ಕಾಕಿ ಜನ ಸೇವಾ ಸಂಸ್ಥೆಯಿಂದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಆಯೋಜನೆ

ಕಾಕಿ ಜನ ಸೇವಾ ಸಂಸ್ಥೆಯಿಂದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಆಯೋಜನೆ Free interfaith mass wedding organized by Kaki Jana Seva Sanstha

                        ರಾಣೇಬೆನ್ನೂರು  2 : ಪ್ರತಿ ವರ್ಷದಂತೆ ಈ ವರ್ಷವೂ ಸಹ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಆಯೋಜಿಸಲಾಗಿದೆ ಎಂದು ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ, ಶ್ರೀನಿವಾಸ್ ಕಾಕಿ ಹೇಳಿದರು. ಅವರು ಸೋಮವಾರ, ಇಲ್ಲಿನ ಕಾಕಿಗಲ್ಲಿಯ ಅವರ ಗ್ರಹ ಸಭಾದಲ್ಲಿ ಏರಿ​‍್ಡಸಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮಾಜದಲ್ಲಿ ಇದ್ದವರು, ಇಲ್ಲದವರು, ಬಡವರು, ಇದ್ದೇ ಇರುತ್ತಾರೆ. ಹಾಕಿ ಜನ ಸೇವಾ ಸಂಸ್ಥೆ ತನ್ನ ಪರಂಪರಾಗತ ಯೋಜನೆಯಲ್ಲಿ, ತಂದೆ ತಾಯಿಯವರು ಹಾಕಿಕೊಟ್ಟ ದಾನ ಧರ್ಮದ ರೂಪದಲ್ಲಿ ಇಂತಹ ಸಾಮೂಹಿಕ ಕಾರ್ಯಕ್ರಮಗಳು ಆಯೋಜಿಸುತ್ತಾ ಬಂದಿರುವುದು ಕಾಕಿ ಮನೆತನದ ಸಂಪ್ರದಾಯವಾಗಿದೆ ಎಂದರು.  ಈಗಾಗಲೇ ಸಾಮೂಹಿಕ ವಿವಾಹ ಯೋಜನೆ ಸಿದ್ಧವಾಗಿದ್ದು ಡಿಸೆಂಬರ್, 7,2025 ರಂದು ಸಂಜೆ 7 ಗಂಟೆಗೆ ಜೆಸಿ ಅರಮನೆ ಆವರಣದಿಂದ, ವಧು-ವರರ ಬೃಹತ್ ಮೆರವಣಿಗೆ ನಡೆಯುವುದು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಹುಣಸಿಕಟ್ಟಿ ರಸ್ತೆ, ಜೆ ಸಿ ಅರಮನೆ ತಲುಪುವುದು.

                        ಸೋಮವಾರ 8 ರಂದು ಮುಂಜಾನೆ 11: ವಧು-ವರರ ಕುಟುಂಬದವರ ಧರ್ಮದ ಅನುಸಾರವಾಗಿ ಸಾಮೋಹಿಕ ವಿವಾಹ ಮಂಗಲ ಕಾರ್ಯ ಜರುಗಲಿದೆ ಎಂದರು. ಇದೇ ಸಂದರ್ಭದಲ್ಲಿ ವಿವಾಹನೊಂದಾಯಿತ ವಧು ವರರಿಗೆ ರೇಷ್ಮೆ ಸೀರೆ, ಕಾಲುಂಗುರ ಪಂಚೆ ಶರ್ಟು ಮತ್ತಿತರ ಉಡುಗೊರೆಗಳನ್ನು ವಿತರಿಸಿ ಶುಭ ಹಾರೈಸಿದರು. ಕಾರ್ತಿಕೋತ್ಸವ :- ಡಿಸೆಂಬರ್ 15ರಂದು ಸೋಮವಾರ ದಿವಸ ಸಾಯಂಕಾಲ 8: ಗಂಟೆಗೆ  ನೀಲಕಂಠೇಶ್ವರ ಸ್ವಾಮಿಯ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವವೂ ನಡೆಯುವುದು. ಸ್ವಾಮಿಯ ಭಜನೆ, ನಂತರ ಸಾರ್ವಜನಿಕವಾಗಿ ಅನ್ನಸಂತರೆ​‍್ಣ ಜರಗುವುದು. ಈ ಎಲ್ಲಾ ಕಾರ್ಯಕ್ರಮದ ಯಶಸ್ವಿಗಾಗಿ ಕುರುಹಿನ ಶೆಟ್ಟಿ ಸೇವಾ ಸಮಾಜ ಸಂಘ, ಕಾಕಿ ಜನ ಸೇವಾ ಸಂಸ್ಥೆ, ಕುರುಹಿನಶೆಟ್ಟಿ ಸಮಾಜದ ಬಾಂಧವರು ತುಂಬು  ಸಹಕಾರ ನೀಡಿದ್ದು, ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀನಿವಾಶ್ ಕಾಕಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಶಿವಾನಂದ ಸಾಲಗೇರಿ, ರೂಪಾ ಶ್ರೀನಿವಾಸ ಕಾಕಿ, ಮಂಜುನಾಥ ಹೊಸಪೇಟೆ, ಶಿವಾನಂದ ಬಗಾದಿ, ಡಾ.  ದೀಪಾ ರೂಪಾಲಿ ಮತ್ತಿತರರು ಇದ್ದರು