ಉಚಿತ ಆರೋಗ್ಯ ತಪಾಸಣಾ ಶಿಬಿರ

ಲೋಕದರ್ಶನ ವರದಿ

ಹಾವೇರಿ, 16: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಸಿಂದಗಿ ಶಾಂತವೀರೇಶ್ವರ ಆಯುವರ್ೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಯೂಥ್ ರೆಡ್ ಕ್ರಾಸ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 

 ಶಿಬಿರದಲ್ಲಿ ವೈದ್ಯರಾದ ಡಾ|| ಸಂಗಮೇಶ, ಡಾ|| ಪಾಟೀಲ, ಡಾ|| ಹಿರೇಮಠ, ಡಾ|| ಜಿ. ಕೆ. ಕೋವಳ್ಳಿಮಠ ಡಾ|| ಎಮ್. ಎಸ್. ಯರಗೊಪ್ಪ, ರೆಡ್ಕ್ರಾಸ್ ಅಧಿಕಾರಿ ಪ್ರೊ. ಹೆಚ್. ಐ. ಖತೀಬ, ಪ್ರೊ. ಜಿ. ಕೆ. ಮಂಕಣಿ ಹಾಗೂ ಆಯುವೇದ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ 60 ಮಿಕ್ಕಿ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಬಿ.ಪಿ. ಶುಗರ್, ರಕ್ತ ಗುಂಪು, ಹಿಮೊಗ್ಲೋಬಿನ್ ಮೊದಲಾದ ತಪಾಸಣೆ ಮಾಡಲಾಯಿತು.