನುಷ್ಯತ್ವಹೀನರು ಅಷ್ಟೇ ಅಲ್ಲ ಅವರು ಅಧರ್ಮಿಗಳು ಕೂಡ.ಇದನ್ನು ತೊಡೆದು ಹಾಕಲು ಗವಿಮಠ ಶ್ರೀಗಳು ಆಗಮಿಸಿದ್ದಾರೆ, ಸದ್ಭಕ್ತರು ಅವರ ಅಮೃತ ವಾಣಿ ಆಲಿಸಿ ಧನ್ಯರಾಗಿ ಎಂದರು. 

               ನಂತರ ಮಾತನಾಡಿದ ಬೆಳಗಲಿಯ ಸಿದ್ಧರಾಮೇಶ್ವರ ಶರಣರು ಮತ್ತು ರಬಕವಿಯ ಗುರು ಸಿದ್ಧೇಶ್ವರ ಶ್ರೀಗಳು ಮಾತನಾಡಿ,ಈ ಪ್ರಪಂಚ ಪರಮಾತ್ಮನಿಂದ ಸೃಷ್ಟಿಯಾಗಿದ್ದು, ಇಲ್ಲಿ ನಾವೆಲ್ಲರೂ ನೆಪ, ಯಾವೂದೂ ನಮ್ಮದಲ್ಲ,  ನಿರ್ಧಿಷ್ಟ ಸಮಯದ ನಂತರ ನಾವು ತೊಲಗಲೇ ಬೇಕು.ಆದ್ದರಿಂದ ದೇವರು ದಯಪಾಲಿಸಿದರಲ್ಲಿಯೇ ತೃಪ್ತಿ ಹೊಂದಿ ಮೋಕ್ಷದ ಕಡೆಗೆ ಮುಖ ಮಾಡಬೇಕು ಮತ್ತು ಸತ್ಸಂಗವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಾವು ಬದುಕಿನುದ್ದಕ್ಕೂ ನೆಮ್ಮದಿಯಿಂದ ಕಾಲ ಕಳೆಯಬಹುದು ಎಂದರು. 

              ಈ ಸೌಹಾರ್ದ ವೇದಿಕೆಯಲ್ಲಿ ಚಿಮ್ಮಡ ಪ್ರಭು ಸ್ವಾಮೀಜಿ, ಕಜ್ಜಿಡೋಣಿಯ ಕೃಷ್ಣಾನಂದ ಸ್ವಾಮಿಜಿ, ಮೌಲಾನಾ ಝಕ್ರಿಯಾಸಾಹಬ್ ಮಾತನಾಡಿ, ಜಗತ್ತಿನ ಸಕಲ ಜೀವರಾಶಿಗಳನ್ನು ಸೃಷ್ಟಿಸಿದ ಆ ಪರಮಾತ್ಮನಿಗೆ ನಾವೆಲ್ಲ ವಿಧೇಯರಾಗಿ, ಪರಸ್ಪರ ಸೌಹಾರ್ದ ನೆಲೆಯಲ್ಲಿ ಬದುಕು ಸಾಗಿಸಬೇಕು.ಮನಸ್ಸಿನ ತಾಮಸ ಕಳೆಯಲು ಶಿವನಾಮ ಸ್ಮರಣೆ ಒಂದೆ ದಾರಿ ಇದ್ದು ಇದನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಖಂಡಿತ ನೆಮ್ಮದಿ ಸಿಗುತ್ತದೆ ಎಂದರು.ಮಹಾಲಿಂಗಪುರ ಪಟ್ಟಣದಲ್ಲಿ 9 ದಿವಸಗಳ ವರೆಗೆ ನಡೆಯುವ ಈ ಪ್ರವಚನದ ಸಾರವನ್ನು ತಮ್ಮ ಹೃದಯ ಕಮಲದಲ್ಲಿ ಇಳಿಸಿಕ್ಕೊಳ್ಳಿ ಎಂದರು. 

              ಇನ್ನೂಳಿದಂತೆ ವೇದಿಕೆ ಮೇಲೆ ಚಿಮ್ಮಡ ಜನಾರ್ಧನ ಮಹಾರಾಜರು, ಹೊಸೂರ ಪರ್ಮಾನಂದ ಶ್ರೀಗಳು, ಬೆಳಗಲಿ ಸದಾಶಿವ ಗುರುಜಿ, ಶನಿವಾರ ಸಂಜೆ 6 ಗಂಟೆಗೆ ವೇದಿಕೆ ಮೇಲಿದ್ದ ಎಲ್ಲ ಮಹಾನ್ ಚೇತನಗಳಿಗೆ ಆಯೋಜಕರು ಹುಗುಚ್ಚ ನೀಡಿ ಸ್ವಾಗತಿಸಿದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಳಗಾನೂರ ಶಿವಶಾಂತ ಶರಣ ಭಜನಾ ತಂಡದವರಿಂದ ವಚನ ಸಾಹಿತ್ಯ ಮತ್ತು ವೈರಾಗ್ಯ ಗೀತೆಗಳ ಭಜನೆ ನಡೆಯಿತು. ಅಮಲಜೇರಿಯ ಜ್ಞಾನ ಮಯಾನಂದ ಶ್ರೀಗಳು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮ ಆಯೋಜಕರು, ಪುರ ಪ್ರಮುಖರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ ಪ್ರವಚನಾಸಕ್ತರು ಉಪಸ್ಥಿತರಿದ್ದರು.