ಪ್ರಾಥಮಿಕ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ

ಲೋಕದರ್ಶನ ವರದಿ

ರಾಯಬಾಗ 21: ವಿದ್ಯಾಥರ್ಿಗಳ ಜೀವನ ಉಜ್ವಲವಾಗಲು ಶಿಕ್ಷಕರ ಮತ್ತು ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ. ವಿದ್ಯಾಥರ್ಿ, ಶಿಕ್ಷಕ ಮತ್ತು ಪಾಲಕರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ವಿದ್ಯಾಥರ್ಿ ತನ್ನ ಜೀವನದಲ್ಲಿ ಯಶಸ್ಸು ಆಗುತ್ತಾನೆಂದು ಚಿಕ್ಕೋಡಿ ಕೆಎಲ್ಇಸಿಇಟಿ ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ಹೇಳಿದರು. 

ದಿ.20ರಂದು ಸಾಯಂಕಾಲ ಪಟ್ಟಣದ ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾವೀರ ವಸತಿ ಆಂಗ್ಲ ಮಾಧ್ಯಮ ಶಾಲೆ ವಾಷರ್ಿಕ ಸ್ನೇಹ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳ ಮೇಲ ಅತೀಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಅವರನ್ನು ಸಮಾಜದಲ್ಲಿ ಒಳ್ಳೆ ನಾಗರೀಕನ್ನಾಗಿ ಬೆಳಸಬೇಕೆಂದು ಸೂಚಿಸಿದರು.  

ಸಂಸ್ಥೆ ಅಧ್ಯಕ್ಷ ಡಿ.ಎಮ್.ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಸುಮತಿ ಶಿಂದೆ, ಸತ್ಯಕುಮಾರ ಬಿರಾಜ, ಶೀತಲ ಬೇಡಕಿಹಾಳೆ, ಸಂಜು ಬಡೋರೆ, ಡಾ.ಅಜೀತ ನಾಯಿಕ, ಚಂದ್ರಕಾಂತ ಶೆಟ್ಟಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ಪಾಲಕರು ಮತ್ತು ವಿದ್ಯಾಥರ್ಿಗಳು ಇದ್ದರು.