ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ
Free textbook distribution to children as part of school commencement celebrations
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ
ಕೊಪ್ಪಳ 30: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸರಕಾರದ ಆದೇಶದಂತೆ ಭರ್ಜರಿಯಾಗಿ ಶಾಲಾ ಪ್ರಾರಂಭೋತ್ಸವನ್ನು ಆಚರಿಸಲಾಯಿತು. ಶಾಲೆಗೆ ಆಗಮಿಸುವ ಮಕ್ಕಳನ್ನು ಡ್ರಮ್ ಸೇಟ್,ಡೊಳ್ಳುಗಳ ಮೂಲಕ ಅವರನ್ನು ಬರ ಮಾಡಿಕೊಳ್ಳಲಾಯಿತು.ಮಕ್ಕಳಿಗೆ ಬಲೂನ್ ಹಾಗೂ ಡ್ರಮ್ ನೀಡುವುದರ ಜೊತೆಯಲ್ಲಿ ಈ ಶೈಕ್ಷಣಿಕ ವರ್ಷವು ಮಕ್ಕಳ ಬಾಳಿನಲ್ಲಿ ಬೆಳಕು ತರಲಿ ಎಂಬ ಉದ್ದೇಶದಿಂದ ಎಲ್ಲಾ ಮಕ್ಕಳಿಗೆ ಶಾಲೆಯ ಶಿಕ್ಷಕರು ಆರತಿ ಬೆಳೆಗಿದರು. ಶಾಲೆಯನ್ನು ತಳಿರು-ತೋರಣಗಳಿಂದ ಅಲಂಕಾರ ಮಾಡಲಾಗಿತು. ಮಕ್ಕಳಿಗೆ ಸರಕಾದ ವತಿಯಿಂದ ನೀಡಲಾಗುವ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಯಿತು ಹಾಗೂ ಸಿಹಿ ಊಟದೊಂದಿಗೆ ಬಿಸಿಯೂಟ ಪ್ರಾರಂಭ ಮಾಡಲಾಯಿತು. ಈ ಸಮಯದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ, ಸದಸ್ಯರಾದ ಮೈಲಪ್ಪ ಕಂಬದಮನಿ, ಬಸವರಾಜ ಮತ್ತೂರು, ರಾಜಾಸಾಬ ಹಾದರಮಗ್ಗಿ, ಬಸವರಾಜ ಕರಿಕಾರ, ಗವಿಸಿದ್ದಮ್ಮ ಹಿರೇಮಠ, ಗ್ರಾ.ಪಂ.ಸದಸ್ಯರಾದ ದಾದಾಪೀರ ಮಂಡಲಗೇರಿ, ಮಹ್ಮದರಫಿ ಹಿರೇಮಸೂತಿ, ಮಾಜಿ ಸದಸ್ಯರಾದ ಶಿವಣ್ಣ ಗ್ಯಾನಪ್ಪನವರ, ಸಿ.ಆರ್.ಪಿ.ಹನುಮಂತಪ್ಪ ಕುರಿ, ಮುಖ್ಯೋಪಾಧ್ಯಾಯರಾದ ಬೀರ್ಪ ಅಂಡಗಿ, ಶಿಕ್ಷಕರಾದ ಭಾರತಿ ಹವಳೆ, ಜ್ಯೋತಿಲಕ್ಷ್ಮೀ, ಗಂಗಮ್ಮ, ಮಮತಾ, ಹನುಮಂತವ್ವ, ಮೇರಾಜುನ್ನಿಸಾ, ಹನುಮಂತಪ್ಪ, ಗೀತಾ ಕುರಿ, ರುಬೀಯಾಬೆಗಂ ಮುಂತಾದವರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 