ಗದಗ: ಆಮಿಷಕ್ಕೊಳಗಾಗದೇ ತಪ್ಪದೇ ಮತ ಚಲಾವಣೆಗೆ ಪ್ರೇರೇಪಿಸಿ ಚವ್ಹಾಣ ಹೇಳಿಕೆ

ಗದಗ 14: ಶಾಲಾ ಕಾಲೇಜುಗಳಲ್ಲಿ ಸಾಕ್ಷರತ ಕ್ಲಬ್ಗಳ ಸಂಚಾಲಕರು ವಿದ್ಯಾರ್ಥಿ ಗಳು, ಪಾಲಕರು, ತಪ್ಪದೇ ಮತದಾನ ಮಾಡುವ ರೀತಿಯಲ್ಲಿ ಪ್ರೇರಣಾತ್ಮಕ ಕಾರ್ಯ ನಿರ್ವಹಿಸಲು ಜಿ. ಪಂ ಸಿಇಒ ಹಾಗೂ ಗದಗ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ನುಡಿದರು. 

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಿ.ಆರ್.ಸಿ ಕೇಂದ್ರದಲ್ಲಿ  ವ್ಯಾಪ್ತಿಯ ಶಾಲೆಗಳ ಸಾಕ್ಷರತಾ ಕ್ಲಬ್ಗಳ ಸಂಚಾಲಕರಿಗೆ ಜಿಲ್ಲಾ ಸ್ವೀಪ್ ಸಮಿತಿ   ಮತದಾನ ಜಾಗೃತಿ ಕುರಿತಂತೆ  ಆಯೋಜಿಸಿದ ಎರಡು ದಿನಗಳ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಶಾಲೆಗಳಲ್ಲಿ ಸ್ಥಾಪಿತಗೊಂಡಿರುವ ಸಾಕ್ಷರತಾ ಕ್ಲಬ್ಗಳು ಈ ಬಾರಿ ಹೆಚ್ಚಿನ ಆಸಕ್ತಿವಹಿಸಿ ಕೆಲಸ ಮಾಡಿ ಲೋಕಸಭಾ ಚುನಾವಣೆಯಲ್ಲಿ  ಜಿಲ್ಲೆಯ ಮತದಾನದ  ಪ್ರಮಾಣ ಹೆಚ್ಚಳವಾಗುವಂತೆ ಕಾರ್ಯನಿರ್ವಹಿಸಬೇಕು. ಮತದಾನ ಪಟ್ಟಿಯಲ್ಲಿ ಇರುವವರು ಯಾವುದೇ ಆಮಿಷಕ್ಕೊಳಗಾಗದೇ ತಪ್ಪದೇ ಮತ ಚಲಾಯಿಸುವಂತೆ ಪ್ರೇರೇಪಿಸುವಲ್ಲಿ ಸಾಕ್ಷ್ಷರತಾ ಕ್ಲಬ್ಗಳ ಪ್ರಯತ್ನ ಬಹು ಮುಖ್ಯ ಎಂದು ಚವ್ಹಾಣ ನುಡಿದರು.

ಜಿ. ಪಂ ಯೋಜನಾ ನಿದರ್ೇಶಕ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದಶರ್ಿಗಳಾದ ಟಿ. ದಿನೇಶ, ಗದಗ ಗ್ರಾಮೀಣ ಕ್ಷೇತ್ರ್ರಶಿಕ್ಷಣಾಧಿಕಾರಿ ಎಂ.ಎ.ರಡ್ಠೇರ, ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಎಸ್. ಕೆ. ಹವಾಲ್ದಾರ ಉಪಸ್ಥಿತರಿದ್ದರು.

ಗದಗ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳ ಬಿ.ಆರ್.ಸಿ ಕೇಂದ್ರದ ವಿವೇಕಾನಂದ ಪಾಟೀಲ, ಹಾಗೂ ನದಾಫ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ  ಭಾಗವಹಿಸಿ ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ರೀತಿ ಮತದಾರರ ಜಾಗೃತಿ ಕುರಿತಂತೆ ಶಾಲಾ ಸಾಕ್ಷರತಾ ಕ್ಲಬ್ಗಳು ನಿರ್ವಹಿಸಬೇಕಾದ ಪಾತ್ರದ  ಕುರಿತು ತರಬೇತಿ ನೀಡಿದರು.