ಗಜೇಂದ್ರಗಡ -ಸಿಂಧೂರ ಚೆಕ್ಸ ಸೀರೆಯ ಉತ್ಪಾದನೆ
Gajendragad - Sindoor Check Saree Production
ಗಜೇಂದ್ರಗಡ -ಸಿಂಧೂರ ಚೆಕ್ಸ ಸೀರೆಯ ಉತ್ಪಾದನೆ
ಗದಗ 05 : ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣವು ಐತಿಹಾಸಿಕವಾಗಿ ಪರಿಶುದ್ಧ ಹತ್ತಿ ನೂಲಿನಿಂದ ತಯಾರಸಿದ “ಪಟ್ಟೆದ ಅಂಚು ಸೀರೆ”ಗಳ ಉತ್ಪಾದನೆಗೆ ಪ್ರಸಿದ್ಧಿ ಪಡೆದಿರುತ್ತದೆ. ಈ “ಪಟ್ಟೆದ ಅಂಚು ಸೀರೆ”ಗೆ 2025ರಲ್ಲಿ ಭಾರತ ಸರ್ಕಾರದಿಂದ ಉಜಠಡಿಚಿಠಿಛಿಚಿಟ ಋಜಛಿಚಿಣಠ ಖಜರಣಡಿಥಿ ಅಡಿ “ಭೌಗೋಳಿಕ ಹಕ್ಕು ಸಾಮ್ಯ” ಮಾನ್ಯತೆ ನೀಡಲಾಗಿರುತ್ತದೆ. ಪ್ರಸ್ತುತ ಗಜೇಂದ್ರಗಡ ಪಟ್ಟಣದಲ್ಲಿ ಸುಮಾರು 400 ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ, ಇದರಲ್ಲಿ ಸುಮಾರು 200 ಕೈಮಗ್ಗಗಳು “ಪಟ್ಟೆದ ಅಂಚು ಸೀರೆ” ಗಳ ಉತ್ಪಾದನೆ ಮಾಡುತ್ತಿವೆ.
ತೇಜಪ್ಪ ವಿ ಚಿನ್ನೂರ ಇವರು ಸುಮಾರು 40 ವರ್ಷಗಳಿಂದ ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿ ತೊಡಗಿರುತ್ತಾರೆ. ಇವರು ದಿ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ನಿ. ಗಜೇಂದ್ರಗಡ ಸಂಘದಿಂದ ಕಚ್ಚಾಮಾಲು ಪಡೆದು ನಿಯಮಿತವಾಗಿ “ಪಟ್ಟೆದ ಅಂಚಿನ ಸೀರೆ“ ಗಳನ್ನು ಉತ್ಪಾದಿಸುತ್ತಿದ್ದಾರೆ. ಈ ನೇಕಾರರು ಪ್ರಸ್ತುತ “ಪಟ್ಟದ ಅಂಚು ಸೀರೆ”ಯ ತಯಾರಿಕೆಯಲ್ಲಿ ಉಪಯೋಗಿಸುವ ನೈಸರ್ಗಿಕ ಅಂಟಿನಿಂದ ತಯಾರಿಸಿದ ವಾರ್ಫಿನ ಮೇಲೆ ಕೊಂಡಿ ತಂತ್ರಜ್ಞಾನ ಹಾಗೂ ಬುಟ್ಟಾ ತಿರುಕಿ ಮಾಡಕೊಂಡು “ಸಿಂಧೂರ ಚೆಕ್ಸ ಸೀರೆ”ಯನ್ನು ತಯಾರಿಸಿರುತ್ತಾರೆ. ಸದರಿ “ಸಿಂಧೂರ ಚೆಕ್ಸ ಸೀರೆ”ಗೆ 2025-26ನೇ ಸಾಲಿನ ಹತ್ತಿ ವಿಭಾಗದಲ್ಲಿ ರಾಜ್ಯ ಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿ ದೊರೆತಿರುತ್ತದೆ. ಸದರಿ ನೇಕಾರರಿಗೆ ದಿನಾಂಕ:07-08-2025ರಂದು ರಾಜ್ಯ ಸರ್ಕಾರಿ ನೌಕರರ ಭವನ ಕಬ್ಬನ್ ಪಾರ್ಕ ಬೆಂಗಳೂರನಲ್ಲಿ ಜರುಗುವ 11 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ರೂ.20,000/-ಗಳ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಗುವುದು. ಹಾಗೂ ಕೇಂದ್ರ ಸರ್ಕಾರದಿಂದ ಇವರಿಗೆ 60ವರ್ಷ ಆದ ನಂತರದಿಂದ ಅಂತ್ಯ ಕಾಲದವರೆಗೆ ಮಾಸಿಕ ರೂ.8000/-ಗಳ ವೃದ್ಯಾಪ್ತ ವೇತನ ನೀಡಲಾಗುವುದು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 