ಗದಗ ಉಸ್ತುವಾರಿ ಸಚಿವರಿಂದ 2 ದಿನ ಜಿಲ್ಲಾ ಪ್ರವಾಸ

ಗದಗ ಉಸ್ತುವಾರಿ ಸಚಿವರಿಂದ 2 ದಿನ ಜಿಲ್ಲಾ ಪ್ರವಾಸ  Gadag in-charge minister on 2-day district tour

ಗದಗ ಉಸ್ತುವಾರಿ ಸಚಿವರಿಂದ 2 ದಿನ ಜಿಲ್ಲಾ ಪ್ರವಾಸ  

ಗದಗ 17:  ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು ಅಕ್ಟೋಬರ್ 18 ಮತ್ತು 19 ರಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.     ಅಕ್ಟೋಬರ್ 18 ರಂದು ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯಿಂದ ರಸ್ತೆ ಮೂಲಕ ಹೊರಟು ಗದುಗಿಗೆ ಆಗಮಿಸುವರು. ಸಂಜೆ 4.30 ಗಂಟೆಗೆ ಗದಗ ಜಿಲ್ಲಾಡಳಿತ ಭವನದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 6.30 ಗಂಟೆಗೆ ಗದಗಿನಿಂದ ಕೊಪ್ಪಳಕ್ಕೆ ಪ್ರಯಾಣ ಮಾಡುವರು. ಅದೇ ದಿನ ರಾತ್ರಿ 9.30 ಗಂಟೆಗೆ ಗದುಗಿಗೆ ಆಗಮಿಸಿ ರಾತ್ರಿ 10 ಗಂಟೆಗೆ ನಗರದ ಪಂ.ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಗದಗ ಬೆಂಗಳೂರು ನೂತನ ಬಸ್ ಸೌಲಭ್ಯದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಮತ್ತು ವಾಸ್ತವ್ಯ ಮಾಡುವರು.   

ಅಕ್ಟೋಬರ್ 19 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಶಂಕರ ಶಿವಾಚಾರ್ಯ ಕುರಹಿನಶೆಟ್ಟಿ ಸಮುದಾಯ ಭವನ ಟ್ರಸ್ಟ್‌ ಬೇಟಗೇರಿಯಲ್ಲಿ ಗದಗ ಜಿಲ್ಲಾ ನೇಕಾರ ಕುರಹಿನಶೆಟ್ಟಿ ಸಂಘದ ತಾಲೂಕಾ ಘಟಕದ ಉದ್ಘಾಟನಾ ಹಾಗೂ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಸಭೆಯಲ್ಲಿ ಭಾಗವಹಿಸುವರು.   ಬೆಳಿಗ್ಗೆ 11.00 ಘಂಟೆಗೆ ಗದಗ ಜಿಲ್ಲಾ ಚಲವಾದಿ ಮಹಾಸಭಾದಿಂದ ನೂತನವಾಗಿ ವಿಧಾನ ಪರಿಷತ್ತಿಗೆ ನೇಮಕವಾದ ಎಫ್‌ಎಚ್ ಜಕ್ಕಪ್ಪನವರ ಇವರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.00 ಗಂಟೆಗೆ ಗದಗ ರಾಜೀವ ಗಾಂಧಿ ನಗರದ ನ್ಯೂ ಚರ್ಚ ಬಿಲ್ಡಿಂಗ್ ನಲ್ಲಿ  ಕಲ್ವಾರಿ ಪುಲ್ ಕಾಸ್ಟಲ್ ಅಸೆಂಬ್ಲಿ ಚರ್ಚ್‌ ಇದರ 30ನೇ ವರ್ಷದ ವಾರ್ಷಿಕೋತ್ಸವದ ಹಾಗೂ ಪ್ರತಿಭಾ ಪುರುಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು.   ಸಂಜೆ 5 ಗಂಟೆಗೆ ಮುಳುಗುಂದದಲ್ಲಿ ದೋಣಿ ವಿಹಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಸಂಜೆ 6.30 ಘಂಟೆಗೆ  ಗದಗ  ಕಾಟನ್ ಸೇಲ್ ಸೊಸ್ಯೆಟಿ ಆವರಣದಲ್ಲಿ ನಗರ ಸಭೆಯ ಶೇ 18, ಎಸ್‌ಎಫ್‌ಸಿ ಶೇ 15 ಹಾಗೂ ನಗರಸಭೆಯ ಅನುದಾನದಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು  ಎಂದು ಪ್ರಕಟಣೆ ತಿಳಿಸಿದೆ.