ಲೋಕದರ್ಶನ ವರದಿ
ಹಾವೇರಿ12: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯಕ್ಕೆ ಮೈಸೂರು ಸಂಸ್ಥಾನದ ಮಹಾರಾಣಿ ರಾಜಮಾತೆ ಮಾತೋಶ್ರೀ ಪ್ರಮೋದಾದೇವಿ ಶ್ರೀಕಂಠದತ್ತ ವಡೆಯರ್ರವರು ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್ರವರು ಪ್ರಸ್ತುತ ದಿನಮಾನಗಳಲ್ಲಿ ಶೈಕ್ಷಣಿಕ ರಂಗ ಅತೀ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಹೊಂದುತ್ತಿದ್ದು, ಈ ಹಿಂದೆ ಹಳೇ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀಮನ್ ನಾಲ್ವಡಿ ಕೃಷ್ಣರಾಜ ವಡೆಯರ್ರವರು ಮೈಸೂರು ಸಂಸ್ಥಾನದ ಆಶ್ರಯದಲ್ಲಿ ಹಲವಾರು ವಿದ್ಯಾಕೇಂದ್ರಗಳನ್ನು ಸಂಸ್ಥಾಪಿಸಿ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸಿದರೆ.
ಈ ಭಾಗದಲ್ಲಿ ಕನರ್ಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯು ಹಲವಾರು ತ್ಯಾಗ-ದಾನ ಜೀವಿಗಳ ಸಹಕಾರ, ಸಹಾಯದಿಂದ ಶಿಕ್ಷಣ ಸಂಸ್ಥೆಯೊಂದನ್ನು ತೆರೆದು ಒಂದರಿಂದ ಇನ್ನೂರಕ್ಕೂ ಅಧಿಕ ಕೇಂದ್ರಗಳನ್ನು ರಾಷ್ಟ್ರದಲ್ಲಿ ಅಷ್ಟೇ ಅಲ್ಲದೇ ಹೊರ ರಾಷ್ಟ್ರಗಳಲ್ಲೂ ಸ್ಥಾಪನೆ ಮಾಡಿ ಶಿಕ್ಷಣ ಪ್ರಸಾರ ಕಾರ್ಯ ಕೈಗೊಂಡಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ.
ಈ ನಿಟ್ಟಿನಲ್ಲಿ ಸಂಸ್ಥೆಯ ಕಾಯರ್ಾಧ್ಯಕ್ಷರಾದ ಡಾ|| ಪ್ರಭಾಕರ ಕೋರೆ ಹಾಗೂ ಎಲ್ಲ ಕಾರ್ಯಕಾರಿ ಮಂಡಳಿಯವರ ಸೇವಾ ಮನೋಭಾವನೆ ಮೆಚ್ಚುವಂತಹದ್ದಾಗಿದೆ. ಸಂತೋಷದ ವಿಷಯವೆಂದರೆ ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶ್ರೀಮಾನ್ ಗುದ್ಲೆಪ್ಪ ಹಳ್ಳಿಕೇರಿಯವರ ಹಾಗೂ ಕೆ. ಎಮ್. ನೆಲವಿಗಿಯಂತಹ ಅನೇಕ ಗಣ್ಯರ ಶಿಕ್ಷಣ ಪ್ರೇಮದ ಫಲವಾಗಿ ಕೆ.ಎಲ್.ಇ. ಸಂಸ್ಥೆಯ ಅಧೀನ ಜಿ. ಹೆಚ್. ಕಾಲೇಜು ಸ್ಥಾಪನೆಯಾಗಿರುವುದು. ಅಲ್ಲದೇ ಈ ಕಾಲೇಜು ಕಟ್ಟಡದ ಉದ್ಘಾಟನೆಗೋಸ್ಕರವಾಗಿ 1964 ರಲ್ಲಿ ಅಂದಿನ ಕನರ್ಾಟಕ ಸಿಂಹಾಸನಾಧೀಶ್ವರರೂ ಮತ್ತು ರಾಜ್ಯಪಾಲರಾಗಿದ್ದ ಶ್ರೀಮನ್ ಮಹಾರಾಜ ಜಯಚಾಮರಾಜ ವಡೆಯರ್ ಬಹದ್ದೂರ್ರವರು ಆಗಮಿಸಿದ್ದು ಇತಿಹಾಸಕ್ಕೆ ಬುನಾದಿಯಾಗಿದೆ. 56 ವರ್ಷಗಳ ನಂತರ ಮತ್ತೆ ನಾವು ಭೇಟಿ ನೀಡುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಕಾಲೇಜಿನ ವಿಜ್ಞಾನ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿತೆಗಳನ್ನು ವೀಕ್ಷಿಸಿದರು. ಅನಂತರ ಭೋಜನ ಸ್ವೀಕರಿಸಿದ ರಾಜಮಾತೆಯವರು ಉತ್ತರ ಕನರ್ಾಟಕ ವಿಶೇಷ ಅಡುಗೆ ರೊಟ್ಟಿ, ಚಪಾತಿ, ಹಣ್ಣಗಾಯಿ ಪಲ್ಯ, ಡೊಣ್ಣಗಾಯಿ ಪಲ್ಯ, ಹಿಟ್ಟಿನ ಪಲ್ಯ, ಕರಿಹಿಂಡಿ, ಕೆಂಪು ಚಟ್ನಿ, ಕರಚಿಕಾಯಿ, ಹೋಳಿಗೆ, ಬೇಸನ್ನುಂಡೆ, ಗೋಧಿಹುಗ್ಗಿ, ಪಚಡಿ, ಕಿಚಡಿ, ಮೊಸರನ್ನ, ಅನ್ನ-ಸಾರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೆ.ಎಲ್.ಇ. ಸಂಸ್ಥೆಯ ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ ಉಪಸ್ಥಿತರಿದ್ದು ಮಹಾರಾಣಿಯವರನ್ನು ಹೂಗುಚ್ಛ ನೀಡುವುದರ ಮೂಲಕ ಸ್ವಾಗತಿಸಿದರು. ಪದವಿ ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ, ಪದವಿಪೂರ್ವ ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ ಹಾಗೂ ರಾಜವಂಶಸ್ಥರಾದ ಸುಧಾಮಣಿ, ನಾಗರತ್ನಮ್ಮನವರು, ಬೆಂಗಳೂರಿನ ನಾಗಾಜರ್ುನ ಗ್ರೂಪ್ಸ್ನ ಸಿಇಒ ಸುನಂದ ಗಿರೀಶ ಹಾಗೂ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.