ಗದಗ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ ಬಿ ಅಸೂಟಿ ನೇತೃತ್ವದಲ್ಲಿ ಪಂಚ ಗ್ಯಾರಂಟಿ ಪ್ರಗತಿ ಪರೀಶೀಲನೆ

ಗದಗ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ ಬಿ ಅಸೂಟಿ ನೇತೃತ್ವದಲ್ಲಿ ಪಂಚ ಗ್ಯಾರಂಟಿ ಪ್ರಗತಿ ಪರೀಶೀಲನೆ Gadag District Guarantee Implementation Authority District President B.B. Asuti led a review of the

ಗದಗ 14 :-  ಇದೇ ದಿನಾಂಕ 12/02/2026 ರ ಗುರುವಾರ ದಂದು  ಮುಂಡರಗಿ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಬಿ.ಅಸೂಟಿ ಯವರ ನೇತೃತ್ವದಲ್ಲಿ ಮುಂಡರಗಿ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾ ಸಮಿತಿಯ ಅಧ್ಯಕ್ಷರಾದ ಡಿ.ಡಿ. ಮುರನಾಳ,  ಉಪಾಧ್ಯಕ್ಷರಾದ ಹೇಮಂತ್ ಪಾಟೀಲ್‌.  ಮುಂಡರಗಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಾರ್ಯಕಾರಣಿ ಸಮಿತಿಯ ಸರ್ವ ಸದಸ್ಯರ ಸಂಯುಕ್ತಾಶ್ರಯದಲ್ಲಿ ಮುಂಡರಗಿ ತಾಲೂಕಾ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಐತಿಹಾಸಿಕ  ಪಂಚ ಗ್ಯಾರಂಟಿ ಯೋಜನೆಗಳಾದ ಗ್ರಹಲಕ್ಷ್ಮೀ ಯೋಜನೆ, ಗ್ರಹಜ್ಯೋತಿ, ಅನ್ನಭಾಗ್ಯ ಯುವ ನಿಧಿ ಹಾಗೂ ಶಕ್ತಿ ಯೋಜನೆಗಳನ್ನು ಸಮರ​‍್ಕವಾಗಿ  ಅನುಷ್ಠಾನಗೊಳಿಸುವ ಕುರಿತು ಮುಂಡರಗಿ ತಾಲೂಕಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ.ಬಿ. ಅಸೂಟಿಯವರು ಪಂಚ ಗ್ಯಾರಂಟಿ ಯೋಜನೆಗಳ ಸಮರ​‍್ಕ ಅನುಷ್ಠಾನದ ಕುರಿತು ಪ್ರಗತಿ ಪರೀಶೀಲನೆ ಗೈದರು. 

ಜಾಗತಿಕ ಧಾಖಲೆಯೊಂದಿಗೆ ಇತಿಹಾಸದ ಪುಟ ಸೇರಿದಂತಹ ಸಮಸ್ತ ನಾಗರಿಕರ ಜನಸ್ಪಂಧನೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ಪ್ರತಿಶತ ನೂರರಷ್ಟು ಸಾಧನೆಯ ಗುರಿಯನ್ನು ತಲುಪುವಂತಾಗಲು ಸಂಬಂಧಪಟ್ಟ ಅಧಿಕಾರಿ ವೃಂದದವರ ಪಾತ್ರ ಪ್ರಾಮುಖ್ಯವಾಗಿದೆ.ಆದುದರಿಂದ ಸಮಸ್ತ ಅಧಿಕಾರಿಗಳು ತಾಲೂಕಿನಾದ್ಯೇಠ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಲು ಅಗತ್ಯವಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಗ್ರಹಲಕ್ಷ್ಮೀ ಯೋಜನೆಯ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಆದಾಯ ತೆರಿಗೆ, ಜಿ ಎಸ್ ಟಿ ಅಡಕ ಹಾಗೂ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಗೆ ಯೋಜನೆಯ ಸದುಪಯೋಗ ಹಾಗೂ ಮೃತರಾದವರ ಕುರಿತು ಕಾಲಕಾಲಕ್ಕೆ ಅಗತ್ಯಪರೀಶೀಲನೆ ಮಾಡಬೇಕು. ಹಸಿದವರಿಗೆ ಅನ್ನ ನೀಡುವ ಅನ್ನ ಭಾಗ್ಯ ಯೋಜನೆಯ ದುರುಪಯೋಗ ಆಗದಂತೆ ಬಡವರ ಧಾನ್ಯ ಕಾಳ್ ಸಂತೆಯಲ್ಲಿ ಮಾರಾಟವಾಗದಂತೆ ಕ್ರಮವಹಿಸಿ, ನಿರುದ್ಯೋಗಿಗಳಿಗೆ ಆರ್ಥಿಕ ಬೆಂಬಲ ನೀಡುವ ಯುವ ನಿಧಿ ಯೋಜನೆಯ ಅನುಷ್ಠಾನ ಸುರಳಿತವಾಗಲಿ ಹಾಗೂ ಗ್ರಹ ಜ್ಯೋತಿ ಯೋಜನೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 

ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಸದಸ್ಯರಾದ , ಪುಲಕೇಶಗೌಡ. ಪಾಟೀಲ್ ಮುಂಡರಗಿ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ  ಸದಸ್ಯರಾದ ಜೈಲಾನಸಾಬ್ ಕೆ ವಡ್ಡಟ್ಟಿ,ನಾಗರಾಜ ಸಜ್ಜನ, ವಿಶ್ವನಾಥ ಪಾಟೀಲ್, ರಾಮಣ್ಣ ಮಾಳಗಿಮನಿ, ಮುತ್ತುರಾಜ್ ಮಾರುತಿ ಹೊಸಮನಿ, ಗಣೇಶ ರಾಠೋಡ್, ಶ್ರೀಮತಿ ಗೀತಾ ಕೆ ನಾಡಗೌಡರ, ಕಾಶಪ್ಪ ಹೊನ್ನೂರ,  ನಿಂಗಪ್ಪ ಎಮ್ ಮಜ್ಜಿಗೆ, ಸುರೇಶ ಮೇಗಿಲಮನಿ, ಶರಣಪ್ಪ ಮಲ್ಲಾಪುರ, ಉಮೇಶ ಕಲಾಲ್, ಶ್ರೀಮತಿ ಭುವನೇಶ್ವರಿ ಕಲ್ಲಕುಟಿಗ, ಮಹೇಶಕುಮಾರ ದ್ರಾಕ್ಷಿ,  ಹಾಗೂ ಸಮಸ್ತ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು. 


Progress Review Meeting Guarantee Schemes Panch Guarantee Schemes