ಗಂಗಾಧರ ಬಂಡಾನವರ ಸೂತ್ರಧಾರ ವ್ಯಕ್ತಿಗತ ಚಿತ್ರಕಲಾ ಪ್ರದರ್ಶನ

Gangadhar Bandana's personal art exhibition

ಗಂಗಾಧರ ಬಂಡಾನವರ ಸೂತ್ರಧಾರ  ವ್ಯಕ್ತಿಗತ ಚಿತ್ರಕಲಾ ಪ್ರದರ್ಶನ

ಕೊಪ್ಪಳ  12: ಇತ್ತಿಚೀಗೆ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಕೊಪ್ಪಳ ಜಿಲ್ಲೆಯ ಯುವ ಕಲಾವಿಧ ಗಂಗಾಧರ ಈರಣ್ಣ ಬಂಡಾನವರ ಸೂತ್ರಧಾರ ವ್ಯಕ್ತಿಗತ ಚಿತ್ರ​‍್ರದರ್ಶನವು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಯಿತು.   ಮುಖ್ಯ ಆಹ್ವಾನಿತರಾಗಿ ಹೆಸರಾಂತ ಹಿರಿಯ ಕಲಾವಿಧರ ಭಾಗವಹಿಸಿದ್ದರು ಈ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದ  ಪ.ಸ.ಕುಮಾರ ಅಧ್ಯಕ್ಷರು ಚಿತ್ರಕಲಾ ಪರಿಷತ್, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಬೆಂಗಳೂರು ಮಾತನಾಡಿ ಸುತ್ರಧಾರ ಎಂಬ ಕಲ್ಪನೆಯಲ್ಲಿ ಚಿತ್ರ ಕಲಾವಿದ ಗಂಗಾಧರ ರಾಮಾಯಣದ ಆಯ್ದಭಾಗಗಳನ್ನು ತನ್ನ ವಿವೇಚನೆಯ ಮೂಲಕ ಕಲಾ ಪರಿಕಲ್ಪನೆ ಕೊಟ್ಟಿದ್ದು ಐತಿಹಾಸಿಕ ವಿಷಯವಾಗಿದೆ ಜೊತೆಗೆ ಕಲಿಯುಗದ ಮನುಷ್ಯನ ಯೋಚನೆ ಆಲೋಚನೆಗೆ ವಿಮರ್ಶೆ ಕೊಟ್ಟಿದ್ದು ಪೂರಕವಾಗಿದೆ, ಇದು ಮುಂದುವರೆದ ಭಾರತದ ಪ್ರತಿರೂಪವೆಂದು ತಿಳಿಸಿದರು, ಉತ್ತರ ಕರ್ನಾಟಕದ ಪ್ರತಿಭೆ ಈ ರೀತಿಯ ಪ್ರದರ್ಶನ ಏರಿ​‍್ಡಸಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಚಿತ್ರಕಲಾ ಸೇವೆಯಲ್ಲಿ ಬಹುಎತ್ತರಕ್ಕೆ ಬೆಳೆಯುತ್ತಾನೆ ಎಂದು ಹೇಳಿದರು.  

  ಮುಖ್ಯ ಅತಿಥಿಗಳಾದ  ಗುರುದಾಸ್ ಶೇಣಿ ಹಿರಿಯ ಕಲಾವಿಧರು ಮಾತನಾಡಿ ಭಾರತದ ಇತಿಹಾಸದಲ್ಲಿ ಪುರಾತನವಾದ ರಾಮಾಯಣವನ್ನು ಒಬ್ಬ ಕಲಾವಿಧ ವಿವಿಧ ದೃಷ್ಠಿಕೋನದಿಂದ ಹಾಗೂ ವಿವಿಧ ಆಯಾಮಗಳಿಂದ ವಿಮರ್ಶೆ ಕೈಗೊಂಡು ಯಾವುದೇ ರೀತಿಯ ಭಾವನೆಗಳಿಗೆ ಘಾಸಿಗೊಳಿಸದೆ ಯುವಜನತೆಗೆ ಯೋಚನಾ ಶಕ್ತಿಯನ್ನು ವೃದ್ಧಿಸುವಲ್ಲಿ ಕಲಾವಿಧ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾನೆ, ಭಾರತೀಯ ಸಂಸ್ಕೃತಿಕ ಪರಂಪರೆಗೆ ಹೆಚ್ಚಿನ ರೀತಿಯಲ್ಲಿ ಪ್ರಾಮುಖ್ಯತೆಯನ್ನು ಕೊಟ್ಟಿದ್ದು ಭಾರತೀಯರನ್ನು ಪ್ರಪಂಚದ ಎಲ್ಲಾ ಜನತೆಗೆ ಕಲೆಯ ಪ್ರಾಮುಖ್ಯತೆ ತಿಳಿಸುವುದರ ಮೂಲಕ ಪೌರಾಣಿಕ ಪುರುಷರಿಗೆ ತಂದತಹ ಗೌರವ ಅಂದಿನ ಜೀವನ ಶೈಲಿಗೆ ಕೊಟ್ಟಂತಹ ಮನ್ನಣೆಯಾಗಿದೆ, ಈ ಸೂತ್ರಧಾರ ಕಾರ್ಯಕ್ರಮ ಕಲಾಪ್ರದರ್ಶನವು ಅಂತರಾಷ್ಟೀಯ ಮಟ್ಟದಲ್ಲಿ ಹೆಸರುವಾಸಿಯಾಗುವ ಅರ್ಹತೆಯನ್ನು ಗಂಗಾಧರ ಬಂಡಾನವರ ರವರು ಪಡೆದಿದ್ದಾರೆ ಎಂದರು.  

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೀನಾ ಭಟ್ಟ, ನಿರ್ದೇಶಕರು ಹೀನಾ ಭಟ್ಟ ಆರ್ಟ ಪೌಂಡೇಶನ್ ರವರು ಮಾತನಾಡಿ ಸುತ್ರಧಾರ ಎಂಬ ಶಿರ್ಷಿಕೆಯಲ್ಲಿ ಮೂಡಿಬಂದಂತಹ ಪ್ರಭುದ್ದ ಕಾದಂಬರಿ ರಾಮಾಯಣವನ್ನು ವಿವಿಧ ಆಯಾಮಗಳಿಂದ ಕಲಾ ರೂಪ ನೀಡಿದ್ದು ವಿಶೇಷ ಎಂದು ತಿಳಿಸಿದರು, ಕಲಾವಿಧ ಕೇವಲ ಚಿತ್ರಗಳನ್ನು ಬಿಡಿಸುವುದಿಲ್ಲ ಅದರಲ್ಲಿ ತನ್ನ ವೈಜ್ಞಾನಿಕ ಭಾವನೆ ಚಿಂತನಾ ಮಂತನವನ್ನು ಚಿತ್ರಿಸುತ್ತಾನೆ, ಕಲಾಕೃತಿಗಳನ್ನು ನೋಡುವ ಜನತೆಯಲ್ಲಿಯೂ ಕೂಡಾ ಜಾಗೃತಾ ಸೂಪ್ತ ಮನಸ್ಸನ್ನು ವಿಮರ್ಶೆಗೆ ಒಳಪಡಿಸಿ ಸಾರ್ಥಕ ಭಾವನೆಯನ್ನು ಚಿತ್ರಕಲಾವಿಧ ಹೊಂದುತ್ತಾನೆ, ಇದೇ ಕಲಾವಿಧನ ಶ್ರೇಷ್ಠ ಮನಸ್ಸು ಎಂದು ಕಲಾವಿಧರನ್ನು ಉದ್ದೇಶಿಸಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ಮೂಡಿಬರಲಿ ನಾವು ಕಲಾವಿಧನ ಜೊತೆಗೆ ಸದಾನಿಂತು ಬೆಂಬಲ ಕೊಡುತ್ತೇವೆ ಎಂದರು ಕಲ್ಯಾಣ ಕರ್ನಾಟಕ ಪ್ರತಿಭೆ ಇಂದು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಸಂಪಾದಿಸುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ ವ್ಯಕ್ತಿಗತ ಕಲಾಪ್ರದರ್ಶನ ನಿರ್ವಹಿಸಿದ ಗಂಗಾಧರನ ಉಜ್ವಲ ಭವಿಷ್ಯ ಇನ್ನು ಎತ್ತರಕ್ಕೆ ಬೆಳೆಯಲಿ ಇದೂ ಆತನಿಗೆ ಮಾತ್ರವಲ್ಲ ಆತನ ಜೊತೆಗೆ ಸದಾ ಬೆಂಬಲವಾಗಿ ನಿಂತಿರುವ ಆತನ ಸ್ನೇಹಿತರ ಒಕ್ಕೂಟ ಸಹ ಕಲಾವಿದರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿಧರಾದ  ಕೃಷ್ಣಶೆಟ್ಟಿ, ಕಿರಣ ಭಗಾಡೆ, ಪ್ರದೀಪ ಡಿ.ಎಮ್, ಅಲ್ಕ ಅರಪಲಾನಿ, ಯುವ ಕಲಾವಿಧರು ಉಪಸ್ಥಿತರಿದ್ದರು.