ಲೋಕದರ್ಶನ ವರದಿ
ಗದಗ 17: ಇಂದಿನ ದಿನಮಾನಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸದೇ ಇರವ ಕ್ಷೇತ್ರವಿಲ್ಲ ಎಂದು ಕವಿಯಿತ್ರಿ ಮಂಜುಳಾ ವೆಂಕಟೇಶ ಅವರು ಹೇಳಿದರು.
ನಗರದ ಕರಿಯಮ್ಮದೇವಿ ಮಹಿಳಾ ಮಂಡಳವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಗವಂತನು ಮಹಿಳೆಗೆ ಅತ್ಯದ್ಭುತವಾದ ಶಕ್ತಿಯನ್ನು ನೀಡಿದ್ದಾನೆ.ಒಂದೇ ಸಮಯದಲ್ಲಿ ಹಲವಾರು ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುವ ಕ್ಷಮತೆಯನ್ನು ಹೊಂದಿದ್ದಾಳೆ. ಹೀಗಾಗಿ ಪುರುಷರಿಗಿಂತ ಮಹಿಳೆಯು ಯಾವ ವಿಧದಲ್ಲೂ ಈಗ ಹಿಂದೆ ಇಲ್ಲ ಆದರೂ ಸಾಧಿಸ ಬೇಕಾದುದು ಇನ್ನೂ ಬಹಳಷ್ಟು ಇದೆ ಎಂದು ಹೇಳಿದರು.
ಮಹಿಳಾ ಮಂಡಳದ ಕಾರ್ಯದಶರ್ಿ ಅನಿತಾ ಜಕಬಾಳ ಅವರು ಹೆಣ್ಣು-ಗಂಡು ಎಂಬ ತಾರತಮ್ಯ ಮನೆಗಳಲ್ಲಿಯೇ ಆರಂಭವಾಗುತ್ತದೆ. ಈ ರೀತಿ ತಾರತಮ್ಯ ನೀತಿ ತೊಡೆದು ಹಾಕುವ ಶಕ್ತಿ ನಮ್ಮಲ್ಲಿಯೆ ಇದೆ. ಹೆಣ್ಣು-ಗಂಡು ಸಮಾನರು ಎಂಬ ಭಾವನೆಯನ್ನು ಮಕ್ಕಳಿರುವಾಗಲೆ ಹುಟ್ಟು ಹಾಕಿದಲ್ಲಿ ಸುಂದರ ಸಮಾಜ ನಿಮರ್ಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೇಣುಕಾ ಕೇಸರಿಯವರು ಮಹಿಳೆಯರು ಸಂಘಟಿತರಾಗಿ ಸಾಗಿದಲ್ಲಿ ಸಾಧನೆ ಇನ್ನಷ್ಟು ಸುಲಭಗೊಳ್ಳುತ್ತದೆ. ಆದ್ದರಿಂದ ನಮ್ಮ ಈ ಸಂಘಟನೆಯು ಇನ್ನಷ್ಟು ಬಲಗೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮವು ಪುಷ್ಪಾ ಬಂಡಾರಿ, ಗಂಗಾ ಚಕ್ರಣ್ಣವರ, ಪುಷ್ಪಾ ಚಿಕ್ಕಣ್ಣವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಿವಲೀಲಾ ಅಡವಿಯವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪದ್ಮಾ ಓಲೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಾ ಹೊನಕೇರಿ ವಂದಿಸಿದರು. ಜಯಲಕ್ಷ್ಮಿ ಡೊಳ್ಳಿನರವರು ಕಾರ್ಯಕ್ರಮವನ್ನು ನಿರೂಪಿಸಿದರು.