ನಾಳೆ ಅಸ್ತಮಾ ರೋಗಿಗಳಿಗೆ ಉಚಿತ ಓಷಧ ವಿತರಣೆ
Free medicine distribution to asthma patients tomorrow
ನಾಳೆ ಅಸ್ತಮಾ ರೋಗಿಗಳಿಗೆ ಉಚಿತ ಓಷಧ ವಿತರಣೆ
ಯಲಬುರ್ಗಾ 06: ಪಟ್ಟಣದ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ ನಾಳೆ ಭಾನುವಾರ ಬೆಳಗ್ಗೆ 10-00 ಗಂಟೆಗೆ ಸಾವಿರಾರು ಅಸ್ತಮಾ ರೋಗಿಗಳಿಗೆ ಶ್ರೀಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಉಚಿತ ಓಷಧ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.ಬೆಂಗಳೂರು, ರೋಣ, ಕುಷ್ಟಗಿ ಸೇರಿದಂತೆ ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ರೋಗಿಗಳಿಗೆ ಉಚಿತ ಓಷಧವನ್ನು ಪಡೆದುಕೊಳ್ಳಲು ಆಗಮಿಸಲಿದ್ದಾರೆ ಎಂದರು.ಸುಮಾರು 10-15 ವರ್ಷದಿಂದಲೂ ಓಷಧಿ ನೀಡಲಾಗುತ್ತಿದೆ. ಮೃಗಶಿರ ಮಳೆ ಕೂಡುವ ವೇಳೆ ನೀಡುವ ಈ ಓಷಧವನ್ನು ಸತತ ಮೂರ್ನಾಲ್ಕು ವರ್ಷ ಸೇವಿಸಿದರೆ ಅಸ್ತಮಾ ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಸ್ತಮಾ ರೋಗಿಗಳು ಪ್ರತಿವರ್ಷ ಇಲ್ಲಿಗೆ ಬರುತ್ತಾರೆ. ಈ ವರ್ಷಕೂಡ ಹೆಚ್ಚು ಜನತೆ ಬರುವ ಭರವಸೆ ಇದೆ ಎಂದು ಪತ್ರಕರ್ತರಿಗೆ ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 