ಲೋಕದರ್ಶನ ವರದಿ
ಗಂಗಾವತಿ ೦೮: ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ, ಗ್ರಾಮ ಪಂಚಾಯತ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಈ ವೇಳೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಭೀಮಣ್ಣ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕು, ಕಡ್ಡಾಯವಾಗಿ ಎಲ್ಲರೂ ಎಪ್ರೀಲ್ 23ರಂದು ಮತದಾನದಿಂದ ದೂರ ಉಳಿದುಕೊಳ್ಳದೆ ಮತದಾನ ಮಾಡಬೇಕು. ಸುವರ್ಣ ಕರ್ನಾಟಕ ಪತ್ರಕರ್ತರ ಸಂಘವು ಜಾಗೃತಿ ಮೂಡಿಸುವ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಕಾರ್ಯವೆಂದರು.
ಸುವರ್ಣ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ರಮೇಶ ಪವಾರ ಮಾತನಾಡಿ, ನಮ್ಮೇಲ್ಲರ ಮೇಲೆ ಸಾಮಾಜಿಕ ಜವಾಬ್ದಾರಿಯಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುವಂತೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಿದೆ. ಮತದಾನ ಮಾಡಲು ಸರ್ಕಾರ ಸಾಕಷ್ಟು ಸೌಲಭ್ಯವನ್ನು ಒದಗಿಸಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡಬೇಕಾಗಿದೆ ಎಂದರು.
ಇದಕ್ಕೂ ಸಂಘದ ನೂತನ ಸದಸ್ಯರಿಗೆ ಗುರುತಿನ ಕಾರ್ಡ ವಿತರಣೆಯನ್ನು ಮಾಡುವ ಮೂಲಕ ಸಂಘಕ್ಕೆ ಸ್ವಾಗತಿಸಿದರು.
ಈ ವೇಳೆಯಲ್ಲಿ ಸುವರ್ಣ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಕಲ್ಗುಡಿ, ದೇವದಾನಂ, ಜಿಲ್ಲಾ ಖಜಾಂಚಿ ಸಂಗಮೇಶ ಹೇಮಗುಡ್ಡ, ತಾಲೂಕಾಧ್ಯಕ್ಷ ವೆಂಕಟೇಶ ಮಾಂತಾ, ತಾಲೂಕಾ ಕಾರ್ಯದರ್ಶಿ ಮಂಜುನಾಥ ಹೋಸ್ಕೇರಿ, ಕನಕಗಿರಿ ಕಾರಟಗಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ನಾಯಕ, ರಮೇಶ ಕೋಟಿ, ಕಾಶೀಂ ಗಡಾದ, ಪುರುಷೋತ್ತಮ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಎಸ್.ಕೆ ದಾನಿಕೈ, ಇಮಾಮ ಸಿದ್ದಾಪೂರ ಸೇರಿದಂತೆ ಇನ್ನಿತರಿದ್ದರು.